ಜಲಜೀವನಗ ಮಿಷನ್: ಶೇ.98% ಕಾಮಗಾರಿಯಲ್ಲಿ ಪ್ರಗತಿ

 

 

 

 

1092 ಅನುಮೋದಿತ ಕಾಮಗಾರಿಗಳಲ್ಲಿ 936 ಪೂರ್ಣ, ಶೇ.98ರಷ್ಟು ಪ್ರಗತಿ
ಜಲಜೀವನ್ ಮಿಷನ್: ಜಿಲ್ಲೆಗೆ ರೂ.26153.46 ಲಕ್ಷ ಅನುದಾನ ಬಿಡುಗಡೆ

 

 


ಚಿತ್ರದುರ್ಗ,ಮಾಚ್18:
ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನಕ್ಕಾಗಿ ಚಿತ್ರದುರ್ಗ ಜಿಲ್ಲೆಗೆ ಒಟ್ಟು ರೂ. 26153.46 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ.25561.68 ಲಕ್ಷ ಅನುದಾನ ವೆಚ್ಚವಾಗಿದೆ.
 ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 2020-21ನೇ ಸಾಲಿನ ಜನವರಿ ಅಂತ್ಯಕ್ಕೆ ಜಿಲ್ಲೆಯ ಒಟ್ಟು 1092 ಅನುಮೋದಿತ ಕಾಮಗಾರಿಗಳಲ್ಲಿ 936 ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ.98ರಷ್ಟು ಪ್ರಗತಿ ಸಾಧಿಸಲಾಗಿದೆ.  
ಜಲ ಜೀವನ್ ಮಿಷನ್ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. 2019ರ ಆಗಸ್ಟ್‍ನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಘೋಷಿಸಿತು.
2024ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ವೈಯಕ್ತಿಕ ನಳ ಸಂಪರ್ಕಗಳ ಮೂಲಕ ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವುದು ಜಲ ಜೀವನ್ ಮಿಷನ್ ಯೋಜನೆಯ ಉದ್ದೇಶವಾಗಿದೆ.
ಜಲ ಜೀವನ್ ಮಿಷನ್ ಕ್ರಿಯಾ ಯೋಜನೆಯ ತಾಲ್ಲೂಕುವಾರು ಪ್ರಗತಿ ವಿವರ: ಚಳ್ಳಕೆರೆ ತಾಲ್ಲೂಕಿಗೆ 267 ಕಾಮಗಾರಿಗಳು ಅನುಮೋದಿತಗೊಂಡಿದ್ದು, ಅದರಲ್ಲಿ 255 ಕಾಮಗಾರಿಗಳು ಪೂರ್ಣಗೊಂಡಿವೆ. ಚಳ್ಳಕೆರೆ ತಾಲ್ಲೂಕಿಗೆ ರೂ. 11960.12 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ.11886.32 ಲಕ್ಷ ವೆಚ್ಚವಾಗಿದೆ. ಶೇ. 99ರಷ್ಟು ಪ್ರಗತಿ ಸಾಧಿಸಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 165 ಕಾಮಗಾರಿಗಳು ಅನುಮೋದಿತಗೊಂಡಿದ್ದು, ಅದರಲ್ಲಿ 157 ಕಾಮಗಾರಿಗಳು ಪೂರ್ಣಗೊಂಡಿವೆ. ಮತ್ತು ಜಲ ಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಚಿತ್ರದುರ್ಗ ತಾಲ್ಲೂಕಿಗೆ ಒಟ್ಟು ರೂ.2296.30 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಅದರಲ್ಲಿ ರೂ.2200.80 ಲಕ್ಷ ವೆಚ್ಚವಾಗಿ ಶೇ.96ರಷ್ಟು ಪ್ರಗತಿಯಾಗಿದೆ.
 ಹಿರಿಯೂರು ತಾಲ್ಲೂಕಿನಲ್ಲಿ 149 ಕಾಮಗಾರಿಗಳು ಅನುಮೋದನೆಗೊಂಡಿದ್ದು, ಅದರಲ್ಲಿ 129 ಕಾಮಗಾರಿಗಳು ಪೂರ್ಣಗೊಂಡಿವೆ. ತಾಲ್ಲೂಕಿಗೆ ರೂ.839.60 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ.796.60 ಲಕ್ಷ ಅನುದಾನ ವೆಚ್ಚವಾಗಿ ಶೇ.95ರಷ್ಟು ಪ್ರಗತಿಯನ್ನು ಸಾಧಿಸಿದೆ.
 ಹೊಳಲ್ಕೆರೆ ತಾಲ್ಲೂಕಿನಲ್ಲಿ 141 ಕಾಮಗಾರಿಗಳು ಅನುಮೋದನೆಗೊಂಡಿದ್ದು, ಅದರಲ್ಲಿ 128 ಕಾಮಗಾರಿಗಳು ಪೂರ್ಣಗೊಂಡಿವೆ. ಹೊಳಲ್ಕೆರೆ ತಾಲ್ಲೂಕಿಗೆ ರೂ.1160.00 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ. 1049.00 ಲಕ್ಷ ಅನುದಾನ ವೆಚ್ಚವಾಗಿದ್ದು, ಶೇ 90ರಷ್ಟು ಪ್ರಗತಿಯಾಗಿದೆ.
 ಹೊಸದುರ್ಗ ತಾಲ್ಲೂಕಿನಲ್ಲಿ 256 ಕಾಮಗಾರಿಗಳು ಅನುಮೋದನೆಗೊಂಡಿದ್ದು, ಅದರಲ್ಲಿ 195 ಕಾಮಗಾರಿಗಳು ಪೂರ್ಣಗೊಂಡಿವೆ. ಹೊಸದುರ್ಗ ತಾಲ್ಲೂಕಿಗೆ ರೂ.2437.44 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ.2248.96 ಲಕ್ಷ ಅನುದಾನ ವೆಚ್ಚವಾಗಿ ಶೇ. 92ರಷ್ಟು ಪ್ರಗತಿ ಸಾಧಿಸಲಾಗಿದೆ.

  ಮೊಳಕಾಲ್ಮೂರು ತಾಲ್ಲೂಕಿನಲ್ಲಿ 114 ಕಾಮಗಾರಿಗಳು ಅನುಮೋದನೆಗೊಂಡಿವೆ. ಅದರಲ್ಲಿ 72 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಮೊಳಕಾಲ್ಮೂರು ತಾಲ್ಲೂಕಿಗೆ ರೂ.7460.00 ಲಕ್ಷ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ರೂ.7380.00 ಲಕ್ಷ ಅನುದಾನ ವೆಚ್ಚವಾಗಿದ್ದು, ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours