ಮುರುಘಾ ಶರಣರನ್ನು ತಕ್ಷಣ ಬಿಡುಗಡೆಗೊಳಿಸಿ: ಹೈಕೋರ್ಟ್ ಆದೇಶ

 

 

 

 

ಚಿತ್ರದುರ್ಗ: ಕಳೆದ ವರ್ಷ  ಪೋಕ್ಸೋ ಪ್ರಕರಣದಲ್ಲಿ  ಬಂಧನದಲ್ಲಿದ್ದ ಮುರುಘಾ ಶರಣರು ಕಳೆದ  ಐದು ದಿನಗಳ ಹಿಂದೆಯಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಇಂದು ಮತ್ತೆ  ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು (Shivamurthy Murugha Sharanaru)  ಪೊಲೀಸರು ಬಂಧಿಸಿ ಚಿತ್ರದುರ್ಗಕ್ಕೆ ಕರೆತಂದಿದ್ದರು. ಎರಡನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆಯದ ಕಾರಣ ಅವರನ್ನ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಚಿತ್ರದುರ್ಗದ ಗ್ರಾಮಾಂತರ ಠಾಣೆಯ ಪೊಲೀಸರು ಡಿವೈಎಸ್ಪಿ ನೇತೃತ್ವದಲ್ಲಿ ಮಧ್ಯಾಹ್ನ  ಬಂಧಿಸಿದ್ದರು. ಆದರೆ ಈ ಬಂಧನಕ್ಕೆ ಹೈಕೋರ್ಟ್ (High Court)​ ತಡೆ ನೀಡಿದೆ. ಮುರುಘಾ ಶರಣರನ್ನ ಚಿತ್ರದುರ್ಗಕ್ಕೆ ಕರೆತಂದಿರುವುದು ಕೋರ್ಟ್​ ಆದೇಶದ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಪ್ರತಿಪಾದಿಸಿದೆ. ಅಲ್ಲದೆ ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿವ ಮೂಲಕ ಮುರುಘಾ ಶರಣರು ನಾಳೆ ಬಿಡುಗಡೆಗೊಳ್ಳಲಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ನಗರ ಮತ್ತು ಈ ಹಳ್ಳಿಗಳಲ್ಲಿ ನಾಳೆ ಕರೆಂಟ್ ಇರಲ್ಲ

 

 

  ಅರೆಸ್ಟ್ ಮಾಡಲು  ಆದೇಶ ನೀಡಿದ್ದ ಜಿಲ್ಲಾ ನ್ಯಾಯಾಲಯ

2ನೇ ಪೋಕ್ಸೊ ಕೇಸ್​ನಲ್ಲಿ ಜಾಮೀನಿ ಪಡೆಯದ ಕಾರಣ ಸರ್ಕಾರಿ ಪರ ವಕೀಲರ ಅರ್ಜಿ ಮೇರೆಗೆ ಮುರುಘಾ ಶ್ರೀಗಳ ವಿರುದ್ಧ ಬಂಧನದ ವಾರೆಂಟ್​ ನೀಡಿತ್ತು. ಹಾಗಾಗಿ ದಾವಣಗೆರೆಯ ವಿರಕ್ತಾ ಮಠದಲ್ಲಿದ್ದ ಮುರುಘಾ ಶರಣರನ್ನ ಸೋಮವಾರ ಚಿತ್ರದುರ್ಗ ಪೊಲೀಸರು ಬಂಂಧಿಸಿ, ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನ ಡಿಸೆಂಬರ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು.
ಹೈಕೋರ್ಟ್ ಆದೇಶ ಉಲ್ಲಂಘನೆ

ಆದರೆ ಈ ಬಂಧನದ ಆದೇಶದಿಂದ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಮುರುಘಾ ಶರಣರ ವಕೀಲರು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಬಂಧನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮೊದಲ ಪೋಕ್ಸೋ ಪ್ರಕರಣದಲ್ಲಿ ಷರತ್ತುಬದ್ದ ಜಾಮೀನು ನೀಡಿದ್ದ ಹೈಕೋರ್ಟ್​, 2ನೇ ಪೋಕ್ಸೋ ಕೇಸ್​ನಲ್ಲಿ ಬಾಡಿ ವಾರೆಂಟ್​ ಇರುವುದರಿಂದ ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ. ಅಲ್ಲದೆ 2ನೇ ಪೋಕ್ಸೋ ಪ್ರಕರಣ ಇನ್ನೂ ವಿಚಾರಣೆ ನಡೆಯುತ್ತಿದೆ ಎಂದು ಬಿಡುಗಡೆಗೆ ಆದೇಶ ನೀಡಿದೆ.

ಕೂಡಲೇ  ಬಿಡುಗಡೆಗೆ ಹೈಕೋರ್ಟ್  ಆದೇಶ

ಶಿವಮೂರ್ತಿ  ಮುರುಘಾ ಶರಣರ ಬಂಧನವಾಗುತ್ತಿದ್ದಂತೆ ಶ್ರೀಗಳ ಪರ ವಕೀಲರು ಬಂಧನದ ವಾರೆಂಟ್​ ವಿರುದ್ಧ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಇದೀಗ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಬಂಧನ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟರ್​ರಿಂದ ಜೈಲಾಧಿಕಾರಿಗೆ ಇ – ಮೇಲ್ ಮೂಲಕ ಮಾಹಿತಿ ನೀಡಲು ಆದೇಶಿಸಲಾಗಿದೆ. ಹೈಕೋರ್ಟ್​ ಆದೇಶ ಉಲ್ಲಂಘಿಸಿದ್ದಕ್ಕೆ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಎಸ್ಪಿಪಿಗೆ ಹೈಕೋರ್ಟ್  ಎಚ್ಚರಿಕೆ ರವಾನಿಸಿದೆ.

[t4b-ticker]

You May Also Like

More From Author

+ There are no comments

Add yours