ಲಾರಿಯಲ್ಲಿ ತುಂಬಿದ್ದು ಮೆಕ್ಕೆಜೋಳ ಅಕ್ಕಿ ಆಯ್ತ, ಚಾಲಕನಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ತರಾಟೆ , 220 ಚೀಲ ಪಡಿತರ ಅಕ್ಕಿ ವಶ

 

 

 

 

ಅಕ್ರಮ ಪಡಿತರ ಅಕ್ಕಿ ವಶ

ಚಳ್ಳಕೆರೆ: ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಅಕ್ಕಿ ಲಾರಿಯನ್ನು  ತಹಶೀಲ್ದರ್ ಎನ್.ರಘುಮೂರ್ತಿ ವಶಕ್ಕೆ ಪಡೆದಿರುವ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ‌.

 

 

ಬಳ್ಳಾರಿಯಿಂದ ತುಮಕೂರು ಕಡೆಗೆ ಪಡಿತರ ಅಕ್ಕಿ ತುಂಬಿಕೊಂಡು ಹೊರಟಿದ್ದ ಇಚರ್ ಲಾರಿಯನ್ನ ಚಳ್ಳಕೆರೆ  ನಗರದ ನೆಹರು ವೃತ್ತದಲ್ಲಿ ತಡೆದು  ಲಾರಿಯನ್ನು ಪರಶೀಲನೆ ನಡೆಸಲಾಗಿ ಲಾರಿಯಲ್ಲಿ ಪಡಿತರ ಅಕ್ಕಿ ತುಂಬಿದ್ದ ಸುಮಾರು 220 ಬ್ಯಾಗ್ ಕಂಡು ಬಂದಿದ್ದೆ ತಕ್ಷಣವೇ ಲಾರಿ ಚಾಲಕನ್ನು ಎಲ್ಲಿಂದೆ ಎಂದು ಕೇಳಿದರೆ ನನಗೆ ಗೋತ್ತಿಲ್ಲಾ ನಾನು ತಳುಕಿನಿಂದ ಲಾರಿ ಹತ್ತಿಕೊಂಡು ಲಾರಿಯಲ್ಲಿ ಮೇಕ್ಕೆ  ಜೋಳ ಇದೆ ಎಂದು ಹೇಳಿದ್ದಾನೆ.  ತಕ್ಷಣವೇ ಲಾರಿ ಮುಚ್ಚಲಾಗಿದ್ದ ತಡಪೋಲು  ಬಿಚ್ಚಿನೋಡಲಾಗಿದ್ದು  ಪಡಿತರ ಅಕ್ಕಿ ಇದ್ದಿದ್ದು ಖಚಿತ ಪಡಿಸಿಕೊಂಡು ನಂತರ ಅಕ್ಕಿ ತುಂಬಿದ ಲಾರಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಂತರ ಮಾತನಾಡಿದ ಅವರು ಈ ಭಾಗದಲ್ಲಿ ಕಡು ಬಡವರಿದ್ದು ಸರ್ಕಾರ ಉಚಿತವಾಗಿ ಅಕ್ಕಿ ನೀಡುತ್ತದೆ.  ಇಂತಹ ಸಮಯದಲ್ಲಿ ಬಡವರ ಅಕ್ಕಿಯನ್ನ ಈಗೆ ಅಕ್ರಮವಾಗಿ ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಇಂತಹ ಕೃತ್ಯಕ್ಕೆ ಅವಕಾಶ ನೀಡುವುದಿಲ್ಲ .ಯಾವುದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಗಡಿ ಭಾಗಗಳಲ್ಲಿ ಆಹಾರ ಹಾಗೂ ಕಂದಾಯ ಅಧಿಕಾರಿಗಳನ್ನು ನೇಮಿಸಿ ಬರುವಂತಹ ಲಾರಿಗಳ ಬಗ್ಗೆ ಗಮನ ಹರಿಸಲಾಗುವುದು. ಮಾಹಿತಿ ಬಂದ ತಕ್ಷಣವೇ ಅನುಮಾನಸ್ಪದವಾಗಿ ತಿರುಗಾಡುವಂತಹ ಲಾರಿಗಳ ಪಡೆದು ಪರಿಶೀಲಿಸಲಾಗುವುದಿಲ್ಲ ಇಂತಹ ಘಟನೆಗಳು ಪುನಃ ಪುನಃ  ಜರುಗದಂತೆ ಕ್ರಮವಹಿಸಲಾಗುವುದು ಯಾವುದೇ ಕಾರಣಕ್ಕೂ ಬಡವರ ಅಕ್ಕಿ ಮಾರಾಟ ಮಾಡುವುದಕ್ಕೆ ಬಿಡುವುದಿಲ್ಲ,ಎಂದು ಎಚ್ಚರಿಕೆ ನೀಡಿದರು..

[t4b-ticker]

You May Also Like

More From Author

+ There are no comments

Add yours