ಗ್ಯಾರಂಟಿ ಯೋಜನೆ ಜಾರಿಯಿಂದ ಸಾಮಾಜಿಕ ಬದಲಾವಣೆ: ಸಚಿವ ಡಿ‌.ಸುಧಾಕರ್

 

 

 

 

ಚಿತ್ರದುರ್ಗ:  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದಲ್ಲಿ ಬಹುದೊಡ್ಡ ಸಾಮಾಜಿಕ ಬದಲಾವಣೆ ಮೂಡಲಿದೆ. ಬಡ ಜನರ ಶಕ್ತಿ ಹೆಚ್ಚಲಿದೆ. ಜನರೋದ್ಧಾರವೇ ದೇಶದ ನಿಜವಾದ ಉದ್ಧಾರವಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಅವರು, ಗೌರವ ರಕ್ಷೆ ಸ್ವೀಕರಿಸಿ ನಂತರ ತಮ್ಮ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಸರ್ವರಿಗೂ ಸಮಾನ ಅವಕಾಶಗಳು ದೊರೆತರೆ ದೇಶದ ಪ್ರಗತಿ ಸಾಧ್ಯ. ಸರ್ಕಾರದ ಐದು ಯೋಜನೆಗಳ ಜಾರಿ ಪವಾಡವೇನೂ ಅಲ್ಲ. ರಾಜ್ಯದ ಸಂಪತ್ತನ್ನು ಹಂಚಿ, ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಪ್ರಯತ್ನವಾಗಿದೆ. ನಿಜವಾದ ಸರ್ಕಾರ ಜನಕಲ್ಯಾಣದ ಬಗ್ಗೆ ಚಿಂತಿಸುತ್ತದೆ. ಸರ್ಕಾರದ ಈ ಗ್ಯಾರಂಟಿ ಯೋಜನೆಗಳನ್ನು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನದ ಮೂಲಕ ಚಿಂತಿಸುವುದು ಸೂಕ್ತ ಎನಿಸುತ್ತದೆ ಎಂದರು.
5 ಜನಕಲ್ಯಾಣ ಯೋಜನೆಗಳಲ್ಲಿ ಈಗಾಗಲೇ 4 ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಗೆ ತಲುಪಿ ಸಾಕಾರಗೊಳಿಸಲಾಗಿದೆ. ಜಿಲ್ಲೆಯಲ್ಲಿ ಸಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ.  ಮಹಿಳೆಯರು ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವ “ಶಕ್ತಿ ಯೋಜನೆ”ಯಿಂದ ಮಹಿಳಾ ಸಬಲೀಕರಣದತ್ತ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಸಾಮಾಜಿಕ, ಆರ್ಥಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಅವಕಾಶವಂಚಿತರಾಗಿದ್ದ ಮಹಿಳೆಯರಿಗೆ ಈ ಮೂಲಕ ಶಕ್ತಿ ತುಂಬುವ ಮತ್ತು ಅವರ ಕನಸುಗಳಿಗೆ  ಪ್ರೋತ್ಸಾಹಿಸುವ  ಕೆಲಸವನ್ನು ಸರ್ಕಾರ ಮಾಡಿದೆ.  ಜಿಲ್ಲೆಯಿಂದ 30,15,041 (ಸುಮಾರು 30 ಲಕ್ಷಕ್ಕೂ ಅಧಿಕ) ಮಹಿಳೆಯರು ಯೋಜನೆಯ ಸದುಪಯೋಗ ಪಡಿಸಿಕೊಂಡು, ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಈ ಮೂಲಕ ನಿಗಮಕ್ಕೆ 11. 44 ಲಕ್ಷ ರೂ. ಗಳ ಮೊತ್ತದ ಪ್ರಯಾಣ ಕೈಗೊಂಡು, ಮಹಿಳಾ ಮಣಿಗಳು ನಿಗಮಕ್ಕೆ ಸರಾಸರಿ ಪ್ರತಿ ದಿನಕ್ಕೆ ರೂ.10.00 ಲಕ್ಷಗಳ ಆದಾಯವನ್ನು ಕೊಟ್ಟಿರುತ್ತಾರೆ.“ಗೃಹ ಲಕ್ಷ್ಮೀ” ಯೋಜನೆಯಡಿ ಜಿಲ್ಲೆಯಲ್ಲಿ ಶೇ.86ಕ್ಕೂ ಅಧಿಕ ಮಹಿಳೆಯರು ನೊಂದಣಿ ಮಾಡಿಕೊಂಡಿದ್ದಾರೆ. ಇದರ ಸಂಖ್ಯೆ 3,47,624 ಆಗಿದೆ. ಆಗಸ್ಟ್ 27ರಂದು  ಫಲಾನುಭವಿಗಳಿಗೆ ಯೋಜನೆಯ ಮೊತ್ತ ತಲಾ ರೂ.2,000/-ಅನ್ನು ಕುಟುಂಬದ ಮಹಿಳಾ ಮುಖ್ಯಸ್ಥೆಗೆ ವರ್ಗಾಯಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿರುತ್ತದೆ.“ಅನ್ನ ಭಾಗ್ಯ” ಯೋಜನೆಯಡಿ ಪ್ರತಿ ಬಿ.ಪಿ.ಎಲ್. ಕುಟುಂಬದ ಫಲಾನುಭವಿಗೆ ತಲಾ 5 ಕೆ.ಜಿಯಂತೆ ಆಹಾರ ಧಾನ್ಯವನ್ನು, ಉಳಿದ 5 ಕೆ.ಜಿಗೆ ರೂ.170/- ನೀಡಲಾಗಿದೆ. ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 3,19,813 ಫಲಾನುಭವಿಗಳಿಗೆ ಆಹಾರ ಧಾನ್ಯದೊಂದಿಗೆ ಅವರ ಖಾತೆಗೆ ಸುಮಾರು ರೂ.18.43 ಕೋಟಿಗಳನ್ನು ಸರ್ಕಾರದಿಂದ ಸಂದಾಯ ಮಾಡಲಾಗಿದೆ. “ಗೃಹಜ್ಯೋತಿ” ಯೋಜನೆಯು ಈಗಾಗಲೇ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತಲುಪಿದ್ದು  ಈ ತಿಂಗಳಿನಿಂದಲೇ ಝೀರೋ ವಿದ್ಯುತ್ ಬಿಲ್ಲನ್ನು ಸಹ ಎಲ್ಲಾ ಫಲಾನುಭವಿಗಳಿಗೆ ನೀಡಲಾಗಿರುತ್ತದೆ. ಒಟ್ಟಾರೆಯಾಗಿ ನಾಲ್ಕು ಭಾಗ್ಯಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಣಾಮಕಾರಿಯಾದ ರೀತಿಯಲ್ಲಿ ಲೋಕ ಕಲ್ಯಾಣದ ರೂಪದಲ್ಲಿ ಜನತೆಗೆ ಪ್ರಾಪ್ತವಾಗಿರುವುದು. ಒಂದು ರೀತಿಯಲ್ಲಿ ಹೊಂಗಿರಣಗಳು ಮೂಡಿದಂತಾಗಿದೆ.
ಈ ದಿನದಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಪುತ್ರರನ್ನು ನೆನಪಿಸಿಕೊಳ್ಳುವ ದಿನವಾಗಿದೆ.  ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜಿಲ್ಲೆಯ ಕೊಡುಗೆ ಸ್ಮರಿಸಿದ ಅವರು  ಜಿಲ್ಲೆಯ ತುರುವನೂರಿಗೂ ಗಾಂಧೀಜಿಯವರಿಗೂ ವಿಶೇಷ ಸಂಬಂದವಿತ್ತು, ಇಲ್ಲಿ ಮನೆ ಮನೆಗೂ ಗಾಂಧಿಯವರೆ ಪ್ರೇರಣೆಯಾಗಿದ್ದರು.  ಹಿಂದೊಮ್ಮೆ ಬ್ರಿಟೀಷರ ಆಳ್ವಿಕೆಯಲ್ಲಿದ್ದ ಭಾರತ ಸ್ವಾತಂತ್ರ್ಯಾ ನಂತರ ಇಂದು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ – ಅದು ಆರ್ಥಿಕತೆ ಇರಲಿ, ವಿಜ್ಞಾನ-ತಂತ್ರಜ್ಞಾನವಿರಲಿ, ಸೇನಾ ಬಲವಿರಲಿ, ಜಾಗತಿಕ ಶಾಂತಿಯ ವಿಷಯ ಇರಲಿ. ಒಂದೊಮ್ಮೆ ಅಸಮಾನತೆ, ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಕಂಡ ನೆಲದಲ್ಲಿ ಆರ್ಥಿಕತೆ, ಸಮಾನತೆ, ರಾಷ್ಟ್ರೀಯತೆ, ಸಮಗ್ರತೆಯ ಅಡಿಪಾಯದಲ್ಲಿ ಬಲಿಷ್ಠ ಭಾರತವು ನಿರ್ಮಾಣವಾಗಿದೆ. ಹಾಗೆಯೇ ಅಭಿವೃದ್ಧಿ ಎಂದರೆ ಕೇವಲ ನಗರಗಳ ಅಭಿವೃದ್ಧಿಯಲ್ಲ ಎನ್ನುವುದು ನಮ್ಮ ಸರ್ಕಾರದ ಕನಸು ಸ್ವಾತಂತ್ರ್ಯದ ನಿಜವಾದ ಪರಿಕಲ್ಪನೆ ದಿಲ್ಲಿ ಜತೆ ಹಳ್ಳಿಯ ಅಭಿವೃದ್ಧಿ ಎನ್ನುವುದು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.  ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ಹೋರಾಟವನ್ನು ಈ ದಿನ ನಾವೆಲ್ಲರೂ ಸ್ಮರಿಸಬೇಕಾಗಿರುತ್ತದೆ ಎಂದರು.  ಬಳಿಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಯೋಜನೆಗಳ ಬಗ್ಗೆ ಹೊರತಂದಿರುವ “ಪ್ರಗತಿಪರ ಅಭಿವೃದ್ಧಿಗಾಗಿ- ನುಡಿದಂತೆ ನಡೆದಿದ್ದೇವೆ” ಎಂಬ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್, ಜಿಲ್ಲಾ ಪೆÇೀಲಿಸ್ ಅಧೀಕ್ಷಕ ಕೆ.ಪರಶುರಾಮ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ಜನ ಪ್ರತಿನಿಧಿಗಳು, ವಿವಿಧ ಇಲಾಖೆಗಳ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.
ಆಕರ್ಷಕ ಪಥ ಸಂಚಲನ:
**********ಭಾರತ ಸ್ವಾತಂತ್ರ್ಯ ದಿನಾಚರಣೆಯ ಪಥ ಸಂಚಲನದಲ್ಲಿ ಡಿಎಆರ್ ಆರ್‍ಪಿಐ ಎಸ್.ಎಸ್.ಯುವರಾಜ ಅವರು ಕವಾಯತು ಸಮಾದೇಶಕರಾಗಿ ಕಾರ್ಯನಿರ್ವಹಿಸಿದರು.
ಸಶಸ್ತ್ರ ಮೀಸಲು ಪಡೆ, ನಾಗರೀಕ ಪೆÇಲೀಸ್, ಗೃಹ ರಕ್ಷಕದಳ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ ತಂಡ, ಎನ್‍ಸಿಸಿ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡ, ಪೋಲಿಸ್ ಬ್ಯಾಂಡ್ ತಂಡದಿಂದ ಆಕರ್ಷಕ ಪಥ ಸಂಚಲನ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಗೌರವ ವಂದನೆ ಸ್ವೀಕರಿಸಿದರು.
ದೇಶ ಪ್ರೇಮ ಅನಾವರಣಗೊಳಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು:
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ತರುವಾಯ ಮಕ್ಕಳ ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ದೇಶ ಪ್ರೇಮ ಅನಾವರಣಗೊಳಿಸಿದವು.
ನಗರದ ಸರ್ಕಾರಿ ಕೋಟೆ ಫ್ರೌಢಶಾಲೆಯ ಸುಮಾರು 150 ವಿದ್ಯಾರ್ಥಿಗಳು ಒನ್ ಟು ತ್ರೀ ನಮ್ಮ ಬಾವುಟದ ಬಣ್ಣ ತ್ರೀ… ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಹಾಗೂ ಭಗತ್‍ಸಿಂಗ್ ಜೀವನ, ಹೋರಾಟ ಹಾಗೂ ಬಲಿದಾನದ ಕುರಿತಾದ ದೃಶ್ಯ ರೂಪಕ ನೋಡುಗರ ಮನಸೆಳೆಯಿತು.
ವಾಸವಿ ವಿದ್ಯಾಸಂಸ್ಥೆಯ 300 ಮಕ್ಕಳು ಸರ್ವಧರ್ಮ ಸಮನ್ವಯತೆ ಹಾಗೂ ಭಾವೈಕ್ಯತೆ ಸಾರುವ ನೃತ್ಯ ರೂಪಕ ಪ್ರದರ್ಶಿಸಿದರು. ವಿದ್ಯಾವಿಕಾಸ ವಿದ್ಯಾಸಂಸ್ಥೆಯ 700ಕ್ಕೂ ವಿದ್ಯಾರ್ಥಿಗಳು ಮಹಾತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಸಾಧನೆ ಹಾಗೂ ಸಾರೆ ಜಹಾಸೆ ಅಚ್ಛಾ ನೃತ್ಯ ರೂಪಕ ಪ್ರದರ್ಶಿಸಿದ್ದು, ಗಣ್ಯರ ಹಾಗೂ ಸಾರ್ವಜನಿಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
[t4b-ticker]

You May Also Like

More From Author

+ There are no comments

Add yours