ಬಿಜೆಪಿಯದು ಒಂದು ಕಣ್ಣಿಗೆ ಸುಣ್ಣ , ಒಂದು ಕಣ್ಣಿಗೆ ಬೆಣ್ಣೆ ನೀತಿ :ಎಂ.ಡಿ.ಲಕ್ಷ್ಮೀನಾರಾಯಣ

 

 

 

 

ಚಿತ್ರದುರ್ಗ, ಫೆ ೧೯ : ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರ ಮೇಲ್ವರ್ಗದವರಿಗೆ ಒಂದು ನೀತಿಯಾದರೆ ಹಿಂದುಳಿದ ಅಲ್ಪಸಂಖ್ಯಾತ ವರ್ಗಕ್ಕೆ ಮತ್ತೊಂದು ನೀತಿಯನ್ನು ಮಾಡುತ್ತಾ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆಯನ್ನು ಇಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಂ. ಡಿ. ಲಕ್ಷ್ಮೀನಾರಾಯಣ ಆರೋಪಿಸಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಶುಕ್ರವಾರ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾಗಿ ಎನ್.ಡಿ. ಕುಮಾರ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಬರುವ ಸುಮಾರು ೪೨ ಸಮಾಜಗಳಿಗೆ ದ್ರೋಹ ಮಾಡಿ, ಕೇವಲ ಒಂದು ಸಮಾಜಕ್ಕೆ ವರದಿ ಕೇಳುವುದು ಸರಿಯೇ?” ಎಂದು ಸರ್ಕಾರವನ್ನು ಪ್ರಶ್ನಿಸಿದರು.

 

 

“೧೦೨ ಸಮಾಜಗಳು ಮೀಸಲಾತಿಗೆ ಸೀಮಿತವಾಗಿವೆ. ಅದರಲ್ಲೂ ಕೂಡ ಬಡ ಸಮಾಜಗಳು, ದುಡಿಯುವ ಸಮಾಜಗಳಿಗೆ ಹಿಂದುಳಿದ ವರ್ಗದಲ್ಲಿ ಸ್ಥಾನ ಮಾನಗಳೂ ಇಂದಿಗೂ ಸಿಕ್ಕಿಲ್ಲ” “ಹಿಂದುಳಿದ ವರ್ಗಗಳ ೨ಎಗೆ ಸೇರಲಿಕ್ಕೆ ಅಪೇಕ್ಷೆ ಪಟ್ಟಿರುವ ಸಮಾಜಗಳ ಬಗ್ಗೆ ಪ್ರಶ್ನೆ ಕೇಳಿದಾಗ ಸುಮಾರು ೪೩ ಸಮಾಜಗಳು, ಸುಮಾರು ೨೦ ವರ್ಷಗಳಿಂದ ೨ಎಗೆ ಸೇರಿಸಬೇಕೆಂದು ಅರ್ಜಿ, ಮನವಿಯನ್ನು ಸಲ್ಲಿಸುತ್ತಾ ಬಂದಿವೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಆದ ಒಂದು ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕಾದ ಕರ್ತವ್ಯ ಸರ್ಕಾರದ್ದಾಗಿದೆ” ಎಂದರು.

“ಸರ್ಕಾರ ಏಕಾಏಕಿ ಮುಂದುವರಿದ ಸಮಾಜಗಳನ್ನು ೨ಎಗೆ ಸೇರಿಸಲಿಕ್ಕೆ ಶಿಫಾರಸು ಮಾಡಲಿಕ್ಕೆ ಒತ್ತಡ ತರುವುದು ಒಂದು ಕಡೆಯಾಗಿದೆ. ೨ಎಗೆ ಇರುವ ೧೫% ಮೀಸಲಾತಿ ಹೆಚ್ಚಳ ಮಾಡಲಿಕ್ಕೆ ಯಾವುದೇ ಕಾರಣಕ್ಕೂ ಕೂಡ ಸರ್ಕಾರ ಕೈಯಲ್ಲಿ ಆಗುವುದಿಲ್ಲ” ಎಂದು ಲಕ್ಷ್ಮೀನಾರಾಯಣ ಮುಂದುವರಿದ ಸಮಾಜಗಳು ಮೀಸಲಾತಿ ಕೇಳುತ್ತಿರುವ ಸರಿಯಲ್ಲ. ನಾನು ರಾಜ್ಯ ಸುತ್ತುವ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ, ತಾಲೂಕುಗಳಲ್ಲಿ ಸಣ್ಣ ಸಮಾಜಗಳು ಧ್ವನಿ ಎತ್ತದೆ ಆಗದೇ ಇರುವಂತರು ನಮ್ಮ ಮೂಲಕ ಹೇಳುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್,ಸಂಪತ್,ಮೈಲಾರಪ್ಪ ಇದ್ದರು.

[t4b-ticker]

You May Also Like

More From Author

+ There are no comments

Add yours