ಚೀಟಿಯಲ್ಲಿ ಯುವತಿಯ ಹೆಸರು ಬರೆದು ಕೋಣೆಗೆ ಕರೆಸಿಕೊಳ್ಳತ್ತಿದ್ದ ಮುರುಘಾ ಶ್ರೀ ಉಳಿದಂತೆ ಚಾರ್ಜ್ ಶೀಟ್ ಅಂಶ ಕೇಳಿದರೆ ಶಾಕ್

 

 

 

 

ಚಿತ್ರದುರ್ಗ: ಶಿವಮೂರ್ತಿ  ಮುರುಘಾ ಶರಣರ   ವಿರುದ್ಧ ಪೊಲೀಸರು 694 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದು ಅದರಲ್ಲಿ ಸಾಕಷ್ಟು ಶಾಕಿಂಗ್‌ ಆರೋಪಗಳನ್ನು ಮಾಡಲಾಗಿದೆ. ಉನ್ನತ ಮೂಲಗಳ ಮಾಹಿತಿ ಪ್ರಕಾರ ಮುರುಘಾ ಶ್ರೀ ಪ್ರತಿ ಭಾನುವಾರ ಮಕ್ಕಳನ್ನು ಕೋಣೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಈ ಎಲ್ಲಾ ಅಂಶಗಳನ್ನು  ದಾಖಲಿಸಲಾಗಿದೆ .

ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿರುವ ಅಂಶಗಳೇನು?:

1. ಮುರುಘಾ ಶ್ರೀಗಳು ತನ್ನ ಬಳಿಗೆ ಇಬ್ಬರು ಹುಡುಗಿಯರನ್ನು ಕಳುಹಿಸುವಂತೆ ಚೀಟಿ ಕಳುಹಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ. ಶ್ರೀ ಹೇಳಿದ ಇಬ್ಬರು ಹುಡುಗಿಯರನ್ನು ಶ್ರೀಗಳ ಬಳಿ ವಾರ್ಡ್‌ನ್ ರಶ್ಮಿ ಕಳುಹಿಸುತ್ತಿದ್ದಳು.

2. ಟ್ಯೂಷನ್ ಮಾಡುವದಾಗಿ ಭಾನುವಾರ ಸಂಜೆ ವಿದ್ಯಾರ್ಥಿನಿಯರನ್ನು ಮುರುಘಾ ಶರಣರು ಕರೆಸಿಕೊಳ್ಳುತ್ತಿದ್ದರು. ಟ್ಯೂಷನ್ ಮುಗಿದ ನಂತರ ಇಬ್ಬರು ಹುಡುಗಿಯರನ್ನು ಅಲ್ಲಿಯೇ ಉಳಿಸಿಕೊಳ್ಳುತ್ತಿದ್ದರು. ಕಸ ಹೊಡೆಯಬೇಕು ಎಂದು ವಿದ್ಯಾರ್ಥಿನಿಯರನ್ನು ಇರಿಸಿಕೊಳ್ಳುತ್ತಿದ್ದ ಶ್ರೀಗಳು .

3. ವಿದ್ಯಾರ್ಥಿನಿಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫೂಟ್ಸ್ ಕೊಡುತ್ತಿದ್ದ ಮುರುಘಾ ಶ್ರೀ. ಈ ವೇಳೆ

ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು. ತಾನು ಬೆತ್ತಲ್ಲಾಗಿ ವಿದ್ಯಾರ್ಥಿನಿಯರ ಸೊಂಟವನ್ನು ಮುಟ್ಟುತ್ತಿದ್ದರು. ನಮ್ಮ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿದ ಬಗ್ಗೆ ಪೊಲೀಸರಿಗೆ ಸಂತ್ರಸ್ತ ವಿದ್ಯಾರ್ಥಿನಿಯರು ನೀಡಿದ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ.

 

 

4. ನನ್ನ ಎದುರಿಗೆ ಮಧ್ಯಪಾನ ಮಾಡಿ ಅವಾಚ್ಯವಾಗಿ ನಿಂದಿಸಿದ್ರು. ಪ್ರತಿದಿನ ವಾರ್ಡನ್ ರಶ್ಮಿಗೆ ವಿದ್ಯಾರ್ಥಿನಿಯರ ಹೆಸರು ಬರೆದು ಕಳುಹಿಸುತ್ತಿದ್ದ ಶ್ರೀಗಳು.
ಚೀಟಿಯಲ್ಲಿದ್ದ ಹೆಸರಿನ ಯುವತಿರನ್ನು ಶ್ರೀಗಳ ಬಳಿಗೆ ಕಳುಹಿಸತ್ತಿದ್ದ ವಾರ್ಡನ್​ ರಶ್ಮಿ.

5. ಬಾಲಕಿಯರು ಶ್ರೀಗಳ ಬಳಿ ಹೋಗಲು ಒಪ್ಪದಿದ್ದಾಗ ಅವಾಚ್ಯವಾಗಿ ನಿಂದನೆ ಮಾಡಲಾಗುತ್ತಿತ್ತು. ಮನೆಯವರಿಗೆ ಸಹಾಯ ಮಾಡುವುದಾಗಿ ಹೇಳಿ ಅತ್ಯಾಚಾರ ಬಗ್ಗೆ ಬಾಯಿಬಿಡದಂತೆ ಬೆದರಿಕೆ ಹಾಕಲಾಗುತ್ತಿತ್ತು.

6. ವಿದ್ಯಾರ್ಥಿನಿಯರನ್ನು ಕೂರಿಸಿಕೊಂಡು ಮಧ್ಯಪಾನಮಾಡಿಸುತ್ತಿದ್ದ ಮುರುಘಾ ಶ್ರೀಗಳು. ಶ್ರೀಗಳಿಗೆ ಗಂಗಾಧರ್, ಬಸವಾದಿತ್ಯ ಸ್ವಾಮಿ, ರಶ್ಮಿ ಪರಮಶಿವಯ್ಯನವರು ಬೆಂಬಲ ನೀಡುತ್ತಿದ್ದರು.

7. ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಕಡೆಯವರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಹಾಸ್ಟೆಲ್​ನಲ್ಲಿ ಚರ್ಚೆಯಾಗುತ್ತಿದ್ದ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

8. ವಾರ್ಡನ್​ ರಶ್ಮಿ ಜೊತೆ ಜಗಳವಾಡಿ ಬೆಂಗಳೂರಿನಲ್ಲಿ ದೂರು ನೀಡಿದ್ದಾಗಿ ಯುವತಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ತರೆಲ್ಲರ ಹೇಳಿಕೆಗಳನ್ನು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ.

ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕವೂ ತನಿಖೆ ಮುಂದುವರೆಯಲಿದ್ದು ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಇನ್ನಷ್ಟು ಅಂಶಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

 

[t4b-ticker]

You May Also Like

More From Author

+ There are no comments

Add yours