ಪಿಎಫ್ ಐ ಮುಖಂಡನ ಬಂಧನ

 

 

 

 

ಚಿತ್ರದುರ್ಗ, ಸೆ.28: ವಿವಿಧ 6 ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿದ್ದ ಪಿಎಫ್ ಐ ಸಂಘಟನೆಯ ಮುಖಂಡ ಅಫನ್ ಅಲಿ ಅವರನ್ನು ಇಲ್ಲಿನ ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

 

ಪ್ರಸ್ತುತ ರಾಜ್ಯದಲ್ಲಿ ಪಿಎಫ್ ಐ ಸಂಘಟನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಮುಖಂಡರು ಹಾಗೂ ಕಾರ್ಯಕರ್ತರನ್ನ ಬಂಧಿಸಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿನ ಚಿಕ್ಕಪೇಟೆ ಬಡಾವಣೆಯ ನಿವಾಸಿ ಅಫನ್ ಅಲಿ ಅವರನ್ನು ಕಳೆದ ರಾತ್ರಿ ಕೋಟೆ ಠಾಣೆಯ ಪೊಲೀಸರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಹಾಗೂ ನಿಯಮ ಬಾಹಿರವಾಗಿ ಪ್ರತಿಭಟನೆ ಮಾಡಿರುವ ಅಫನ್ ಅಲಿ ಅವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ 4 ಹಾಗೂ ಕೋಟೆ ಪೊಲೀಸ್ ಠಾಣೆಯಲ್ಲಿ 2 ಕ್ರಿಮಿನಲ್ ಪ್ರಕರಣಗಳಿರುವ ರೌಡಿ ಶೀಟರ್ ಆಗಿದ್ದಾರೆ.
ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೆ.ಪರಶುರಾಮ್, ಡಿವೈಎಸ್ಪಿ ಅನಿಲ್, ನಗರಠಾಣೆ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಅಫನ್ ಅಲಿ ಅವರ ವಿಚಾರಣೆ ನಡೆಸಲಾಗಿದೆ.

[t4b-ticker]

You May Also Like

More From Author

+ There are no comments

Add yours