ಸೇವಾ ಮನೋಭಾವ ಇಟ್ಟುಕೊಂಡು ಅಧಿಕಾರಕ್ಕೆ ಬರುವವರ ಸಂಖ್ಯೆ ತೀರ ವಿರಳ:ಸಾಹಿತಿ ಮರಿಕುಂಟೆ ತಿಪ್ಪಣ್ಣ.

 

 

 

 

ಚಿತ್ರದುರ್ಗ ಮಾ. ೯
ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವವನ್ನು ಇಟ್ಟುಕೊಂಡು ಅಧಿಕಾರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ತಿಪ್ಪೇಸ್ವಾಮಿರವರು ಸೇವಾ ಮನೋಭಾವುಳ್ಳ ವ್ಯಕ್ತಿ ಇಂತವರು ಆಯ್ಕೆಯಾದರೆ ಕನ್ನಡದ ಸೇವೆಯನ್ನು ಮನಪೂರ್ವಕವಾಗಿ ಮಾಡುತ್ತಾರೆ ಎಂದು ಸಾಹಿತಿಗಳಾದ ಮರಿಕುಂಟೆ ತಿಪ್ಪಣ್ಣ ತಿಳಿಸಿದರು.

 

 

ನಗರದ ಪತ್ರಕರ್ತರ ಭವನದಲ್ಲಿ “ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನದಆಕಾಂಕ್ಷಿಯಾದ ಕೋರ್ಲಕುಂಟೆ ತಿಪ್ಪೇಸ್ವಾಮಿರವರ ಪರ ಮತಯಾಚನೆ ಸಲುವಾಗಿ” ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಿದ ಕೀರ್ತಿ ಕೊರ್ಲಕುಂಟೆ ತಿಪ್ಪೇಸ್ವಾಮಿರವರಿಗೆ ಸಲ್ಲುತ್ತದೆ.ಪ್ರಮುಖವಾಗಿ ಚಿತ್ರದುರ್ಗ ನಗರದ ರಂಗಮಂದಿರಕ್ಕೆ ತ.ರಾ.ಸು ಹೆಸರು ಇಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಕನ್ನಡ ನಾಡು ನುಡಿಯ ಬಗ್ಗೆ ತಮ್ಮದೇಯಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.
ಯಾವುದೇ ಜಾತಿಭೇಧ ಮಾಡದೇ ಕನ್ನಡದ ತೇರನ್ನು ಎಳೆಯುತ್ತಿದ್ದಾರೆ ಇಂತವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ. ಕನ್ನಡದಲ್ಲಿ ಸಂಭ್ರಮದ ಬದುಕನ್ನು ಕಂಡವರು. ಕನ್ನಡದ ಹೆಸರಿನಲ್ಲಿ ವೈಯಕ್ತಿಕ ಕೆಲಸ ಮಾಡಿಕೊಳ್ಳುವವರನ್ನು ಮತದಾರರು ಬಹಿಷ್ಕರಿಸುತ್ತಾರೆ ಎಂಬುದು ನನ್ನ ಭಾವನೆ. ಎಂದ ತಿಪ್ಪಣ್ಣನವರು ಕನ್ನಡದ ಸೇವೆಯಲ್ಲಿ ಮಾಡಿದ ಕೆಲಸಗಳನ್ನು ಇಟ್ಟುಕೊಂಡು ತಿಪ್ಪೇಸ್ವಾಮಿ ಪರ ಮತ ಕೇಳುತ್ತಿದ್ದೇವೆ.ನಾವು ಯಾವುದೇ ಜಾತಿ ರಾಜಕೀಯ ಪ್ರೇರಿತರಾಗಿ ಮತ ಕೇಳುವುದಿಲ್ಲ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಲವು ಬದಲಾವಣೆಗಳಾಗಿವೆ ಆ ಬದಲಾವಣೆಗೆ ಹೊಂದಿಕೊಂಡು ಹೋಗಬೇಕಾದ ಸಂದರ್ಭವಿದೆ. ಆದ್ದರಿಂದ ಮೇ.೯ ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೊರ್ಲಕುಂಟೆ ತಿಪ್ಪೇಸ್ವಾಮಿರವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. .

[t4b-ticker]

You May Also Like

More From Author

+ There are no comments

Add yours