ಲಾಟರಿ ಮೂಲಕ ಎಲ್ಲಾ ನಿಗಮಗಳ ಫಲಾನುಭವಿಗಳ ಆಯ್ಕೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು  ರಾಜ್ಯ ಸರ್ಕಾರದ ವಿವಿಧ ನಿಗಮದಿಂದ ಯೋಜನೆಗಳ ಫಲಾನುಭವಿಗಳನ್ನು  ಲಾಟರಿ ಮೂಲಕ ಆಯ್ಕೆಯನ್ನು  ಮಾಡಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಿಗಮಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.
ದೇವರಾಜು ಅರಸು ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ  ಸೇರಿ ಎಲ್ಲಾ ನಿಗಮಗಳ ಯೋಜನೆಯ ಪಟ್ಟಿಯ ಪ್ರಕಾರವಾಗಿ  ವಿಂಗಡನೆ  ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಆಯ್ಕೆಗೊಳ್ಳುತ್ತಾರೆ ಸರ್ಕಾರದ ಯೋಜನೆಯ ಮುಖಾಂತರ ಬಡವರ , ಹಿಂದುಳಿದವರ ಮೇಲೆತ್ತುವ ಕೆಲಸ ಮಾಡಲು ಯೋಜನೆ ತಂದಿದೆ. ಆದರೆ ಸರ್ಕಾರದ ಗುರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ  ಅರ್ಜಿಗಳು ಬಂದಿದ್ದವು.ಇದರಿಂದ ಜನರಿಗೆ ಆಯ್ಕೆ ಪ್ರಕ್ರಿಯೆ ಜನರ ಮುಂದೆಯೇ ಲಾಟರಿಯನ್ನು ನಾವು ಸಹ ತೆಗೆಯದೇ ಮಕ್ಕಳ ಕೈಯಲ್ಲಿ  ಚೀಟಿ ತೆಗೆಸುವ ಮೂಲಕ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಲ್ಲಾ ನಿಗಮದ ಅಧಿಕಾರಿಗಳು ಮತ್ತು ಫಲಾನುಭವಿಗಳು ಇದ್ದರು.
[t4b-ticker]

You May Also Like

More From Author

+ There are no comments

Add yours