ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ನ:7: ತುಳಿತಕ್ಕೊಳಗಾದ ಎಸ್ಸಿ  ಎಸ್ಟಿ ಸಮುದಾಯಗಳಿಗೆ  ಸಮಾನಾದ ಅವಕಾಶ, ಸ್ವಾಭಿಮಾನದ ಬದುಕು ಕಲ್ಪಿಸಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ, ಮತ್ತು ಅದನ್ನು ಮಾಡಿಯೇ ತೀರುತ್ತೇವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ತಾಲೂಕಿನ ಇಂಗಳದಾಳ್ ಗ್ರಾಮದಲ್ಲಿ ಭಾನುವಾರ  ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರವನ್ನು ಬೆಳ್ಳೆರಥದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮತ್ತು ಡಿಜೆ ಮೆರವಣಿಗೆಗೆ ಚಾಲನೆ ನೀಡುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು‌
ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ, ಶ್ರೇಷ್ಠ ಮಾನವತಾವಾದಿ, ಶ್ರೇಷ್ಠ ರಾಮಾಯಣ ರಚನೆಕಾರ. ಮನುಕುಲಕ್ಕೆ ಸದಾಕಾಲ ದಾರಿ ದೀಪ ಆಗಿರುವವರು. ವಾಲ್ಮೀಕಿ ಜಯಂತಿಯನ್ನು ಮಾಡಬೇಕೆಂದು ಯಡಿಯೂರಪ್ಪ ಸಿಎಂ ಆದ ಸಂದರ್ಭದಲ್ಲಿ  ನಮ್ಮ ಬಿಜೆಪಿ ಸರ್ಕಾರ  ವಾಲ್ಮೀಕಿ ಜಯಂತಿ ಘೋಷಣೆ ಮಾಡಿದ್ದು  ನಾವೆಲ್ಲರೂ  ಅಂದಿನಿಂದ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ವಾಲ್ಮೀಕಿ ಸಮಾಜದ ಹಿತಾ ಕಾಯುವ ಕೆಲಸ ಮಾಡಿದೆ. ವಾಲ್ಮೀಕಿ  ಪ್ರಸನ್ನಾನಂದ ಸ್ವಾಮಿಗಳ ನಿರಂತರ ಹೋರಟ ಜೊತೆಗೆ ನಮ್ಮ ಸರ್ಕಾರದ ಬದ್ದತೆಯಿಂದ 3.5 ಇದ್ದ ಮೀಸಲಾತಿ 7 , ಪರಿಶಿಷ್ಟ ಜಾತಿ 15 ರಿಂದ 17 ಕ್ಕೆ ಹೆಚ್ಚಿಸಿ ಬಡವರ ಮತ್ತು ಹಿಂದುಳಿದವರ ಪರ ನಾವಿದ್ದೇವೆ ಎಂಬ ಸಂದೇಶ ಸಾರಿದ್ದೇವೆ ಎಂದರು.
ಇಂಗಳದಾಳ್ ಗ್ರಾಮದಲ್ಲಿ ನಾನು ಹಿಂದೆಂದೂ ಕಾಣದಂತಹ ಸಂಭ್ರಮ ಸಡಗರದಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡಿರುವುದು ಇದು ಒಂದು ಐತಿಹಾಸಿಕ ವಾಲ್ಮೀಕಿ ಜಯಂತಿ ಆಗಿದ್ದು ನನಗೆ ಸಾಕಷ್ಟು ಸಂತೋಷವನ್ನು ಉಂಟು ಮಾಡಿದೆ ಎಂದರು.
ಇಂಗಳದಾಳ್ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ.ಯಾವ ಅಭಿವೃದ್ಧಿ ಕೆಲಸ ಬಾಕಿ ಇಲ್ಲದಂತೆ ಹಣ ನೀಡಿದ್ದೇನೆ. ಹತ್ತಾರು ಹಳ್ಳಿಗೆ ಅನುಕೂಲವಾಗುವ ಸಮುದಾಯ ಭವನಕ್ಕೆ ಕೇಳಿದಷ್ಟು ಹಣ ನೀಡಿದ್ದೇನೆ. ವಾಣಿವಿಲಾಸ ಸಾಗರ ನೀರಿನ ವ್ಯವಸ್ಥೆ ಸಹ ಆಗುತ್ತದೆ. ಮತ್ತೇನೇ ಸಮಸ್ಯೆ ಕೆಲಸ ಬಾಕಿ ಇದ್ದರು ಹೇಳಿ. ಇಂಗಳದಾಳ್ ಗ್ರಾಮದ ಯುವಕರು ಹುಮ್ಮಸಿನಿಂದ ವಾಲ್ಮೀಕಿ ಜಯಂತಿ ಮಾಡುತ್ತಿದ್ದು ಎಲ್ಲಾರಿಗೂ ಶುಭವಾಗಲಿ ಎಂದು ಹಾರೈಸಿದರು.
ಪಿ.ಓ.ತಿಮ್ಮಯ್ಯ ಮಾತನಾಡಿ ಇಂಗಳದಾಳ್ ಗ್ರಾಮಕ್ಕೆ ತಿಪ್ಪಾರೆಡ್ಡಿ ಬಿಟ್ಟರೆ ಉಳಿದ ಯಾರು ಸಹ  ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಶಾಸಕರಿಗೆ ಇಂಗಳದಾಳ್ ಬಗ್ಗೆ ವಿಶೇಷ ಕಾಳಜಿ ಇದೆ‌. ನಾಯಕ ಸಮುದಾಯ ಎಂದರೆ ಎಲ್ಲಿಲ್ಲದ ಪ್ರೀತಿ.ನಾಯಕ ಸಮುದಾಯದ ಕಷ್ಟ ಸುಖಕ್ಕೆ ಸ್ಪಂದಿಸುವುದಿಂದ ನಾವು ಧೈರ್ಯದಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಮ್ಮ ಸಮಾಜ ಅವರಿಗೆ ಸದಾ ಋಣಿಯಾಗಿರುತ್ತದೆ ಎಂದರು.
ವಾಲ್ಮೀಕಿ ಭಾವಚಿತ್ರ ಹೊತ್ತ ಬೆಳ್ಳೆರಥ ಮತ್ತು ಡಿಜೆ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಯುವಕರು, ಯುವತಿಯರು, ಮಹಿಳೆಯರು, ಹಿರಿಯರು, ಪುಟಾಣಿಗಳು  ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿ.ತಿಪ್ಪೇಸ್ವಾಮಿ,ಓ.ರವಿಕೀರ್ತಿ,ಜಿ.ಟಿ.ಮಹಂತೇಶ್,ಕೆ.ಟಿ.ಗಾದ್ರಪ್ಪ,ಬಿ.ಅಶೋಕ್, ಎಸ್.ಮಂಜುನಾಥ್, ಜಿ.ಟಿ.ನಾಗರಾಜ್, ಹೆಚ್‌.ಉಮೇಶ್,ಪಿ.ಹುನುಮಣ್ಣ,ಕೆಂಚಮ್ಮ, ಮಹಂತೇಶ್ ತಳವಾರ್, ಪಿ.ಕೆ.ರಾಮಣ್ಣ, ಗುರುರಾಜ್, ಬೆಂಗಳೂರು ನಾಗರಾಜ್, ಲಕ್ಷ್ಮಿದೇವಿ,ಸುವರ್ಣಮ್ಮ,ಸುಧಾ, ಪ್ರಕಾಶ್,ಹೆಚ್.ನಾಗರಾಜ್,ಫಿಲ್ಟರ್ ರಮೇಶ್, ಧರ್ಮೇಂದ್ರ,ರೆಬಲ್ ಮಂಜು ಇದ್ದರು.
[t4b-ticker]

You May Also Like

More From Author

+ There are no comments

Add yours