ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ರೇಪ್ ಕೇಸ್ ದಾಖಲು

 

 

 

 

ಚಿತ್ರದುರ್ಗ:ಚಳ್ಳಕೆರೆ ಠಾಣೆ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ರೇಪ್ ಕೇಸ್ ದಾಖಲಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ವಿರುದ್ದ    ಚಿತ್ರದುರ್ಗ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.  ಸೋದರ ಮಾವನ ಮಗ ಉಮೇಶ್ ವಿರುದ್ಧ ಯುವತಿ ದೂರು ನೀಡಿದ್ದಾರೆ.

 

 

ಕಳೆದ  5ವರ್ಷದ ಹಿಂದೆ ದಾವಣಗೆರೆಯಲ್ಲಿ ಉಮೇಶ್ ಇನ್ಸ್ ಪೆಕ್ಟರ್ ಆಗಿದ್ದರು.  ಆ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ‌ ಸಹಾಯ ಕೇಳಿದ್ದರು ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದರು.ಬಳಿಕ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದಾಗ ಅತ್ಯಾಚಾರ ಆರೋಪ ಮಾಡಿದ್ದಾರೆ ಎಂದು ತಿಳಿದಿದ್ದು ಐದು ಬಾರಿ  ಯುವತಿಗೆ ಗರ್ಭಪಾತ ಮಾಡಿಸಿದ್ದಾರೆ.  ಆದರೆ ವಿಪರ್ಯಾಸವೆಂದರೆ  ಸಿಪಿಐ ಉಮೇಶ್ ಗೆ ಇಬ್ಬರು ಹೆಂಡತಿಯರಿದ್ದಾರೆ.3ನೇ ಪತ್ನಿ ಹಾಗೇ ಇರು ಸಿಪಿಐ ಉಮೇಶ್ ಒತ್ತಡ ಆರೋಪ. ದಾವಣಗೆರೆಯ ನಿವೇಶನ ನಿಮಗೆ ಸಿಗದಂತೆ ಮಾಡುತ್ತೇನೆ.  ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಆರೋಪ ಹಿನ್ನಲೆ ಕೇಸ್ ದಾಖಲಿಸಿದ್ದು ಕಲಂ 376 ಕ್ಲಾಸ್ (2)(k)(n), 323 , 504, 506 ಐಪಿಸಿ ಅಡಿ ಪ್ರಕರಣ ದಾಖಲಾದ ಬಳಿಕ ಸಿಪಿಐ ಜಿ.ಬಿ.ಉಮೇಶ್ ನಾಪತ್ತೆ ಆಗಿದ್ದಾರೆ. ಪ್ರಕರಣ ತನಿಖೆ ಕಾರ್ಯ ಚುರುಕುಗೊಂಡಿದೆ.

[t4b-ticker]

You May Also Like

More From Author

+ There are no comments

Add yours