ದೇವರ ಎತ್ತುಗಳ ಮೇವು ಖರೀದಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ:ಶಾಸಕ ಟಿ.ರಘುಮೂರ್ತಿ

 

 

 

 

ಚಿತ್ರದುರ್ಗ: ಬುಡಕಟ್ಟು ಜನರ ದೇವರ ಎತ್ತುಗಳಿಗೆ ಮೇವಿನ ವ್ಯವಸ್ಥೆ ಮಾಡಲು ಹೆಚ್ಚುವರಿ‌ ಹಣವನ್ನು ತುರ್ತಾಗಿ  ಬಿಡುಗಡೆ ಮಾಡಬೇಕೆಂದು ಶಾಸಕ ಟಿ.ರಘುಮೂರ್ತಿ ಅವರು ವಿಧಾನಸಭೆಯಲ್ಲಿ ಪಶುಸಂಗೋಪನೆ ಸಚಿವರಿಗೆ ಒತ್ತಾಯಿಸಿದರು.

 

 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲೂಕಿನಲ್ಲಿ 1874 ಕ್ಕೂ ಹೆಚ್ಚು ದೇವರ ಎತ್ತುಗಳು ಅರಣ್ಯದ ಮತ್ತು ಗೋಮಳದ ನೈಸರ್ಗಿಕ  ಮೇವನ್ನು ಅವಲಂಬಿಸಿದ್ದವು.ಆದರೆ ಮುಂಗಾರು ಮಳೆ ಇಲ್ಲದೇ ಬಹುತೇಕ ಎರಡು ತಾಲೂಕುಗಳು ಬರಗಾಲಕ್ಕೆ ತುತ್ತಾಗಿದ್ದು ದೇವರ ರಾಸುಗಳಿಗೆ ಮೇವು ಇಲ್ಲದಾಗಿದ್ದು ಸರ್ಕಾರ ಬುಡಕಟ್ಟು ಸಂಸ್ಕೃತಿಯ ಪ್ರತೀಕವಾದ ದೇವರ ಎತ್ತುಗಳು ರಕ್ಷಣೆ ಮಾಡಲು ಸರ್ಕಾರ ಮೇವು ಖರೀದಿ ಮಾಡಲು ಹಣ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪಿಸಿ ಸಭೆಯ ಗಮ ಸೆಳೆದರು. ಶಾಸಕ ಟಿ.ರಘುಮೂರ್ತಿ  ಅವರ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ಜಿಲ್ಲಾಡಳಿತಕ್ಕೆ 1.50 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಮೇವು ಖರೀದಿಗೆ ಸೂಚಿಸಲಾಗಿದೆ ಎಂದು  ತಿಳಿಸಿದಾಗ ಕೆರಳಿದ ಶಾಸಕ ರಘುಮೂರ್ತಿ ಅವರು ದೇವರ ಎತ್ತುಗಳು 1874  ಇದ್ದು ಇವರು ನೀಡಿರುವ 1.50.800  ಲಕ್ಷ ಹಣ ಇದೆ ಎಂದು ಸಚಿವರು  20 ಟನ್  ಮೇವು ಬರುತ್ತದೆ. ಜಿಲ್ಲಾಧಿಕಾರಿ ವರದಿ ಪ್ರಕಾರ 277 ಟನ್ ಮೇವು ಅಗತ್ಯವಾಗಿ ಬೇಕಾಗಿದೆ.
ಒಂದು ತಿಂಗಳಿಗೆ   ಸುಮಾರು 25 ಲಕ್ಷ ಹಣ ಮೇವು ಖರೀದಿಗೆ ಒದಗಿಸಬೇಕು ಎಂದು ಶಾಸಕರು ಒತ್ತಾಯಿಸಿದರು.  ಬರಗಾಲದಿಂದ ದೇವರ ಎತ್ತುಗಳ ಜೊತೆಗೆ ಇತರೆ ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಸಚಿವ ವೆಂಕಟೇಶ್ ಮೇವು ಖರೀದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳ ಜೊತೆ ಚರ್ಚಿಸಿ ಹಣ ಬಿಡುಗಡೆ ಮಾಡಲಾಗುವುದು. ಜೊತೆಗೆ ಬರಗಾಲ ಎಂದು ಘೋಷಣೆಯಾದ ನಂತರ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು‌.
[t4b-ticker]

You May Also Like

More From Author

+ There are no comments

Add yours