ಸಂಚಾರಿ ಆರೋಗ್ಯ ತಪಾಸಣಾ ವಾಹನಕ್ಕೆ ಸಚಿವ ಡಿ. ಸುಧಾಕರ್ ಚಾಲನೆ

 

 

 

 

chitradurga: ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರ ಆರೋಗ್ಯ ಸೇವೆಗೆ ಆರಂಭಿಸಿರುವ ಸಂಚಾರಿ ಆರೋಗ್ಯ ತಪಾಸಣಾ ವಾಹನಕ್ಕೆ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಡಿ.ಸುಧಾಕರ್  (D.Sudhakar) ಚಾಲನೆ ನೀಡಿದರು.

 

 

ಹಿರಿಯೂರು ಪಟ್ಟಣದ ನೆಹರು ಮೈದಾನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ “ಮುನ್ನೆಚ್ಚರಿಕೆ ಆರೋಗ್ಯ ತಪಾಸಣೆ” ಮೊಬೈಲ್ ವಾಹನಕ್ಕೆ ಹಸಿರು ನಿಶಾನೆ ತೋರಿದರು.

ಇದನ್ನೂ ಓದಿ:, ಮುರುಘಾ ಶರಣರು ಜೈಲಿನಿಂದ ರಿಲೀಸ್, ಶರಣರು ಹೇಳಿದ್ದೇನು
ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಮತ್ತ ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಭಿತರಿಗೆ “ಮುನ್ನೆಚ್ಚರಿಕೆ ಆರೋಗ್ಯ ತಪಾಸಣೆ’’ ಯೋಜನೆಯಡಿ ವೈದ್ಯಕೀಯ ಪರೀಕ್ಷೆ, ಸೇವೆಗಳನ್ನು ತುಮಕೂರಿನ ಮೆ.ಅಶ್ವಿನಿ ಹಾಸ್ಟಿಟಲ್ ಸಂಸ್ಥೆಯವರು ಒದಗಿಸುತ್ತಿದ್ದಾರೆ.   ಈ ಸಂಸ್ಥೆಯವರಿಗೆ ಜಿಲ್ಲೆಯ ಆರು ತಾಲ್ಲೂಕಿನ 33,500 ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಗಳಿಗೆ ಆರೋಗ್ಯ ತಪಾಸಣೆಯ ಗುರಿ ನಿಗದಿಪಡಿಸಲಾಗಿದ್ದು, ಎಲ್ಲರೂ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯರ ಸಮಾಲೋಚನೆ-ಸಂಪೂರ್ಣ ದೈಹಿಕ ಪರೀಕ್ಷೆ, ಲಿವರ್ ಕಾರ್ಯ ಪರೀಕ್ಷೆ, ಅಡಿಯೋಮೆಟ್ರಿ ಸ್ಕ್ರೀನ್ ಟೆಸ್ಟ್, ದೃಷ್ಠಿ ತಪಾಸಣಾ ಪರೀಕ್ಷೆ, ಸಿಬಿಸಿ ಪರೀಕ್ಷೆ, ಇಎಸ್‍ಆರ್ ಪರೀಕ್ಷೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷೆ, ಕಿಡ್ನಿ ಕಾರ್ಯ ಪರೀಕ್ಷೆ, ಮಲೇರಿಯಾ ಪ್ಯಾರಸೈಟ್ ಪರೀಕ್ಷೆ, ಮೂತ್ರ ಪರೀಕ್ಷೆ, ರಕ್ತದ ಗಂಪು ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಒಟ್ಟು 20 ಪರೀಕ್ಷೆಗಳ ಆರೋಗ್ಯ ತಪಾಸಣೆ ನಡೆಸಲಾಗುವುದು.
ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಕಾರ್ಮಿಕ ನಿರೀಕ್ಷಕರಾದ ಅಲ್ಲಾಭಕ್ಷ್, ಟಿ.ಕುಸುಮ  ಹಾಗೂ ಸಿಬ್ಬಮದಿ ವರ್ಗದವರು, ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ತುಮಕೂರಿನ ಅಶ್ವಿನಿ  ಆಸ್ಪತ್ರೆ ಸಂಸ್ಥೆಯ ಸಿಬ್ಬಂದಿ ಇದ್ದರು.

[t4b-ticker]

You May Also Like

More From Author

+ There are no comments

Add yours