ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನಡೆಸಿ : ಡಾ. ಬಸವ ರಮಾನಂದಶ್ರೀ

 

 

 

 

 

ಹಿರಿಯೂರು : ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕವಾದ ಆಡಳಿತ ನಡೆಸಿ. ಅಧ್ಯಕ್ಷ ಸ್ಥಾನ ಎಂದರೆ ಅದು ಶಾಶ್ವತ ಸ್ಥಾನವಲ್ಲ, ಮಾಡಿದ ಕಾರ್ಯ ಶಾಶ್ವತವಾದುದು. ಕಾಯ ಅಳಿದರೂ, ಕಾರ್ಯ ಉಳಿಯುವಂತದ್ದು ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಬಸವ ರಮಾನಂದ ಸ್ವಾಮೀಜಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನೂತನ ಅಧ್ಯಕ್ಷರಾಗಿ ಎಸ್ ಶಿವರಂಜನಿ ಆಯ್ಕೆ ಆದ ಹಿನ್ನೆಲೆಯಲ್ಲಿ ಅವರನ್ನು ಮಠದ ವತಿಯಿಂದ ಗೌರವಿಸಿ ಶ್ರೀಗಳು ಮಾತನಾಡಿದರು.

 

 

ಎಲ್ಲರೂ ಒಪ್ಪಿ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಖುಷಿಯ ವಿಚಾರ. ಈ ಭಾಗದಲ್ಲಿ ಮಹಿಳೆಯರಿಗೆ ದೊಡ್ಡ ಸ್ಥಾನ ನೀಡಿರುವುದು ಸಂತಸ ತಂದಿದೆ.
ನಿಕಟಪೂರ್ವ ಮಾಜಿ ಸಚಿವರು ಅಧ್ಯಕ್ಷರ ಆಯ್ಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ‌ ಎಂದು ಹೇಳಿದರು.

ಆಡಳಿತ ಆಶಯಕ್ಕೆ ಧಕ್ಕೆ ಬಾರದಂತೆ ಕಾಯ, ವಾಚ, ಮನಸಾರೆ ಸೇವೆ ಮಾಡಬೇಕು ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷೆಯವರು ಯಾವುದೇ ಭ್ರಷ್ಟಾಚಾರ ಮಾಡದೆ, ಹಣಕಾಸು ಹಾಗೂ ಆಮಿಷಕ್ಕೆ ಬಲಿಯಾಗದೆ ನೇರ, ದಿಟ್ಟ, ನಿರಂತರವಾಗಿ ತನ್ನ ಅಧಿಕಾರವನ್ನು ಚಲಾಯಿಸುವ ಮೂಲಕ ಬಡವರು, ಬಲ್ಲಿದವರು, ದಿನ ದಲಿತರು ಹಿಂದುಳಿದವರು, ಎಲ್ಲ ವರ್ಗದವರು ಮತ್ತು ಮೂರು ಪಕ್ಷ, ಸರ್ವಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ಆಡಳಿತ ನಡೆಸಬೇಕು ಎಂದು ಶ್ರೀಗಳು ಕಿವಿ ಮಾತು ಹೇಳಿದರು. ಇದೇ ವೇಳೆ ನೂತನ ನಗರಸಭೆ ಅಧ್ಯಕ್ಷೆ ಎಸ್. ಶಿವರಂಜನಿಯವರು ಶ್ರೀಗಳ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ರತ್ನಮ್ಮ ತಿಪ್ಪೀರಣ್ಣ, ಎಸ್. ಪ್ರಭು ಯಾದವ್, ಕೆವಿ. ಮಂಜುನಾಥ್ ಯಾದವ್, ಕೃಷ್ಣ ಪೂಜಾರಿ, ಗೋಪಿ ಯಾದವ್, ರಾಮಣ್ಣ, ಜನಾರ್ಧನ್ ಜಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours