ಚಿತ್ರದುರ್ಗ(ಕರ್ನಾಟಕ ವಾರ್ತೆ).ನ.23: ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ನ.28 ರಂದು ಚಿತ್ರದುರ್ಗ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿAದ ವಿಕಲಚೇತನರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 18 ರಿಂದ 45 ವರ್ಷದ ಒಳಗಿರುವರು ಪಾಲ್ಗೊಳ್ಳಬಹುದು. ಅಂಧರಿಗೆ ಮಡಿಕೆ ಹೊಡಿಯುವುದು ಹಾಗೂ ಕೇನ್ ರೇಸ್, ಶ್ರವಣ ದೋಷವುಳ್ಳವರಿಗೆ 100 ಮೀ. ಓಟ, ಗುಂಡು ಎಸೆತ ಜಾವಲಿನ್ ಥ್ರೋ, ದೈಹಿಕ ವಿಕಲಚೇತನರಿಗೆ 100 ಮೀ.ಓಟ, ಗುಂಡು ಎಸೆತ, ಜಾವಲಿನ್ ಥ್ರೋ, ಹಾಗೂ ಬುದ್ಧಿಮಾಂದ್ಯರಿಗೆ 100 ಮೀ. ಓಟ, ಬಕೆಟ್ನಲ್ಲಿ ರಿಂಗ್ ಎಸೆತ, ಮ್ಯೂಜಿಕಲ್ ಚೇರ್, ದೃಷ್ಟಿದೋಷ ಮತ್ತು ದೈಹಿಕ ವಿಕಲಚೇತನರಿಗೆ ಮತ್ತು ಬುದ್ದಿಮಾಂದ್ಯರಿಗೆ ಜಾನಪದ, ಭಾವ ಹಾಗೂ ಭಕ್ತಿಗೀತೆ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತ ವಿಶೇಷಚೇತನರು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಪಾಲ್ಗೊಳ್ಳುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ.ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours