ದುಡಿದ ಹಣವನ್ನು ಬ್ಯಾಂಕ್‍ಗಳಲ್ಲಿ ಇರಿಸಿ ವ್ಯವಹರಿಸುವ ಜ್ಞಾನ ಎಲ್ಲರಲ್ಲಿಯೂ ಬರಬೇಕು:ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸಲಹೆ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್ 7: ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಆದರೆ ಬ್ಯಾಂಕಿಗ್  ವ್ಯವಸ್ಥೆಯೊಂದಿಗೆ ಜನರು ಹೆಚ್ಚಿನ ರೀತಿಯಲ್ಲಿ ಸೇರ್ಪಡೆಯಾಗಿಲ್ಲ. ದುಡಿದ ಹಣವನ್ನು ಬ್ಯಾಂಕ್‍ಗಳಲ್ಲಿ ಇರಿಸಿ ವ್ಯವಹರಿಸುವ ಜ್ಞಾನ ಎಲ್ಲರಲ್ಲಿಯೂ ಬರಬೇಕು. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ಸಾಕ್ಷರತೆ ಮೂಡಿಸಲು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸಲಹೆ ನೀಡಿದರು.
ನಗರದ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಶಾಖೆಗಳನ್ನು ತೆರಯಲಾಗಿದೆ. ಸರ್ಕಾರ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಹಣ ಜಮಾವಣೆ, ಚಕ್ ವ್ಯವಹಾರ, ಆರ್.ಟಿ.ಜಿ.ಎಸ್. ನೆಫ್ಟ್ ನಂತಹ ಸಣ್ಣ ಕೆಲಸಗಳಿಗೂ ಬೇರೆಯವರ ಅವಲಂಬಿಸಬಾರದು. ಬಡತನ, ಅನಕ್ಷರತೆ, ಸಾಂಕ್ರಾಮಿಕ ರೋಗವಾದ ಕೊರೊನಾದಿಂದ ಜನರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಬಡವರು ಆರ್ಥಿಕವಾಗಿ ಸ್ವಾಲಂಬಿಗಳಾದಾಗ ಮಾತ್ರ ಆಜಾದಿ ಕಾ ಅಮೃತ ಮಹೋತ್ಸವಕ್ಕೆÀ ಅರ್ಥಪೂರ್ಣವಾದ ಮಹತ್ವ ದೊರೆಯುತ್ತದೆ ಎಂದರು.
ಭಾರತದ ಪ್ರತಿಯೊಬ್ಬ ವ್ಯಕ್ತಿಯು ಸ್ವಾವಲಂಬಿಯಾಗಿ, ಆರ್ಥಿಕವಾಗಿ ಸದೃಢರಾಗಬೇಕು ಆಗ ಮಾತ್ರ ದೇಶ ಅಭಿವೃದ್ಧಿ ಕಡೆ ಸಾಗಲು ಸಾಧ್ಯವಾಗುತ್ತದೆ. ಅಂಗವಿಕಲರ ವೇತನ ವೃದ್ಧಾಪ್ಯ ವೇತನ ಯೋಜನೆಗಳನ್ನು ನಂಬಿಕೊಂಡು ಸಾಕಷ್ಟು ಜನ ಜೀವನವನ್ನು ನಡೆಸುತ್ತಿದ್ದಾರೆ. ಇರುವಂತಹ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಮೂಲಕ ಅವರನ್ನು ಸ್ವಾವಲಂಬಿಯಾಗಿ ಬದುಕುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಜಿಲ್ಲಾ ವ್ಯವಸ್ಥಾಪಕ ಹಿರೇಮಠ ಮಾತನಾಡಿ ಕೇಂದ್ರ ಸರ್ಕಾರದ ನಿರ್ದೇಶನದ 75ನೇ ಜೊತೆಗೆ ಅಮೃತಮಹೋತ್ಸವ ದೇಶದ್ಯಾಂತ ಫಲಾನುಭವಿಗಳು ಯೋಜನೆಗಳನ್ನು ಬಳಸಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಬ್ಯಾಂಕು ಮತ್ತು ಹಣಕಾಸು ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ನಿರಂತರವಾಗಿ ಕಾರ್ಯವನ್ನು ಮಾಡಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಹಕರಿಗೆ ತಿಳಿಸುವಂತಹ ವ್ಯವಸ್ಥೆಯನ್ನು ಬ್ಯಾಂಕ್ ಅಧಿಕಾರಿ ಮಾಡಿದ್ದಾರೆ. ನರೇಗಾ ಯೋಜನೆ ಅಡಿಯಲ್ಲಿ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆದು ಕೂಲಿ-ಕಾರ್ಮಿಕರಿಗೆ ಖಾತೆಗೆ ನೇರವಾಗಿ ಹಣವನ್ನು ಜಮಾವಣೆ ಮಾಡಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಅಪಘಾತ ವಿಮೆಯನ್ನು ಕೂಡ 2 ಲಕ್ಷದವರೆಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಯೂನಿಯನ್ ಬ್ಯಾಂಕ್‍ನ ಅಧಿಕಾರಿ ಮಂಜುನಾಥ್ ಮಾತನಾಡಿ ಜನ್‍ಧನ್ ಯೋಜನೆಯಲ್ಲಿ ಪ್ರತಿಯೊಬ್ಬರು ಕೂಡ ಖಾತೆಯನ್ನು ತೆರೆದಿದ್ದಾರೆ. ಜಿಲ್ಲೆಯ ಯಾವುದೇ ಬ್ಯಾಂಕುಗಳಲ್ಲಿ ಕೂಡ ಜನಸಂಪರ್ಕ ವಿಶೇಷ ಮಾಹಿತಿಯನ್ನು ಪ್ರತಿಯೊಬ್ಬ ಗ್ರಾಹಕರಿಗೂ ಕೂಡ ತಿಳಿಸಲಾಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಸೈಬರ್ ಕ್ರೈಂಗಳ ಬಗ್ಗೆ ಗ್ರಾಹಕರು ಹೆಚ್ಚು ಗಮನಹರಿಸಬೇಕು. ಓಟಿಪಿ ಎಟಿಎಂ ಸಂಖ್ಯೆಗಳು ಇನ್ನಿತರ ಬ್ಯಾಂಕುಗಳ ಬಗ್ಗೆ ಮಾಹಿತಿಯನ್ನು ಯಾರಿಗೂ ನೀಡಬಾರದು. ಡಿಜಿಟಲ್ ವ್ಯವಸ್ಥೆ ಹೊಂದಿದವರು ಜಾಗರೂಕತೆಯಿಂದ ವ್ಯವಹಾರವನ್ನು ನಡೆಸಬೇಕೆಂದು ತಿಳಿಸಿದರು.
ಕೆ.ಜಿ.ಬಿಯ ಆರ್‍ಎಂ ಕೆ.ಮಹಾದೇವÀಯ್ಯ ಮಾತನಾಡಿ ಬ್ಯಾಂಕಿನ ಸೌಲಭ್ಯಗಳನ್ನು ಎಲ್ಲ ಗ್ರಾಹಕರಿಗೂ ತಿಳಿಸುವಂತಹ ಜನಸಂಪರ್ಕ ಕೇಂದ್ರವನ್ನು ಆರಂಭಿಸಲಾಗಿದೆ. ಜಿಲ್ಲೆಯ ಯಾವುದೇ ಶಾಖೆಗಳಲ್ಲಿ ಕೂಡ ಸಂಪರ್ಕಿಸಿದರೆ ಬ್ಯಾಂಕುಗಳ ಸೌಲಭ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದಂತಹ ಲೋನ್ ಗಳು ರೈತರ ಖಾತೆಗೆ ನೇರವಾಗಿ  ಕೆಸಿಸಿ ಮೂಲಕ ಸಾಲವನ್ನು ನೀಡುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಪಿಎಂ ಜನ್ ಧನ್ ಯೋಜನೆ, ಮುದ್ರಾ, ಪಿಎಂ ಸ್ವನಿಧಿ, ಪಿಎಂ ಸುರಕ್ಷಾ ಯೋಜನೆಗಳು, ವಿವಿಧ ಕೇಂದ್ರ ಸರ್ಕಾರದ ಬ್ಯಾಂಕ್ ಯೋಜನೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ರುಟ್ ಸೈಟ್, ಯೂನಿಯನ್ ಬ್ಯಾಂಕ್ , ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್‍ಗಳಿಂದ ಸ್ಟಾಲ್‍ಗಳನ್ನು ನಿರ್ಮಾಣ ಮಾಡಿ ಆಯಾ ಬ್ಯಾಂಕಿಗೆ ಸಂಬಂಧಿಸಿದಂತಹ ರೂಪುರೇμÉಗಳ ಬಗ್ಗೆ ಗ್ರಾಹಕರಿಗೆ ಸವಿಸ್ತಾರವಾದ ಮಾಹಿತಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವರಾಜಪ್ಪ ಸೊಂಡೆಕೊಳ 27 ಲಕ್ಷದ ಕೃಷಿ ಸಾಲ, ನೇಹ ಜಿಎಸ್ ಅವರಿಗೆ ವೈದ್ಯಕೀಯ ಶಿಕ್ಷಣ ಎಜುಕೇಶನ್‍ಗಾಗಿ 1 ಕೋಟಿಯ ಸಾಲದ ಮಂಜೂರಾತಿಯ ಆದೇಶ ಪತ್ರವನ್ನು ವಿತರಿಸಲಾಯಿತು.
ಕೋಟ್ :
ವಿಜಯ್ ಯೂನಿಯನ್ ಬ್ಯಾಂಕ್ ಖಾತೆದಾರ : ಭಾರತ ಸರ್ಕಾರದ ಅಡಿಯಲ್ಲಿ ಬರುವ ಬ್ಯಾಂಕುಗಳ ಮೂಲಕ ಸಾಲವನ್ನು ಪಡೆಯುವುದರ ಮೂಲಕ ಒಳ್ಳೆಯ ಕಾರ್ಯಕ್ಕೆ ಸದ್ಬಳಕೆಯನ್ನು ಮಾಡಿಕೊಂಡಿದ್ದೇನೆ. ಇನ್ನು ಅನೇಕ ಬ್ಯಾಂಕುಗಳ ಮೂಲಕ ಜನರಿಗೆ ಮಾಹಿತಿಯನ್ನು ತಿಳಿಸಿ ಸಾಲಗಳನ್ನು ನೀಡಬೇಕೆಂದು ತಿಳಿಸಿದರು.
ಕರ್ನಾಟಕ ಬ್ಯಾಂಕ್ ಖಾತೆದಾರ ರಾಜು : ಕೃಷಿ ಉಪಕರಣ ಸಂಬಂಧಿಸಿದ ವ್ಯವಹಾರವನ್ನು ಮಾಡುವುದಕ್ಕೆ ಬ್ಯಾಂಕಿನವರು ಸಾಲವನ್ನು ನೀಡಿದ್ದಾರೆ. ಸರಿಯಾದ ಸಮಯಕ್ಕೆ ಬ್ಯಾಂಕಿಗೆ ಹಣವನ್ನು ಪಾವತಿಸುವುದು ನಮ್ಮ ಜವಾಬ್ದಾರಿ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಯೋಜನಾ ಅಧಿಕಾರಿ ಮಹಂತೇಶ್, ದಾವಣಗೆರೆಯ ಎಸ್‍ಬಿಐನ ಆರ್‍ಎಂ ಎಂ.ಎಸ್.ಹರಿಕೃಷ್ಣ, ಚಿತ್ರದುರ್ಗ ಕೆ.ಜೆ.ಬಿನ ಆರ್‍ಎಂ ಕೆ.ಮಹಾದೇವಯ್ಯ, ಶಿವಮೊಗ್ಗದ ಯುಬಿಐನ ಆರ್‍ಓ ರಾಜಮಣಿ ಡಿ.ಜಿ.ಎಂ ಭಾಗಿಯಾಗಿದ್ದರು.

 

 

[t4b-ticker]

You May Also Like

More From Author

+ There are no comments

Add yours