ಆಗಸ್ಟ್ 19ರಂದು ವಿದ್ಯುತ್ ವ್ಯತ್ಯಯ ಎಲ್ಲೆಲ್ಲಿ ಪವರ್ ಕಟ್

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಆಗಸ್ಟ್ 18:
ಚಿತ್ರದುರ್ಗದ ಬೃಹತ್ ಕಾಮಗಾರಿ ಘಟಕದಿಂದ ತಂತಿಯನ್ನು ಎಳೆಯುವ ಕಾಮಗಾರಿಗೆ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ, ಬಾಗೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 02, 11 ಕೆವಿ ಮಾರ್ಗಗಳ ಮಾರ್ಗ ಮುಕ್ತತೆಯನ್ನು ನೀಡಬೇಕಾಗಿರುವುದರಿಂದ ಆಗಸ್ಟ್ 19ರಂದು ಬಾಗೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : 66/11 ಕೆವಿ ಬಾಗೂರು ವಿವಿ ಕೇಂದ್ರದಿಂದ ಸರಬರಾಜಾಗುವ 02, 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ. ಬಾಗೂರು : ಎಫ್-1 ಹೊಸದುರ್ಗ ರಸ್ತೆ ಎಕ್ಸ್‍ಪ್ರೆಸ್, ಎಫ್-2 ಬಾಗೂರು ಎನ್.ಜೆ.ವೈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours