ಸಂಕಷ್ಟದ ಸಮಯದಲ್ಲಿ ಎಲ್ಲಾ ಅಧಿಕಾರಿಗಳು ಸಂತ್ರಸ್ತರ ಜೊತೆ ನಿಲ್ಲಿ, ಸಬೂಬು ಹೇಳದೆ ವಿಶೇಷ ಕಾಳಜಿಯಿಂದ ಕೆಲಸ ಮಾಡಿ : ಶಾಸಕ ಟಿ.ರಘುಮೂರ್ತಿ ಸೂಚನೆ

 

 

 

 

ಚಳ್ಳಕೆರೆ:ಮಳೆಯಿಂದ ಸಂತ್ರಸ್ತರಾಗಿ ಸಂಕಷ್ಟದಲ್ಲಿರುವ  ಎಲ್ಲಾ ಜನರನ್ನು   ಸುರಕ್ಷತೆ ಮಾಡುವ ಕೆಲವನ್ನು ತಾಲೂಕಿನ ಎಲ್ಲಾ ಹಂತದ ಅಧಿಕಾರಿಗಳು ಮಾಡುವ ಕಾಲ ಈಗ ಬಂದಿದ್ದು  ಒಟ್ಟಾಗಿ ಕೆಲಸ ಮಾಡಿ ಎಂದು ಶಾಸಕ ಟಿ.ರಘುಮೂರ್ತಿ ಸೂಚಿಸಿದರು.‌‌

ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ತಾಲೂಕಿನಾದ್ಯಂತ ಸುಮಾರು ಒಂದು ವಾರದಿಂದ ಸುರಿದ ಅಕಾಲಿಕ ಮಳೆಗೆ ವೇದಾವತಿ ನದಿಯು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಳ್ಳಿಗಳಿಗೆ ನೀರು ನುಗ್ಗಿ ಅಪಾರ ಬೆಳೆ ಮತ್ತು ಜನಜಾನುವಾರುಗಳಿಗೆ ನಷ್ಟವಾಗಿದೆ. 30-40 ವರ್ಷಗಳಿಂದ ತುಂಬದೆ ಇರುವ ಕೆರೆ ಕಟ್ಟೆಗಳು ತುಂಬಿ ಜನರಲ್ಲೊ‌ಸ

 

 

ಇಂತಹ ಸಂದರ್ಭದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕಿನ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ವಿಶೇಷ ಕಾಳಜಿಯೊಂದಿಗೆ ಕೆಲಸ ಮಾಡುವ ಸಂದರ್ಭ ಇದಾಗಿದೆ. ಕಳೆದ 10 ವರ್ಷಗಳಿಂದ ಶಾಸಕನಾಗಿದ್ದು ಇಂತಹ ಸಮಯ ಎಂದು ಬಂದಿರಲಿಲ್ಲ. ಮನುಷ್ಯನ ಕಷ್ಟ ಬರುವುದು ಸಹಜ ಅದನ್ನು ಮೆಟ್ಟಿ‌ ನಿಲ್ಲಬೇಕು. ಎಲ್ಲಾ ಹಳ್ಳಿಗಳಿಗೆ ಇಓ, ತಹಶೀಲ್ದಾರ್, ಪಿಡಿಓ, ಗ್ರಾಮ ಲೆಕ್ಕಧಿಕಾರಿಗಳು, ಕೃಷಿ ಇಲಾಖೆ, ತೋಟಗಾರಿಕೆ, ವಿದ್ಯುತ್ ಇಲಾಖೆ ಸೇರಿ ಎಲ್ಲಾರೂ ಕೈಜೋಡಿಸಿ ಜನರನ್ನು ಕಷ್ಟದಿಂದ ಪಾರು ಮಾಡಬೇಕಿದೆ.ನಿತ್ಯ ಕೆಲಸ ಮಾಡುವ ಶೈಲಿಗಿಂತ ಭಿನ್ನವಾಗಿ ಕೆಲಸ ಮಾಡಿದರೆ ನಮ್ಮ ಜನರನ್ನು ರಕ್ಷಣೆ ಮಾಡಬಹುದು ಎಂದು ಅಧಿಕಾರಿಗಳಿಗೆ  ಉತ್ಸಾಹ ಇಮ್ಮಡಿಗೊಳಿಸುವ ಕೆಲಸವನ್ನು ಶಾಸಕರು ಮಾಡಿದರು.

ಸರ್ಕಾರಿ ಕೆಲಸದ ಸಮಯವನ್ನು ಬಿಟ್ಟು  ಪ್ರತಿ ಹಳ್ಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು. ಕಚೇರಿ ಕೆಲಸದ ರೀತಿ ಸಮಯ ಇಟ್ಟುಕೊಳ್ಳದೇ ಜನರಿಗೋಸ್ಕರ ಕೆಲಸ ಮಾಡಬೇಕು. ತಾಲೂಕು ಹಂತದಲ್ಲಿ  ಆಗದ ಕೆಲಸವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು. ನಾನು ಸಹ ಎಲ್ಲಾ ಹಂತದಲ್ಲಿ ನಿಮ್ಮ ಜೊತೆ ಇರುತ್ತೇನೆ ಒಟ್ಟಿನಲ್ಲಿ  ಜನರು ಕಷ್ಟದಿಂದ ಹೊರ ತರುವ ಕೆಲಸ ಎಲ್ಲಾರೂ ಒಟ್ಟಾಗಿ ಮಾಡಬೇಕು ಎಂದು ಖಡಕ್ ಆಗಿ‌  ಆಧಿಕಾರಿಗಳಿಗೆ ತಾಕೀತು ಮಾಡಿದರು.

ಇಂತಹ ಪ್ರವಾಹದ ಸಂದರ್ಭದಲ್ಲಿ ಕೆಲವೊಂದು ಕಾನೂನು ರಿಯಾಯಿತಿ ಇರುತ್ತದೆ. ಕಾನೂನು ನೆಪ ಹೇಳಿ ಜನರಿಗೆ ಸ್ಪಂದಿಸದೇ ಸಬೂಬು ಹೇಳಬೇಡಿ. ಎಲ್ಲಾವನ್ನು ನಾನು ಗಮನಿಸುತ್ತಿದ್ದಿ ಒಟ್ಟಾರೆಯಾಗಿ ಎಲ್ಲಾ ಸಂತ್ರಸ್ತರಿಗೆ ಯಾವುದೇ ಕೊರತೆಯಾಗದಂತೆ ಮತ್ತು ಆಗಿರುವ ನಷ್ಟದ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ತುರ್ತಾಗಿ ಮಾಡಬೇಕು ಎಂದು  ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಎನ್ ರಘುಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೊನ್ನಯ್ಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧಿಕಾರಿಗಳು , ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಸಹಾಯಕರು ಸಾರ್ವಜನಿಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours