ಐಯುಡಿಪಿ ಸಮಗ್ರ ಅಭಿವೃದ್ಧಿ ಒತ್ತು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಅ:28: ಐಯುಡಿಪಿ ಸಮಗ್ರ ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡಲಾಗುತ್ತಿದ್ದು  ಬಹುತೇಕ ಎಲ್ಲಾ ರಸ್ತೆಗಳಿಗೆ ಹಣ ನೀಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಹೇಳಿದರು.

 

 

ನಗರದ ಐಯುಡಿಪಿ  ಬಡಾವಣೆಯ  11ನೇ ಕ್ರಾಸ್ ನಲ್ಲಿ ಐಯುಡಿಪಿ ಅಭಿವೃದ್ಧಿ  2.80 ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ ನೂತನ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಐಯುಡಿಪಿ ಹೊಸ ಬಡಾವಣೆ ನಗರದ ದೊಡ್ಡ ವ್ಯಾಪ್ತಿಯನ್ನು ಹೊಂದಿರುವುದರಿಂದ ಹೆಚ್ಚು ರಸ್ತೆಗಳು ಬರುತ್ತವೆ.  ಶಾಸಕರ ಅನುದಾನ, ನಗರಸಭೆ ಅನುದಾನ, ಅಮೃತ ಯೋಜನೆ, ಐಯುಡಿಪಿ ಅಭಿವೃದ್ಧಿ ಅನುದಾನ ಬಳಸಿಕೊಂಡು ಸಿ.ಸಿ.ರಸ್ತೆಗಳನ್ನು ಮಾಡುತ್ತಿದ್ದೇವೆ. ಈಗಾಗಲೇ ಅನೇಕ ರಸ್ತೆಗಳು ಪೂರ್ಣಗೊಳಿಸಿ ಉದ್ಘಾಟಿಸಲಾಗಿದೆ. ಇಂದು ಸಹ ಆರು ರಸ್ತೆಗಳನ್ನು 2.80 ಕೋಟಿ ವೆಚ್ಚದ ರಸ್ತೆ  ಕಾಮಗಾರಿಗೆ ಚಾಲನೆ ನೀಡಿದ್ದು 15 ರಿಂದ 20  ದಿನದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಐಯುಡಿಪಿ ನೀರಿನ ಸಮಸ್ಯೆ ಇಲ್ಲ, ಎಲ್ಲಾ ಕಡೆ ಬೀದಿ ದೀಪಗಳನ್ನು ಸಹ ಹಾಕಲಾಗಿದೆ. ಚಿಕ್ಕ ಪುಟ್ಟ ರಸ್ತೆಗಳ ಬಿಟ್ಟು ಎಲ್ಲಾ ಒಳ ರಸ್ತೆಗಳನ್ನು ಮಾಡಲಾಗಿದೆ. ಉಳಿದ ರಸ್ತೆಗಳನ್ನು ಮುಂದಿ ದಿನದಲ್ಲಿ ಮಾಡಲಾಗುತ್ತದೆ.
ರಸ್ತೆಗಳನ್ನು ಗುಣಮಟ್ಟದಿಂದ ಮತ್ತು ವಿಶಾಲವಾಗಿ  ನಿರ್ಮಿಸಬೇಕು. ಹಣ ಕಡಿಮೆ ಬಂದರೆ ಹಣ ನೀಡುತ್ತೇನೆ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದು ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಭಾಗದಲ್ಲಿ ಹಿರಿಯ ನಾಗರಿಕರಿಗೆ, ವಿಧವಾ ವೇತನ, ಅಂಗವಿಕಲರಿಗೆ ಪಿಂಚಣಿ  ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಕೂಡಲೇ ಬಗೆಹರಿಸಲಾಗುವುದು. ಸಾವಿರಾರು ಜನರು ಪಿಂಚಣಿಯಿಂದ ಬದುಕು ನಡೆಸುತ್ತಿದ್ದು ತೊಂದರೆ ಆಗಬಾರದು ಎಂದು ಹೇಳಿದರು.
ನಗರಸಭೆ ಸದಸ್ಯ ಬಾಸ್ಕರ್, ಮುಖಂಡರಾದ ಜಗದೀಶ್,ದಸ್ತಗಿರಿ,ಮೈಲಪ್ಪ, ಮಂಜುನಾಥ್, ಎಡಬ್ಲೂಇ. ಮಂಜುನಾಥ್ ಗಿರೆಡ್ಡಿ, ಇಂಜಿನಿಯರ್ ಕಿರಣ್ ಇದ್ದರು.
[t4b-ticker]

You May Also Like

More From Author

+ There are no comments

Add yours