ಚಿತ್ರದುರ್ಗ ತಾಲ್ಲೂಕಿನ 25 ಸಾಧಕ ಶಿಕ್ಷಕರಿಗೆ ರಾಷ್ಟ್ರನಿರ್ಮಾತೃ ಪ್ರಶಸ್ತಿ ಪ್ರಧಾನ

 

 

 

 

ಚಿತ್ರದುರ್ಗ: ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಕರೋನಾ ಸಂಕಷ್ಟದ ಅವಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ವಿದ್ಯಾಭ್ಯಾಸವನ್ನು ನೀಡಿದ ಹೆಗ್ಗಳಿಕೆ ನಮ್ಮ ಶಿಕ್ಷಕರದ್ದು. ಇಂತಹ 25 ಸಾಧಕ ಶಿಕ್ಷಕರನ್ನು ವಿಂಡ್ ಮಿಲ್ ಸಿಟಿ ಕ್ಲಬ್ ಮಕ್ಕಳಿಂದಲೇ ಆಯ್ಕೆ ಮಾಡಿಸಿ ಗುರುತಿಸಿ ಇಂದು ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಚಿತ್ರದುರ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ದಪ್ಪನವರು ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.

ಉತ್ತಮ ಶಿಕ್ಷಕರಿಂದ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಕ್ಷೇತ್ರಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ, ಇಲಾಖೆಯ ಸಹಕಾರದೊಂದಿಗೆ ರಹಸ್ಯವಾಗಿ ಶಿಕ್ಷಕರಿಗೆ ತಿಳಿಯದಂತೆ ಅರ್ಹ ಸಾಧಕ ಶಿಕ್ಷಕರನ್ನು ಆಯ್ಕೆ ಮಾಡಿ ಇಂದು ರಾಷ್ಟ್ರ ನಿರ್ಮಾತೃ ಪ್ರಶಸ್ತಿ ನೀಡಿ ರೋಟರಿ ವಿಂಡ್ಮಿಲ್ ಸಿಟಿ ಕ್ಲಬ್ ಗೌರವಿಸುತ್ತಿದೆ. ಸಾಧಕ ಶಿಕ್ಷಕರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ರೋಟರಿ ವಿಂಡ್ಮಿಲ್ ಸಿಟಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಭುವನೇಶ್ವರಿ ಕರುಣ್ ಮಾತನಾಡಿದರು.

ರೋಟರಿ ವಿಂಡ್ಮಿಲ್ ಸಿಟಿ ಕ್ಲಬ್ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಅರ್ಹ ಸಾಧಕ ಶಿಕ್ಷಕರನ್ನು ಗುರುತಿಸಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ನೀಡಿ ಅಭಿನಂದಿಸುತ್ತಿರುವುದು ಹೆಮ್ಮೆಯ ಸಂಗತಿ. ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸಿ ಅವರ ಕಾರ್ಯಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲು ಪ್ರೇರಣಾ ಶಕ್ತಿ ಈ ಪ್ರಶಸ್ತಿ.ಇವರ ಕಾರ್ಯ ಸದಾ ಹೀಗೆ ಮುಂದುವರೆಯಲಿ ಎಂದು ಕಡ್ಲೆಗುದ್ದು ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಮಹೇಶ್ ಮಾತನಾಡಿದರು.

 

 

ರೋಟರಿ ಕ್ಲಬ್ ಪ್ರತಿವರ್ಷ ಸಾಧಕ ಶಿಕ್ಷಕರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಶಿಕ್ಷಕರಲ್ಲಿ ಸಂತಸ ಉಂಟುಮಾಡಿದೆ ಎಂದು ರೋಟರಿ ವಿಂಡ್ಮಿಲ್ ಸಿಟಿ ಕ್ಲಬ್ ಗವರ್ನರ್ ಶ್ರೀಮತಿ ಅನಿತಾ ಮಲ್ಲಿಕಾರ್ಜುನ ಮಾತನಾಡಿದರು.

ಶಿಕ್ಷಕರಾದ ಬಿ.ವಿ.ನಾಥ್, ಗೀತಾ, ಸುಜಾತಾ, ಸುವರ್ಣ,ಮಂಜುಳಾ, ಸುಧಾ, ವೇದಾವತಿ,ವಾಣಿ, ಗುರುಶಾಂತಮ್ಮ, ಪೂರ್ಣಿಮಾ,ಸಬಾಹತ್ ನಾಜ್ನೀನ್, ಅನ್ನಪೂರ್ಣ,ಮಂಜುನಾಥ್, ಚನ್ನಯ್ಯ,ಪುಟ್ಟಸ್ವಾಮಿ, ಚಿತ್ರಲಿಂಗಪ್ಪ, ನಟರಾಜ್, ರಾಮು,ಗಂಗಾಧರಪ್ಪ, ನಾಗೇಂದ್ರಪ್ಪ, ವಿಜಯ್ ಕುಮಾರ್, ರಾಮಶೇಖರ್, ರವಿಕುಮಾರ್, ಮಹಾಂತೇಶ್ ಹಾಗೂ ಹಾಲೇಶ್ ಇವರನ್ನು ದಿನಾಂಕ 01-04-2021ರಂದು ಸಂಜೆ ರೋಟರಿ ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಲ್ಲಿ ರೋಟರಿ ಕ್ಲಬ್ ನ ಕವಿತಾ ಗಿರೀಶ್ ಅಲಿಷ ಸುಭಾನ್, ನಾಗೇಂದ್ರಬಾಬು, ಮೋಕ್ಷ ರುದ್ರಸ್ವಾಮಿ, ನಿರ್ಮಲ ಬಸವರಾಜ್, ಮಾಧವಿ ಹಾಗೂ ಸರೋಜಮ್ಮ ಸೋಮಶೇಖರ್ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours