ಚಿತ್ರದುರ್ಗ: ಚಿತ್ರದುರ್ಗದ ಜಿಲ್ಲಾ ಜೈಲಿನಿಂದ ಶಿವಮೂರ್ತಿ ಮುರುಘಾ ಶರಣ (Shivamurthy Maruga surrendered)ರನ್ನು ಬಿಡುಗಡೆ ಮಾಡಲಾಗಿದೆ. ಶ್ರೀಗಳ ಬಂಧನದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಇಂದು ರಾತ್ರಿ 9 ಗಂಟೆ ಸುಮಾರಿಗೆ ಶ್ರೀಗಳನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ನಗರ ಮತ್ತು ಈ ಹಳ್ಳಿಗಳಲ್ಲಿ ನಾಳೆ ಕರೆಂಟ್ ಇರಲ್ಲ
ಡಾ. ಶಿವಮೂರ್ತಿ ಮುರುಘಾ ಶರಣರ ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಬಂಧಿತರಾಗಿದ್ದ ಮುರುಘಾ ಶ್ರೀಗಳನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದ್ದು ಅವರು ದಾವಣಗೆರೆಯ ವಿರಕ್ತ ಮಠದ ಕಡೆ ಪ್ರಯಾಣ ಬೆಳೆಸಿದ್ದಾರೆ.
ನೋ ಕಾಮೆಂಟ್ ಎಂದ ಶರಣರು:
ಮಾಧ್ಯಮದವರ ಪ್ರಶ್ನೆಗೆ ಸಮಯ ಬಂದಾಗ ನಿಮ್ಮನ್ನು ಭೇಟಿ ಮಾಡುತ್ತೇನೆ. ಸದ್ಯ ಮೌನಕ್ಕೆ ಜಾರುತ್ತೇವೆ. ಮುಂದೆ ವಿಚಾರ ಹಂಚಿಕೊಳ್ಳುತ್ತೇನೆ, ಸೂಕ್ತ ಸಮಯ ಬರಲಿ, ಏನೇ ಇರಲಿ, ನೋ ಕಾಮೆಂಟ್ ಎಂದು ಶರಣರು ಉತ್ತರಿಸಿದರು.
+ There are no comments
Add yours