ಸಾವಿರಾರು ಕೋಟಿ ಸುಳ್ಳುಗಾರ ಹೊಳಲ್ಕೆರೆ ಶಾಸಕ ಚಂದ್ರಪ್ಪ: ಮಾಜಿ ಸಚಿವ ಆಂಜನೇಯ ಆರೋಪ.

 

 

 

 

ಚಿತ್ರದುರ್ಗ,ಮಾ೨೦

ಸಾವಿರಾರು ಕೋಟಿ ಸುಳ್ಳುಗಾರ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಬಿದುರ್ಗದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ, ಇದೀಗ ಕೆಎಸ್ ಆರ್ಟಿಸಿ ಚಾಲನಾ ತರಬೇತಿ ಕೇಂದ್ರ ಹೀಗೆ ಅನೇಕ ಯೋಜನೆಗಳು ನನ್ನ ಅವಧಿಯಲ್ಲಿ ತಂದವು ಆದರೆ ಇದೀಗ ಶಾಸಕರು ನಾನು ತಂದಿದ್ದೇನೆ ಎಂದು ಸುಳ್ಳು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಗಂಭೀರ ಆರೋಪ ಮಾಡಿದರು.

ಅವರು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಹೊಳಲ್ಕೆರೆ ಕ್ಷೇತ್ರದಲ್ಲಿ ನಾನು ಶಾಸಕ ಹಾಗೂ ಮಂತ್ರಿಯಾಗಿದ್ದಾಗ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆನೆ. ಆದರೆ ಹಾಲಿ ಶಾಸಕರು ನನ್ನ ಅವಧಿಯಲ್ಲಿ ನಡೆದ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದಾರೆ. ಚಿತ್ರಹಳ್ಳಿ ಬಳಿ ಎರಡು ಕಾಲೇಜ್ ಗಳನ್ನು ಕಣಿವೆಗೆ ಶಿಫ್ಟ್ ಮಾಡಿದ್ದಾರೆ. ನಾನು ತಂದಿರುವ ಯೋಜನೆಗಳನ್ನು ಬಿಟ್ಟರೆ ಹೊಸದಾಗಿ ಯಾವುದೇ ಕಾಮಗಾರಿಯಾಗಲಿ ಯೋಜನೆಯಾಗಲಿ ತಂದಿಲ್ಲ. ಕಳೆದ ಸರ್ಕಾರದಲ್ಲಿ ಸುವರ್ಣಯುಗವಾಗಿತ್ತು. ನಾನು ಸಚುವನಾಗಿದ್ದಾಗ ಕಂಡು ಅರಿಯದಷ್ಟು ಅಭಿವೃದ್ಧಿ ಯಾಗಿದೆ. ಚಾಲನಾ ತರಬೇತಿ ಕೇಮದ್ರ ಕೂಡ ನನ್ನ ಅವಧಿಯಲ್ಲಿ ಮುಗಿದು ಉದ್ಘಾಟನೆಗೆ ರೆಡಿಯಾಗಿತ್ತು. ಆದರೆ ಉದ್ಘಾಟನೆ ಮಾಡಿಲ್ಲ. ತಾಲೂಕು ಸಮಾಜ ಕಲ್ಯಾಣ ಕಚೇರಿ ಕಟ್ಟಡ ನಿರ್ಮಾಣ ಆಗಿದ್ದರೂ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಶಾಸಕರಿಗೆ ಮನುಷ್ಯತ್ವ ಇದೆಯೋ ಇಲ್ಲವೋ ಎಂದು ಕಿಡಿಕಾರಿದರು.

 

 

ರಾಮಗಿರಿಯಲ್ಲಿ ಆಸ್ಪತ್ರೆ ಆಗಿ ಮೂರು ವರ್ಷ ಕಳೆದರೂ ಉದ್ಘಾಟನೆ ಆಗಿಲ್ಲ.ಅನೇಕ ಕಾಮಗಾರಿಗಳು ನನ್ನ ಅವಧಿಯಲ್ಲಿಆಗಿದ್ದರೂ ಉದ್ಘಾಟನೆ ಆಗುತ್ತಿಲ್ಲ. ಇದೆಲ್ಲವೂ ನನಗೆ ಹೆಸರು ಬರುತ್ತದೆ ಎಂಬ ಅಸೂಯೆಯಿಂದ. ಬಿ ದುರ್ಗದಲ್ಲಿ ಇಂದಿರಾ ವಸತಿ ಶಾಲೆ ನಮ್ಮ ಸರ್ಕಾರದಲ್ಲಿ ಮಂಜೂರಾಗಿದ್ದು, ಮೂರು ಕೋಟಿ ನಾನು ತಂದಿದ್ದೆನೆ ಎಂದು ಚಂದ್ರಪ್ಪ ಹೇಳುತ್ತಿದ್ದಾರೆ. ಹಾಗಾದರೆ ಬಿಡಿಗಡೆ ಆಗಿರುವುದಕ್ಕೆ ಸಾಕ್ಷಿ ತೋರಲಿಸಲಿ. ೧.೫ ಕೋಟಿ ಖರ್ಚು ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಎರಡು ಕೋಟಿ ಕ್ಷೇತ್ರದಲ್ಲಿ ಎಲ್ಲಿ ಖರ್ಚು ಮಾಡಿದ್ದಾರೆ ಎಂದು ಹೇಳಲಿ. ಹೊಳಲ್ಕೆರೆ ಕ್ಷೇತ್ರದಲ್ಲಿ ನಮ್ಮ ಅವಧಿಯಲ್ಲಿ ಮಂಜೂರಾಗಿದ್ದ ಕೊಳವೆ ಬಾವಿ ಕೊರೆಯಬೇಡಿ ಎಂದು ಚಂದ್ರಪ್ಪ ಪತ್ರ ನೀಡಿದ್ದಾರೆ. ಕೆಲವರಿಗೆ ಮೋಟಾರು ಪಂಪ್ ನೀಡಬೇಡಿ ಎಂದು ಹೇಳಿದ್ದಾರೆ. ಜನ ವಿರೋಧೀ ನೀತಿ ಅನುಸರಿಸುತ್ತಿರುವ ಇವರೊಬ್ಬ ದಡ್ಡ ಶಾಸಕ ಎಂದು ವ್ಯಂಗ್ಯವಾಡಿದರು.

ಬಡವರ ಬಗ್ಗೆ ಕರುಣೆ ಇಲ್ಲ ಇಂತಹ ಶಾಸಕನನ್ನು ನಾನೆಲ್ಲಿಯೂ ನೋಡಿಲ್ಲ. ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರದ. ನೀರು ಇಲ್ಲದ ಕಡೆಗೆ ವರ್ಗಾವಣೆ ಮಾಡುತ್ತೆನೆ ಎಂದು ಬೆದರಿಸುತ್ತಾರೆಂತೆ ಗಂಗಾ ಕಲ್ಯಾಣ ಕೊಳವೆ ಬಾವಿಗಳನ್ನು ಕೊರೆಯದಂತೆ ಶಾಸಕರು ನಿಲ್ಲಿಸಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸುತ್ತಾ, ಮುಂದಿನ ದಿನಗಳಲ್ಲಿ ಶಾಸಕರ ಧೋರಣೆ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗೋಷ್ಟಿಯಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಗಂಗಾಧರ್, ಲಿಡ್ಕರ್ ಮಾಜಿ ಅಧ್ಯಕ್ಷ ಓ ಶಂಕರ್, ಬ್ಲಾಕ್ ಅಧ್ಯಕ್ಷ ಹನುಮಂತಪ್ಪ, ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours