ಹೆಚ್ಚುವರಿ ಬ್ಯಾರೇಜ್ ನಿರ್ಮಿಸಲು ಆರ್ಥಿಕ ನೆರವಿಗೆ ಸಚಿವ ಚೆಲುವರಾಯಸ್ವಾಮಿಗೆ ಮನವಿ ಮಾಡಿದ ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ: ಚಳ್ಳಕೆರೆ ತಾಲ್ಲೂಕು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳು ಮಳೆಯ ಅಭಾವವನ್ನು ಎದುರಿಸುತ್ತಿದ್ದು, ಬರಪೀಡಿತ ಪ್ರದೇಶಗಳಾಗಿವೆ. ಪ್ರಸ್ತುತ ರಾಜ್ಯದಲ್ಲಿ ಜಾರಿ ಇರುವ ಫಸಲ್ ಬೀಮಾ ಯೋಜನೆ ಅವೈಜ್ಞಾನಿಕತೆಯಿಂದ ಕೂಡಿದೆ ಎಂಬ ಆರೋಪ ಮಾಡಿದ್ದೀರಿ, ಈ ಯೋಜನೆಯಡಿ ರಾಜ್ಯದ ರೈತರು ೪೦ ಕೋಟಿ ಪಾವತಿಸಿದರೆ ೨೪೦೦ ಕೋಟಿ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಲಿದ್ದು ಇದರ ಸದುಪಯೋಗವನ್ನು ರಾಜ್ಯ ರೈತರು ಪಡೆಯಲು ಮುಂದಾಗಬೇಕೆAದು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಮಂಗಳವಾರ ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯ ಚೌಳೂರು ಬ್ಯಾರೇಜ್, ಜುಂಜರಗುAಟೆ ಗ್ರಾಮದಲ್ಲಿ ಒಣಗಿದ ಶೇಂಗಾ ಬೆಳೆಯನ್ನು ವೀಕ್ಷಿಸಿದರು.ರಾಜ್ಯದಲ್ಲಿ ರೈತರು ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸುತ್ತಾರೆ. ಅದು ಗ್ರಾಮದ ನಾಲ್ಕೈದು ಜನರಿಗೆ ಅನುಕೂಲವಾಗುತ್ತದೆ. ಆದರೆ ಸರ್ಕಾರ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳ ಮೂಲಕ ಎಲ್ಲಾ ರೀತಿಯ ಅನುಕೂಲತೆ ಮಾಡುತ್ತಿದೆ. ಈ ಭಾಗದಲ್ಲಿ ಶಾಸಕರ ಕೋರಿಕೆಯಂತೆ ಹೆಚ್ಚುವರಿ ಬ್ಯಾರೇಜ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳೊA ದಿಗೆ ಚರ್ಚಿಸುವ ಭರವಸೆ ನೀಡಿದರು. ರೈತರು ವಿಚಲಿತರಾಗದೆ ಸರ್ಕಾರದ ಹಲವಾರು ಯೋಜನೆಗಳ ಸದುಪಯೋಗ ಪಡೆದು ಆರ್ಥಿಕ ಅಭಿವೃದ್ದಿ ಹೊಂದಬೇಕು. ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಮೈಸೂರಿನಲ್ಲಿ ಜಾರಿಯಾಗಲಿದ್ದು, ರಾಜ್ಯದ ಸರ್ಕಾರ ಶತದಿನಗಳ ಉತ್ತಮ ಆಡಳಿತ ಜನರಿಗೆ ನೀಡಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಹೆಚ್ಚಿನ ಅನುಕೂಲತೆಗಳನ್ನು ಕಲ್ಪಿಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಜುಂಜರಗುAಟೆ ಗ್ರಾಮದ ಜಯಮ್ಮ ಎಂ¨ ಮಹಿಳೆಯ ಜಮೀನಲ್ಲಿ ಶೇಂಗಾ ಬೆಳೆ ಒಣಗಿ ಲಕ್ಷಾಂತರ ರೂ ನಷ್ಟವಾಗಿದೆ ಎಂದು ಕಣ್ಣಿರು ಹಾಕಿದಾಗ ಸಮಧಾನಪಡಿಸಿದ ಸಚಿವರು ತಮ್ಮ ವೈಯುಕ್ತಿಕವಾಗಿ ೨೫ ಸಾವಿರ ಆರ್ಥಿಕ ನೆರವು ನೀಡಿದರು.

 

 

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕಳೆದ ೨೦೧೮-೧೯ರ ಆಯವ್ಯಯದಲ್ಲಿ ಜಿಲ್ಲೆಗೆ ಅಂದಿನ ಸರ್ಕಾರ ೫೦ ಕೋಟಿ ಅನುದಾನವನ್ನು ಕೃಷಿ ಚಟುವಟಿಕೆಗೆ ನೀಡಿತ್ತು. ಈ ಭಾಗದ ರೈತರು ಹೆಚ್ಚು ನಷ್ಟದಲ್ಲಿದ್ದು, ಪ್ರಸ್ತುತ ೨೦೨೩-೨೪ರ ಆಯವ್ಯಯದಲ್ಲೂ ಸಹ ೫೦ ಕೋಟಿ ಅನುದಾನ ನಮ್ಮ ಜಿಲ್ಲೆಗೆ ನೀಡಬೇಕೆಂದು ಮನವಿ ಮಾಡಿದರು. ಕ್ಷೇತ್ರದ ಇನ್ನೂ ಕೆಲವೆಡೆ ಹೆಚ್ಚುವರಿ ಬ್ಯಾರೇಜ್ ನಿರ್ಮಿಸಲು ಆರ್ಥಿಕ ನೆರವು ನೀಡಬೇಕು, ಖಾಸಗಿ ಕಂಪನಿಗಳ ಬೆಳೆ ವಿಮೆ ಹಣ ಪಾವತಿ ಬಗ್ಗೆ ರೈತರಿಗೆ ಅನ್ಯಾಯವಾಗಿದ್ದು ಈ ಬಗ್ಗೆ ಕ್ರಮ ವಹಿಸಬೇಕು. ಸಾಣಿಕೆರೆ ಗ್ರಾಮದಲ್ಲಿ ೯೨ ಎಕರೆ ಪ್ರದೇಶದಲ್ಲಿ ಒಣ ಬೇಸಾಯ ಕೃಷಿ ಸಂಶೋಧನಾ ಕೇಂದ್ರವನ್ನು ಆರಂಭಿಸಬೇಕೆAದು ಒತ್ತಾಯಿಸಿದರು.

ರೈತ ಮುಖಂಡರಾದ ಚಿಕ್ಕಣ್ಣ, ಪ್ರಕಾಶ್, ದೇವರಾಜು ಮುಂತಾದವರು ಮಾತನಾಡಿ, ಶಾಸಕರಾದ ಟಿ.ರಘುಮೂರ್ತಿ ಅವರ ಶ್ರಮದಿಂದ ನಾಲ್ಕು ಕಡೆ ಬ್ಯಾರೇಜ್ ನಿರ್ಮಾಣವಾದ ಹಿನ್ನೆಲೆಯಲ್ಲಿ ಈ ಭಾಗದ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಬಹುತೇಕ ಕೃಷಿ ಭೂಮಿ ನೀರಾವರಿಯಾಗಿ ಪರಿವರ್ತನೆಯಾಗಿದೆ. ಬಾಕಿ ಉಳಿದ ಪ್ರದೇಶದಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ರೈತರ ಲಕ್ಷಾಂತರ ರೂ ಬೆಳೆನಷ್ಟ ಪರಿಹಾರ ಹಣ ಬಾಕಿ ಇದ್ದು ಅದನ್ನು ಪಾವತಿಸಬೇಕು ಎಂದರು.
ಚಿತ್ರದುರ್ಗ ಶಾಸಕ ವೀರೇಂದ್ರ ಕೃಷಿ ಆಯುಕ್ತ ಎಸ್.ವೈ.ಪಾಟೀಲ್, ವಾಟರ್‌ಶೆಡ್ ಆಯುಕ್ತ ಗಿರೀಶ್, ಜೆಡಿ ಎನ್.ಮಂಜುನಾಥ, ಡಿಡಿ ಶಿವಕುಮಾರ್, ಪ್ರಭಾಕರ್, ಎಡಿಎ ಅಶೋಕ್, ಜೀವನ್, ಡಿವೈಎಸ್ಪಿ ರಾಜಣ್ಣ, ಸಿಪಿಐ ಸಮೀವುಲ್ಲಾ, ಪಿಎಸ್‌ಐ ಎಂ.ಕೆ.ಬಸವರಾಜು, ಕಾಂಗ್ರೆಸ್ ಮುಖಂಡರಾದ ಎಸ್.ಚನ್ನಕೇಶವ, ಆರ್.ಪ್ರಸನ್ನಕುಮಾರ್, ಜೆ.ತಿಪ್ಪೇಸ್ವಾಮಿ, ಎಂ.ಚೇತನ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯವಿಜಯಕುಮಾರ್, ಶಿವಲಿಂಗಪ್ಪ, ಗುಜ್ಜಾರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

[t4b-ticker]

You May Also Like

More From Author

+ There are no comments

Add yours