ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ದಿಸಿಕೊಳ್ಳಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

 

 

ನಗರದ ಓನಕರ ಓಬವ್ವ ಕ್ರೀಡಾಂಗಣದಲ್ಲಿ  ಪದವಿ ಪೂರ್ವ ಶಿಕ್ಷಣ ಇಲಾಖೆ ಚಿತ್ರದುರ್ಗ ಹಾಗೂ ಶ್ರೀ ಕಂಪಳರಂಗಸ್ವಾಮಿ ಪದವಿ ಪೂರ್ವ ಕಾಲೇಜು ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಚಿತ್ರದುರ್ಗ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಧ್ವಜರೋಹಣ ಮಾಡುವ ಮುಖಾಂತರ ಚಾಲನೆ ನೀಡಿ ಮಾತನಾಡಿದರು.
ಭಾರತ ದೇಶದಲ್ಲಿ ಒಲಂಪಿಕ್, ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಕ್ರೀಡೆಗೆ ಸಾಕಷ್ಟು ಅನುದಾನ ನೀಡುವ ಮುಖಾಂತರ ಯುವಕರು ಸದೃಢ ದೇಹ ಹೊಂದಲು ಸಹಕಾರಿಯಾಗಿದೆ‌.ಯುವಕರು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕ್ರೀಡೆಯಲ್ಲಿ ಭಾಗವಹಿಸುವಂತಹ
ವಿದ್ಯಾರ್ಥಿಗಳನ್ನು ಎಲ್ಲಾ ಕಾಲೇಜು ಹಂತದಲ್ಲಿ ತಯಾರು ಮಾಡಬೇಕು ಎಂದರು.
ಯುವಕರಲ್ಲಿ ಒಂದಲ್ಲಾ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ‌.ಈ ನಿಟ್ಟಿನಲ್ಲಿ  ಕ್ರಿಕೆಟ್ , ಕಬ್ಬಡ್ಡಿ, ವಾಲಿಬಾಲ್ ,ಫುಟ್‌ಬಾಲ್‌ ಸೇರಿ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಸ್ವರ್ಧೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು‌. ನಮ್ಮ ಜಿಲ್ಲೆಯಿಂದ ಹೆಚ್ಚು  ವಿದ್ಯಾರ್ಥಿಗಳು ಕ್ರೀಡೆಯಲ್ಲಿ  ಭಾಗವಹಿಸಬೇಕು  ಎಂದು ಮಕ್ಕಳಿಗೆ ಶುಭ ಕೋರಿದರು.
ದೈಹಿಕ ಶಿಕ್ಷಕರಿಗೆ ಶಾಸಕರಿಂದ ಚಾರ್ಜ್: ಕ್ರೀಡೆ ಉದ್ಘಾಟನೆ ಸಂದರ್ಭದಲ್ಲಿ ಮಕ್ಕಳನ್ನು ಕ್ರೀಡಾ ಕೂಟ ಉದ್ಘಾಟನೆ ಯಾವ ರೀತಿ ನಿಲ್ಲಿಸಬೇಕು. ಮಾರ್ಚಫಾಸ್ಟ್ ಮಾಡಿಸುವಲ್ಲಿ ಎಡವಟ್ಟು ಮಾಡಿದ್ದಿರಾ ಒಂದು ಶಿಸ್ತಿಲ್ಲ ಎಂದು ಹರಿಹಾಯ್ದರು. ಸರ್ಕಾರ ಸುತ್ತೋಲೆ ಬಂದಿದೆ ಎಂದು ಕ್ರೀಡಾಕೂಟ ಕಾಟಚಾರಕ್ಕೆ  ಏರ್ಪಡಿಸಬೇಡಿ ಮತ್ತು ಉತ್ತಮ ಕ್ರೀಡೆಯ ಮುಖಾಂತರ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿಗಾಗಿ ಸ್ವರ್ಧೆ ಏರ್ಪಡಿಸಿ ಎಂದು ಆಯೋಜಕರ ವಿರುದ್ದ ಕಿಡಿಕಾರಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ರಾಜು,ಪ್ರಾಂಶುಪಾಲರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಆಯೋಕರು ಕಂಪಳರಂಗ ಕಾಲೇಜಿನ ಪ್ರಾಂಶುಪಾಲರಾದ ವಸಂತ ಮತ್ತು ಎಲ್ಲಾ ಕಾಲೇಜಿ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು  ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours