ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ಮಿಸ್ ಮಾಡದೇ ಓದಿ.

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 8:
ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಸ್.ಎಫ್.ಸಿ. ನಿಧಿ ಹಾಗೂ ನಗರಸಭೆಯ ನಿಧಿಯ ಶೇಕಡ 24.10, 7.25, 5 ಯೋಜನೆಯಡಿ ವಿವಿಧ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಎಂ.ಬಿ.ಬಿ.ಎಸ್, ಬಿ.ಇ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಲ್ಯಾಪ್‍ಟಾಪ್ ಖರೀದಿ ಹಾಗೂ ಎಸ್.ಎಸ್.ಎಲ್.ಸಿ,  ಪಿ.ಯು.ಸಿ,  ಬಿ.ಎಡ್, ಬಿ.ಪಿ.ಎಡ್, ಎಂ.ಎ, ಎಂ.ಎಸ್ಸಿ, ಎಂಎಸ್‍ಡಬ್ಲ್ಯು, ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ನಿಡಲಾಗುವುದು.
ವೈದ್ಯಕೀಯ ಪದವಿಯಲ್ಲಿ ತೇರ್ಗಡೆಯಾಗಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್‍ನಲ್ಲಿ ನೋಂದಣಿ ಮಾಡಿಕೊಂಡ ಪ್ರಮಾಣ ಪತ್ರ ಹೊಂದಿರುವವರಿಗೆ ವೈದ್ಯಕೀಯ   ಪರಿಕರಗಳನ್ನು ಖರೀದಿಸಲು ಧನ ಸಹಾಯ ಹಾಗೂ ಎಲ್.ಎಲ್.ಬಿ. ಪದವಿ ಹೊಂದಿ ವೃತ್ತಿ ಪ್ರಾರಂಭಿಸಲು ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ವಕೀಲರ ಪರಿಷತ್ ಬೆಂಗಳೂರಿನಲ್ಲಿ  ನೋಂದಣಿ ಮಾಡಿಕೊಂಡ ವಕೀಲರಿಗೆ ಕಾನೂನು ಪುಸ್ತಕ ಖರೀದಿಸಿ ಕೊಂಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಗರಸಭೆಯ www.chitradurgacity.mrc.gov.in  ಹಾಗೂ ಕಚೇರಿಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬೇಕೆಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
[t4b-ticker]

You May Also Like

More From Author

+ There are no comments

Add yours