ಮಣಿಪಾಲ್ ಆರೋಗ್ಯ ಕಾರ್ಡ್ ಪಡೆದರೆ ವೈದ್ಯರ  ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ರಿಯಾಯಿತಿ: ಮೋಹನ್ ಶೆಟ್ಟಿ

 

 

 

 

ಚಿತ್ರದುರ್ಗ ಜೂ. ೨೩: ಮಣಿಪಾಲ್ ಆರೋಗ್ಯ ಕಾರ್ಡ್ ಪಡೆಯುವುದರಿಂವ ವೈದ್ಯರ  ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ಸಾಕಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲ್‌ದ ವ್ಯವಸ್ಥಾಪಕರಾದ ಮೋಹನ್ ಶೆಟ್ಟಿರವರು ತಿಳಿಸಿದ್ದಾರೆ.

 

 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟ್ಟುಕುವಂತೆ ಮಾಡುವ ಉದ್ದೇಶದಿಂದ ಈ ಕಾರ್ಡನ್ನು ಪ್ರಾರಂಭಮಾಡಲಾಗಿದೆ. ಸಣ್ಣ ಮೊತ್ತವನ್ನು ಪಾವತಿ ಮಾಡುವುದರ ಮೂಲಕ ಹಲವಾರು ರೀತಿಯ ಪ್ರಯೋಜನವನ್ನು ರಿಯಾಯಿತಿ ರೂಪದಲ್ಲಿ ಪಡೆಯಬಹುದಾಗಿದೆ. ಈ ಯೋಜನೆಯು ರಾಜ್ಯದ ೧೨ ಜಿಲ್ಲೆಗಳಲ್ಲಿ ವಿಸ್ತರಣೆಯಾಗಿದೆ. ಇದ್ದಲ್ಲದೆ ಕೇರಳ, ಗೋವಾ, ರಾಜ್ಯಗಳಲ್ಲಿಯೂ ಸಹಾ ಸದಸತ್ವನ್ನು ಹೊಂದಿದೆ ಎಂದರು.
ಈ ಕಾರ್ಡನ್ನು ಪಡೆದವರಿಗೆ ವೈದ್ಯರ  ಸಮಾಲೋಚನೆಯಲ್ಲಿ ಶೆ.೫೦, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೆ. ೩೦ ಸಿ.ಟಿ.ಎಂ.ಆರ್. ಆಲ್ಟಾಸೌಂಡ್‌ಗಳಲ್ಲಿ ಶೆ.೨೦ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹೊರ ರೋಗಿ ವಿಧಾನಗಳಲ್ಲಿ ಮತ್ತು ಮೇಧುಮೇಹ ಪಾದ ತಪಾಸಣೆಯಲ್ಲಿ ಶೆ.೨೦ ಔಷದಾಲಯದಲ್ಲಿ ಶೇ ೧೨ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಈ ಕಾರ್ಡ ಹೊಂದಿರುವವರು ಕರಾವಳಿ ಕರ್ನಾಟಕ ಮತ್ತು ಗೋವಾದಲ್ಲಿಯೂ ಅನ್ವಯವಾಗಲಿದೆ. ಸಾಮಾನ್ಯ ವಾರ್ಡನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರೆತುಪಡಿಸಿ ಶೇ. ೨೫ ರಷ್ಟು ರಿಯಾಯಿತಿ, ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡನಲ್ಲಿ ರೋಗಿಗಳಿಗೆ ಸರ್ಕಾರ ಅನುಮೋದಿತ ಪ್ಯಾಕೇಜ್ ಮೇಲೆ ಶೇ. ೧೦ ರಷ್ಟು ರಿಯಾಯಿತಿ ಸಿಗಲಿದೆ ಮಣಿಪಾಲ್ ಕಾರ್ಕಳ, ಉಡುಪಿ,ಮಂಗಳೂರು, ಕಟೀಲ್‌ಗಳಲ್ಲಿಯೂ ಸಹಾ ಚಿಕಿತ್ಸೆಯನ್ನು ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ೩.೫೦ ಲಕ್ಷ ಸದಸ್ಯರಿದ್ದಾರೆ. ಇದರಲ್ಲಿ ಶೇ.೭೦ ರಷ್ಟು ರೋಗಿಗಳು ಓಪಿಡಿ ಹಾಗೂ ಶೇ. ೪೦ ರಷ್ಟು ಜನ ಒಳ ರೋಗಿಗಳಾಗಿ ಚಿಕಿತ್ಸೆಯ ಲಾಭವನ್ನು ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷ ೨೫೦೦ ಜನ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಮೋಹನ್ ಶೆಟ್ಟಿ ತಿಳಿಸಿದರು.
ಗೋಷ್ಟಿಯಲ್ಲಿ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಶ್ರೀನಿವಾಸ್ ಭಾಗವತ್, ಅನಿಲ್ ನಾಯಕ್, ಮಣಿಪಾಲ್ ಆರೋಗ್ಯ ಕಾರ್ಡನ ಮುಖ್ಯ ಸಂಯೋಜಕರಾದ ಕೆಂಚನಗೌಡ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours