ಕೈ ಹಿಡಿದ ಜೆಡಿಎಸ್ ಪ್ರಭಾವಿ ಮುಖಂಡ, ಚಳ್ಳಕೆರೆ ಜೆಡಿಎಸ್ ಗೆ ದೊಡ್ಡ ಹಿನ್ನಡೆ

 

 

 

 

ಚಿತ್ರದುರ್ಗ: ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದೆ. ಜೆಡಿಎಸ್ , ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಜಂಪಿಂಗ್ ನಡೆಯುತ್ತಿದೆ.

 

 

ಚಳ್ಳಕೆರೆ ಕ್ಷೇತ್ರದ ಮಾಜಿ ಶಾಸಕ ಬಸವರಾಜ್ ಮಂಡಿಮಠ ಅವರು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಶಕ್ತಿ ಹೆಚ್ಚಿಸಿಕೊಳ್ಳುವ ಕೆಲಸ ಮಾಡಿದ ಜೆಡಿಎಸ್ ಚಳ್ಳಕೆರೆಯಲ್ಲಿ ಜೆಡಿಎಸ್ ಪಕ್ಷದಲ್ಲಿದ್ದು ತನ್ನದೇ ಆದ ಹಿಡಿತ ಹೊಂದಿರಬೇಕು ಎಂದು ಕೆ.ಸಿ. ನಾಗರಾಜ್ ಮತ್ತು ಚಿತ್ರದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರು ವೀರೇಂದ್ರ ಪಪ್ಪಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು ಚಳ್ಳಕೆರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ.
ಕೆ.ಸಿ.ವೀರೇಂದ್ರ ಪಪ್ಪಿ ಅವರು ಕಳೆದ ಬಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎರಡನೇ ಸ್ಥಾನ ಪಡೆಯುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಯುವ ಮೊದಲ ಮತ್ತು ಸಾವಿರಾರು ಅಭಿಮಾನಿ ಬಳಗ ಹೊಂದಿರುವ ಕೆ.ಸಿ.ವೀರೇಂದ್ರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಜೆಡಿಎಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ.ಈಗ ಪಪ್ಪಿ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಬೆಂಬಲವಾಗಿ ನಿಂತರೆ ಒಂದು ದೊಡ್ಡ ಜೆಡಿಎಸ್ ಪಡೆ ಕಾಂಗ್ರೆಸ್ ಕಡೆಗೆ ಶಿಫ್ಟ್ ಆದಂತೆ ಆಗಿದೆ.ನಗರದ ಶಾಸಕ ಟಿ.ರಘುಮೂರ್ತಿ ಅವರಿಗೆ ಪ್ಲಸ್ ಅಂತ ಹೇಳಬಹುದು. ಇದರ ಜೊತೆಗೆ ವೀರೇಂದ್ರ ಅವರ ಸಹೋದರ.ಸಿ.ನಾಗರಾಜ್ ಸಹ ಕಾಂಗ್ರೆಸ್ ಸೇರಿದ್ದು ಇಬ್ಬರು ಅಭಿಮಾನಿಗಳ ಜೊತೆಗೆ ಲಿಂಗಾಯತ ಸಮಾಜದ ಮುಖಂಡರಾದ ಜೆಡಿಎಸ್ ಪಕ್ಷಕ್ಕೆ ನಂಗಲಾರದ ತುತ್ತಾಗಿದೆ.ಜೆಡಿಎಸ್ ಒಂದು ಕಡೆ ಇತರ ಪಕ್ಷದವರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ಆದರೆ ತನ್ನದೇ ಪಕ್ಷದ ಪ್ರಭಾವಿ ಮುಖಂಡನನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು ದಳಕ್ಕೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
[t4b-ticker]

You May Also Like

More From Author

+ There are no comments

Add yours