ಕವಾಡಿಗರಹಟ್ಟಿ ನೀರಿನ  ಪರೀಕ್ಷಾ ವರದಿ ಬಹಿರಂಗ , ಏನಿದೇ ವರದಿಯಲ್ಲಿ!

 

 

 

 

ಮೂರೂ ನೀರಿನ ಮಾದರಿಗಳಲ್ಲಿ ಯಾವುದೇ ಅಪಾಯಕಾರಿ ರಾಸಾಯನಿಕ ಅಂಶಗಳಲ್ಲ
******************
ಚಿತ್ರದುರ್ಗ ಆ. 09 (ಕರ್ನಾಟಕ ವಾರ್ತೆ) :
ಕವಾಡಿಗರ ಹಟ್ಟಿಯಲ್ಲಿ ಜರುಗಿದ ಕಲುಷಿತ ನೀರು ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಪರೀಕ್ಷೆಗಾಗಿ ಬೆಂಗಳೂರಿನ ಐ.ಎಫ್.ಎ.ಡಿ.ಎಫ್.ಎ.ಸಿ ಪ್ರಯೋಗಾಲಯಕ್ಕೆ ಕಳುಹಿಸಲಾದ ಮೂರು ನೀರಿನ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, ಮೂರೂ ನೀರಿನ ಮಾದರಿಗಳಲ್ಲಿ ಯಾವುದೇ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿರುವುದಿಲ್ಲ, ಆದರೆ ಕಾಲರಾ ಗೆ ಕಾರಣವಾಗಬಹುದಾದ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿರುವುದಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಜಿಲ್ಲಾ ಅಂಕಿತ ಅಧಿಕಾರಿ ಡಾ. ಸಿ.ಎಲ್. ಪಾಲಾಕ್ಷ ತಿಳಿಸಿದ್ದಾರೆ.
ಕಲುಷಿತ ಆಹಾರ ಮತ್ತಿತರೆ ಪ್ರಕರಣಗಳ ಸಂದರ್ಭದಲ್ಲಿ ಸಂಗ್ರಹಿಸಲ್ಪಡುವ ಮಾದರಿಗಳನ್ನು ವಿಶ್ಲೇಷಣಾ ಗುಣಗಳನ್ನು ವಿಶ್ಲೇಷಣೆಗೊಳಪಡಿಸಲು ಬೆಂಗಳೂರಿನ ಇನ್ಸ್‍ಟಿಟ್ಯೂಟ್ ಆಫ್ ಅನಾಲಿಸಿಸ್ ಆಫ್ ಡೈರಿ, ಫುಡ್ ಅಂಡ್ ಕಲ್ಚರ್ಸ್, ಲ್ಯಾಬೊರೇಟರೀಸ್, ಪ್ರೈ.ಲಿ., ಇವರಿಗೆ ಕಳುಹಿಸಿಕೊಡಬೇಕು ಎಂಬುದಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರು ಕಳೆದ ಜೂನ್. 06 ರಂದೇ ರಾಜ್ಯದ ಎಲ್ಲ ಜಿಲ್ಲೆಗಳ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿರುತ್ತದೆ.  ಅದರನ್ವಯ ಕವಾಡಿಗರ ಹಟ್ಟಿಯಲ್ಲಿನ ಕಲುಷಿತ ನೀರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಮನೆಯಲ್ಲಿ, ಕವಾಡಿಗರ ಹಟ್ಟಿಯ ಓವರ್ ಹೆಡ್ ಟ್ಯಾಂಕ್‍ನ ನೀರು ಮತ್ತು ಕವಾಡಿಗರ ಹಟ್ಟಿಯಲ್ಲಿನ ನಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಉನ್ನತ ಪರೀಕ್ಷೆಗಾಗಿ ಬೆಂಗಳೂರಿನ ಐ.ಎಫ್.ಎ.ಡಿ.ಎಫ್.ಎ.ಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.  ಇದೀಗ ಈ ಪ್ರಯೋಗಾಲಯದ ಪರೀಕ್ಷಾ ವರದಿ ಬಂದಿದ್ದು, ಅದರನ್ವಯ ಮೃತ ಮಹಿಳೆಯ ಮನೆಯಲ್ಲಿ ಸಂಗ್ರಹಿಸಿದ ನೀರಿನ ಮಾದರಿಯಲ್ಲಿ ವಿಬ್ರಿಯೋ ಕಾಲರಾ, ವಿಬ್ರಿಯೋ ಪ್ಯಾರಾಹೀಮೊಲೈಟಿಕಸ್, ಸಲ್ಫೈಟ್ ಕಡಿಮೆಗೊಳಿಸುವ ಅನೇರೋಬ್ಸ್, ಪಿ. ಎರುಜೀನೋಸಾ ಮುಂತಾದ ರೋಗಾಣುಗಳು ಕಂಡುಬಂದಿವೆ.  ಇ.ಕೊಲೈ, ಕೊಲಿಫಾರಂ ಇವು ಗರಿಷ್ಟ ಮಟ್ಟಕ್ಕಿಂತ ಹೆಚ್ಚಾಗಿದ್ದು, ಮಲದ ಕಲುಷಿತವನ್ನು ಸೂಚಿಸುತ್ತವೆ.  37 ಸೆಂಟಿ ಗ್ರೇಡ್‍ನಲ್ಲಿ ಏರೋಬಿಯಲ್ ಸೂಕ್ಷ್ಮಾಣು ಜೀವಿ ಎಣಿಕೆ, 22 ಸೆಂಟಿಗ್ರೇಡ್‍ನಲ್ಲಿ ಏರೋಬಿಯಲ್ ಸೂಕ್ಷ್ಮಾಣು ಜೀವಿ ಎಣಿಕೆ, ಯೀಸ್ಟ್ ಮತ್ತು ಮೋಲ್ಡ್ ಎಣಿಕೆ ಗರಿಷ್ಟ ಮಿತಿಯನ್ನು ಮೀರಿದ್ದು, ಅನೈರ್ಮಲ್ಯ ಅಭ್ಯಾಸಗಳನ್ನು ಸೂಚಿಸುತ್ತದೆ.  ಐಎಟಿಎಫ್‍ಎಸಿ ವರದಿಯಂತೆ ರಾಸಾಯನಿಕಗಳು ಒಪ್ಪಿಕೊಳ್ಳುವ/ ಅನುಮತಿಸುವ ಮಟ್ಟದಲ್ಲಿದ್ದು, ರೋಗಾಣು ಫಲಿತಾಂಶದ ವರದಿಯಲ್ಲಿ ಮಲದ ಸೋಂಕನ್ನು ಮತ್ತು ಅನೈರ್ಮಲ್ಯ ಅಭ್ಯಾಸಗಳನ್ನು ಸೂಚಿಸುತ್ತದೆ.
ಟರ್ಬಿಡಿಟ ಗರಿಷ್ಟ ಮಟ್ಟಕ್ಕಿಂತ ಹೆಚ್ಚಾಗಿದೆ.  ಐಎಟಿಎಫ್‍ಎಸಿ ವರದಿಯಂತೆ ರಾಸಾಯನಿಕಗಳು ಒಪ್ಪಿಕೊಳ್ಳುವ/ ಅನುಮತಿಸುವ ಮಟ್ಟದಲ್ಲಿದ್ದು, ರೋಗಾಣು ಫಲಿತಾಂಶದ ವರದಿಯಲ್ಲಿ ಮಲದ ಸೋಂಕನ್ನು ಮತ್ತು ಅನೈರ್ಮಲ್ಯ ಅಭ್ಯಾಸಗಳನ್ನು ಸೂಚಿಸುತ್ತದೆ ಎಂದು  ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಜಿಲ್ಲಾ ಅಂಕಿತ ಅಧಿಕಾರಿ ಡಾ. ಸಿ.ಎಲ್. ಪಾಲಾಕ್ಷ ತಿಳಿಸಿದ್ದಾರೆ.
[t4b-ticker]

You May Also Like

More From Author

+ There are no comments

Add yours