ಮಕ್ಕಳಲ್ಲಿ ದೇಶ ಪ್ರೇಮವನ್ನು ಬೆಳೆಸುವಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಸಹಕಾರಿ : ಜಿ.ಎಸ್. ಅನಿತ್ ಕುಮಾರ್

 

 

 

 

ಚಿತ್ರದುರ್ಗ:   ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಲ್ಲಿ ಶಿಸ್ತು ಸೇವಾಮನೋಭಾವನೆ ಮೂಡಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕವಾಗಿದೆ. ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದು ಯುವಮುಖಂಡರಾದ ಜಿ ಎಸ್ ಅನಿತ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢ ಶಾಲೆಯಲ್ಲಿ ಜಾನ್ ಮೈನ್ಸ್ ರವರು ನೀಡಿದ ಉಚಿತ ಸ್ಕೌಟ್ ಅಂಡ್ ಗೈಡ್ಸ್ ಸಮವಸ್ತ್ರವನ್ನು ವಿತರಿಸಿ ಮಾತನಾಡಿದರು

ಮಕ್ಕಳಲ್ಲಿ ಸದಾಚಾರ, ಸಂತಸದಿಂದ ಕೂಡಿ ಬಾಳುವ ಗುಣವನ್ನು ಬೆಳೆಸುವ ಉಜ್ವಲವಾದ ಒಂದು ಸಂಸ್ಥೆ ಎಂದರೆ ಸ್ಕೌಟ್ ಅಂಡ್ ಗೈಡ್ಸ್. ಹೆಚ್ಚೆಚ್ಚು ಮಕ್ಕಳು ಇದರಲ್ಲಿ ಸೇರಿ ನಿಮ್ಮ ಭವಿಷ್ಯವನ್ನು ಉಜ್ವಲವಾಗಿ ಬೆಳೆಸಿಕೊಳ್ಳಬೇಕು ಹಿರೇಗುಂಟನೂರು ಹೋಬಳಿಯ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೆ ಜಾನ್ ಮೈನ್ಸ್ ಕಂಪನಿಯ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುತ್ತಿರುವುದು ಶ್ಲಾಘನೀಯ. ಈ ಮಹತ್ತರ ಕಾರ್ಯದಲ್ಲಿ ಕಾರ್ಯದರ್ಶಿಯವರಾದ ಎಮ್.ಎನ್.ರಾಮು ರವರ ಶ್ರಮ ಬಹಳಷ್ಟಿದೆ ಎಂದರು.

ಕಾರ್ಯಕ್ರಮ ಉದ್ಟಾಟನೆಯನ್ನು ಜಾನ್ ಮೈನ್ಸ್ ಆರ್ ಪ್ರವೀಣ್ ಚಂದ್ರ (ಇಆರ್‌ಎಮ್) ಸಿ.ಎಸ್.ಆರ್ ಮುಖ್ಯಸ್ಥರಾದ ಮಂಜುನಾಥ ಸರ್ ರವರು ಮಾತನಾಡಿ ನಾನು ಸಹ ಬಾಲ್ಯದಲ್ಲಿ ಸ್ಕೌಟ್ ವಿದ್ಯಾರ್ಥಿಯಾಗಿದ್ದು, ಚತುರ್ಥ ಸೋಪಾನವನ್ನು ಮುಗಿಸಿದ್ದು, ನನ್ನ ಜೀವನದಲ್ಲಿ ಏನಾದರೂ ಶಿಸ್ತನ್ನು ಕಲಿತ್ತಿದ್ದರೆ ಅದು ಕೇವಲ ಸ್ಕೌಟ್ ನಿಂದ ಮಾತ್ರ ಎಂದು ತಿಳಿಸಿ ಹೆಚ್ಚು ಮಕ್ಕಳು ಇದರಲ್ಲಿ ಆಸಕ್ತಿಯನ್ನು ತಾಳಿ ಇದರಲ್ಲಿ ತಮ್ಮ ಜೀವನವನ್ನು ಶಿಸ್ತು ಬದ್ದ ಗೊಳಿಸಿಕೊಳ್ಳಬೇಕೆಂದು ತಿಳಿಸಿದರು ಹಾಗೂ ಮಕ್ಕಳ ಶಿಕ್ಷಣ, ನೀರು, ಮೂಲ ಭೂತ ಸೌಲಭ್ಯಗಳಿಗೆ ಏನಾದರೂ ಸಹಾಯ ಬೇಕಾದರೆ ನಮ್ಮ ಮೈನ್ಸ್ ಸದಾ ಸಿದ್ದ ಎಂದರು.

 

 

ಜಾನ್ ಮೈನ್ಸ್ ಆರ್ ಪ್ರವೀಣ್ ಚಂದ್ರ (ಇಆರ್‌ಎಮ್) ಡೆಪ್ಯೂಟಿ ಜನರಲ್ ಮ್ಯಾನೇಜರ್ ರವರಾದ ಶ್ರೀ ರಣದೇವ್‌ರವರು ಇಂತಹ ಹೆಚ್ಚಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಸ್ವಾವಲಂಬಿ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು, ಶಿಕ್ಷಕರು ತಮ್ಮ ವೃತ್ತಿಯಲ್ಲಿ ಇಂತಹ ಕಾರ್ಯಗಳನ್ನು ಮಾಡಿದರೆ ಮಕ್ಕಳು ತಮ್ಮಲ್ಲಿ ರೂಡಿಸಿಕೊಳ್ಳುವರೆಂದು ತಿಳಿಸಿದರು ಒಬ್ಬ ಆದರ್ಶ ಶಿಕ್ಷಕ ಮನಸ್ಸು ಮಾಡಿದರೆ ಒಂದು ಬಲಿಷ್ಟವಾದ ದೇಶವನ್ನು ಕಟ್ಟಬಹುದೆಂದು ತಿಳಿಸಿದರು ಆ ದಿಸೆಯಲ್ಲಿ ಕಾರ್ಯದರ್ಶಿಯಾದ ಎಮ್.ಎನ್.ರಾಮು ರವರು ಸತತ ಶ್ರಮದಿಂದ ನಮ್ಮ ಮನವನ್ನು ಗೆದ್ದು ೫೦೦ ಸಮವಸ್ತ್ರ ಗಳನ್ನು ಒದಗಿಸಲು ಶ್ರಮವಹಿಸಿದ್ದಾರೆ ಎಂದರು.

ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯವರಾದ ಎಮ್.ಎನ್.ರಾಮು ರವರು ಜಾನ್ ಮೈನ್ಸ್ ಆರ್ ಪ್ರವೀಣ್ ಚಂದ್ರ (ಇಆರ್‌ಎಮ್) ನನಗೆ ಅತೀವವಾದ ಸಹಕಾರವನ್ನು ನೀಡಿ ನಮ್ಮ ಮಕ್ಕಳ ಶಿಕ್ಷಣಕ್ಕೆ ನೆರವಾದರೆಂದು ಹಾಗೂ ಅವರು ಕಾರ್ಯ ವೈಖರಿ ನಿಜಕ್ಕೂ ಅಮೋಘವಾದದ್ದು ಇಂದು ಶ್ಲಾಫಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಅಜಿತ್ ಸರ್ ರವರು ಮಕ್ಕಳ ಜೀವನ ಉಜ್ವಲವಾಗಿರಲಿ ಎಂದು ಆಶಿಸಿದರು.

ಕಾರ್ಯಕ್ರಮದ ಆಯೋಜನೆಯನ್ನು ವಹಿಸಿದ್ದ ಆಂಜನೇಯ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಡಾ: ಮಹೇಶ್ ರವರು ಶಾಲಾಭಿವೃಧಿಗಾಗಿ ಕೊಠಡಿಗಳನ್ನು ನಿರ್ಮಿಸಿ ಕೊಡಬೇಕೆಂದು ಆ ಮೂಲಕ ಮಕ್ಕಳ ಕಲಿಕೆಗೆ ಕೈಜೋಡಿಸಬೇಕೆಂದು ಜಾನ್ ಮೈನ್ಸ್ ಅವರಲ್ಲಿ ವಿನಂತಿಸಿದರು.

ವೇದಿಕೆಯ ಮೇಲೆ ತುರುವನೂರು ಹೋಬಳಿಯ ಕಾರ್ಯದರ್ಶಿಯಾದ ಶ್ರೀ ವಿಶ್ವನಾಥ, ಪಟೇಲ್,ಶಿಕ್ಷಕರಾದ ಚನ್ನಕೇಶವ ಕರಿಬಸಪ್ಪ ಮುರುಗೇಶ್ ನಟರಾಜ್ ಮಂಜುನಾಥ್ ಮಹಾಂತೇಶ್ ಸುತ್ತಮುತ್ತಲಿನ ಹಲವಾರು ಶಾಲೆಯ ಮಕ್ಕಳು, ಭಾಗವಹಿಸಿದ್ದರು, ಕಾರ್ಯಕ್ರಮ ಸ್ಕೌಟ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಸ್ವಾಗತ ಮತ್ತು ಪ್ರಸ್ತಾವಿಕ ನುಡಿಗಳನ್ನು ಎಮ್.ಎನ್.ರಾಮು, ನಿರೂಪಣೆಯನ್ನು ಮಂಜಪ್ಪ ಶಿಕ್ಷಕರು, ನೆರೆವೇರಿಸಿದರು.

[t4b-ticker]

You May Also Like

More From Author

+ There are no comments

Add yours