ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಕೆಲಸವನ್ನು  ಕೈಗೆತ್ತಿಕೊಳ್ಳಬೇಕೆಂದು ಇಂತಹ ಶಿಬಿರಗಳಲ್ಲಿ ಈ ಕೆಲಸ ಮಾಡುವ ದೀಕ್ಷೆ ಕೈಗೊಳ್ಳಬೇಕೆಂದು ಚಳ್ಳಕೆರೆ ತಹಸಿದ್ದಾರೆ ಎನ್ ರಘುಮೂರ್ತಿ ಹೇಳಿದರು.

 

 

ಇಂದು ಚಳ್ಳಕೆರೆ ತಾಲೂಕು ತೊರೆ ಕೋಲಮ್ನಳ್ಳಿ ಗ್ರಾಮದಲ್ಲಿ ಚಳ್ಳಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿದ್ದಂತಹ ಎನ್ ಎಸ್ ಎಸ್ ಶಿಬಿರದಲ್ಲಿ ಪಾಲ್ಗೊಂಡು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮಗಳಿಂದ ಜನತೆ ಯಾವ ಯಾವ ಸ್ಥಿತಿಯಲ್ಲಿದ್ದಾರೆ ಸರ್ಕಾರಿ ಸೌಲಭ್ಯಗಳು ಯಾವ ಯಾವ ಜನರಿಗೆ ತಲುಪಿಲ್ಲ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕು. ಈ ಬಗ್ಗೆ ಚರ್ಚೆ ಸಂಹಾವನದಂತಹ ಕಾರ್ಯಗಳಾ ಗಬೇಕು ಶೋಷಿತರ ಮತ್ತು ದೀನ ದಲಿತರ ಏಳಿಗೆಗೆ ಕಂಕಣ ಬದ್ಧರಾಗಬೇಕು ಎಂದು ಹಿತವಚನ ಹೇಳಿದರು.

ಪ್ರಥಮ ದರ್ಜೆ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಗಳಾದಂತ ಸತ್ತಾರ್ ಕೃಷ್ಣೇಗೌಡ ಗ್ರಾಮ ಪಂಚಾಯಿತಿ ಸದಸ್ಯರಾದಂತ ತಿಪ್ಪೇಸ್ವಾಮಿ ರೇವಣ್ಣ ಸಾಹಿತಿಗಳಾದಂತಹ ದೊರೆ ಕೊಲಮ್ನಳ್ಳಿ ಪ್ರೀತಂಬರ್ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours