ಮೊಳಕಾಲ್ಮೂರು ಕ್ರೀಡೆ ಮತ್ತು ಸಾಂಸ್ಕೃತಿಕ ವೈಭವದ ತವರೂರು: ಪ್ರಭಾಕರ ಮ್ಯಾಸ ನಾಯಕ

 

 

 

 

ಮೊಳಕಾಲ್ಮುರು: ಕ್ರೀಡೆ ,ಕಲೆ, ಸಂಸ್ಕೃತಿ ಹಾಗೂ ಬುಡಕಟ್ಟು ಸಂಪ್ರದಾಯವನ್ನು ಮೈಗೂಡಿಸಿಕೊಂಡಿರುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಸಾಂಸ್ಕೃತಿಕ ವೈಭವದ ತವರೂರು ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ ಬಣ್ಣಿಸಿದರು.
ಮೊಳಕಾಲ್ಮೂರು ತಾಲ್ಲೂಕು ನೇತ್ರನಹಳ್ಳಿ ಗ್ರಾಮದಲ್ಲಿ ಜೋಡೆತ್ತುಗಳಿಂದ ಕಲ್ಲುಕಂಬ ಎಳೆಯುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
 ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಗರೀಕರು ಪ್ರಾಮಾಣಿಕತೆಗೆ ನಂಬಿಕೆಗೆ ಅತ್ಯಂತ ಪ್ರೀತಿ ಪಾತ್ರರಾಗಿದ್ದಾರೆ. ಇಲ್ಲಿನ ಜನ ಯಾರನ್ನು ಇದುವರೆಗೂ ಕೈ ಬಿಟ್ಟಿಲ್ಲ ನಂಬಿದವರಿಗೆ ಕೈ ಕೊಟ್ಟ ಉದಾಹರಣೆಯೇ ಇಲ್ಲ.ಆದರೆ ಯಾರನ್ನು ನಂಬಿ ಹೆಚ್ಚು ಪ್ರೀತಿ ವಿಶ್ವಾಸವನ್ನು ಇಟ್ಟಿದ್ದೆವೋ ಅದೇ ಜನ ಇಲ್ಲಿನ ಜನರಿಗೆ ಮೋಸ ಮಾಡುತ್ತಿರುವುದನ್ನು ಕಂಡು ಕಾಣದಂತೆ ಇರುವುದು ಸರಿಯಲ್ಲ ಇದನ್ನು ಪ್ರತಿಭಟಿಸುವಂತ ಕಾಲ ಸನ್ನಿಹಿತವಾಗಿದೆ ಎಂದು ಪ್ರಭಾಕರ ತಿಳಿಸಿದರು.
 ನೇತ್ರನಹಳ್ಳಿ ಗ್ರಾಮದಲ್ಲಿ ಸಾಂಸ್ಕೃತಿಕ, ಕಲೆ ಮತ್ತು ಯಾವುದೇ ಕ್ರೀಡಾ ಕಾರ್ಯಕ್ರಮ ಆಯೋಜನೆ ಮಾಡಿದರು ಕೂಡ ಇಲ್ಲಿನ ಜನರ ಜೊತೆ ಇದ್ದು ಎಲ್ಲ ರೀತಿಯಲ್ಲಿ ಸಹಕಾರ ನೀಡುವುದಾಗಿ ಪ್ರಭಾಕರ ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಗುರುತಿಸಿ ನನಗೆ ಟಿಕೆಟ್ ನೀಡಿದರೆ ನೀವೆಲ್ಲರೂ ವಿಶ್ವಾಸ ಇಟ್ಟು ನನಗೆ ಒಂದು ಅವಕಾಶ ಮಾಡಿಕೊಡಿ ಇಡೀ ರಾಜ್ಯದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದಾಗಿ ಪ್ರಭಾಕರ ತಿಳಿಸಿದರು.
 ಇಲ್ಲಿನ ಹತ್ತು ಸಾವಿರ ಯುವಕ ಯುವತಿಯರಿಗೆ ಮಹಿಳೆಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದರು ಅದೇ ರೀತಿ ರೈತನ ಬವಣೆಯ ಬದುಕಿನಲ್ಲಿ ಬದಲಾವಣೆ  ತರುವುದಾಗಿ ತಿಳಿಸಿದರು.
 ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಮ್ಮ ಕೊಲ್ಲಾರಪ್ಪ, ಸದಸ್ಯರಾದ ಕೆ ಸೂರಯ್ಯ, ಶ್ರೀಮತಿ ಕೆಟಿ ತಿಪ್ಪಮ್ಮ, ಶ್ರೀಮತಿ ಕವಿತಮ್ಮ, ಶಿಕ್ಷಕರಾದ ಮಂಜಣ್ಣ, ಮುಖಂಡರಾದ ಗುರುಸ್ವಾಮಿ ಹಾಗೂ ಗಜ ಫ್ರೆಂಡ್ಸ್ ತಂಡದ ಎಲ್ಲ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours