ಕನ್ನಡ ಭಾಷಾ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ ಅನನ್ಯ.

 

 

 

 

ಕನ್ನಡ ಭಾಷಾ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ ಅನನ್ಯ
“ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನಕ್ಕೆ” ಚಾಲನೆ
ಚಿತ್ರದುರ್ಗ, ಮಾರ್ಚ್31:
 ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಕಾಯಕ ವರ್ಷಾಚರಣೆಯ ಅಂಗವಾಗಿ “ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ” ಅಭಿಯಾನಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಕರ್ನಾಟಕದ ಜನ ಕನ್ನಡದ ಪತ್ರಿಕೆ. ಟಿವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತುನಿಷ್ಠ ಮಾಹಿತಿಗಾಗಿ ಅವಲಂಭಿಸಿರುತ್ತಾರೆ. ಅಷ್ಟೇಮುಖ್ಯವಾಗಿ ತಮ್ಮ ಕನ್ನಡ ಓದುಬರಹ ಕೌಶಲವನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಕನ್ನಡ ಮಾಧ್ಯಮಗಳನ್ನು ಅನುಸರಿಸುತ್ತಾರೆ. ಜನಸಾಮಾನ್ಯರು-ಭಾಷೆ-ಮಾಧ್ಯಮ ಪರಸ್ಪರ ಬೆಸುಗೆಯಾಗಿ, ಬದುಕಿನಕೊಂಡಿಯಾಗಿ ನಾಡನ್ನು ಸಮೃದ್ಧಗೊಳಿಸಬೇಕಿದೆ. ಅದಕ್ಕಾಗಿ ಮಾಧ್ಯಮಗಳ ಸಹಕಾರ ಬಹಳ ಮುಖ್ಯವಾಗಿದೆ ಎಂದು ಮನವಿ ಮಾಡಲಾಯಿತು.
ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಒಟ್ಟಾಗಿ ನೋಡುವ, ಓದುವ ಟಿವಿ ಕಾರ್ಯಕ್ರಮ ಮತ್ತು ಪತ್ರಿಕೆಗಳಲ್ಲಿ ಅಗತ್ಯತೆ ಇಲ್ಲದಲ್ಲಿ ಇಂಗ್ಲಿಷ್ ಬಳಸದೆ, ಕೆಟ್ಟ ಅಭಿರುಚಿಯ ಪದ, ಪದಪುಂಜಗಳನ್ನು ಬಳಸದೆ, ಗ್ರಾಹಕರನ್ನು ಕೀಳಾಗಿ ಕಾಣುವ ರೀತಿಯ ಶೈಲಿಯನ್ನು ಬಳಸದೆ ಸಿರಿಗನ್ನಡದ ಘನತೆಯನ್ನು ಉಳಿಸಿ, ಗ್ರಾಹಕರು ನಿಮ್ಮನ್ನು ಅನುಕರಿಸಿ ತಮ್ಮ ಕನ್ನಡವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಿ ಕನ್ನಡ ಜಾಗೃತಿಯ ಆಶಯಕ್ಕೆ ಸ್ಪಂದಿಸಬೇಕು ಎಂದು ಕೋರಲಾಯಿತು.
ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಅಚ್ಚಳಿಯದೇ ಬೆಳಗಿರುವ ಒಂದು ಹೆಸರು ಆರ್.ಕಲ್ಯಾಣಮ್ಮನವರು. ಅವರು ಹುಟ್ಟಿದ್ದು 1894 ಮಾರ್ಚ್ 30ರಂದು. ಅವರ ಜನ್ಮದಿನದಂದು “ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ” ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಭಿಯಾನದ ಅಂಗವಾಗಿ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರದುರ್ಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ದಯಾ ಪುತ್ತೂರ್ಕರ್, ಯೋಗೀಶ್ ಸಹ್ಯಾದ್ರಿ, ಟಿ.ಶಿವರುದ್ರಪ್ಪ ಪಂಡ್ರಳ್ಳಿ, ಮಹೇಶ್ವರಿ ಚಂದ್ರಶೇಖರ್, ವೇದಮೂರ್ತಿ ಮದ್ದೇರ್, ಜಿ.ಎನ್.ಗೊಂದಾಳಪ್ಪ, ಎಂ.ಬಿ. ಜಯದೇವಮೂರ್ತಿ, ಪಿ.ಜಗನ್ನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours