ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಗಿಡಗಳು ಮಾರಾಟಕ್ಕೆ ಲಭ್ಯ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 18:
ಜಿಲ್ಲೆಯ ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಕøಷ್ಟ ಗುಣಮಟ್ಟದ ತೆಂಗು, ನುಗ್ಗೆ, ಅಂಜೂರ, ನಿಂಬೆ, ಹುಣಸೆ ಸಸಿ ಗಿಡಗಳು ಮಾರಾಟಕ್ಕೆ ಲಭ್ಯವಿದೆ.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಎನ್.ಮಹದೇವಪುರ ತೋಟಗಾರಿಕಾ ಕ್ಷೇತ್ರದಲ್ಲಿ 3800 ತೆಂಗಿನ ಸಸಿಗಳು, 1800 ನುಗ್ಗೆ ಸಸಿಗಳು, 5230 ಅಂಜೂರದ ಸಸಿಗಳು ಲಭ್ಯವಿದ್ದು, ಕ್ಷೇತ್ರ ಅಧಿಕಾರಿ ಅಂಜೂಮ್ ಅವರ ದೂರವಾಣಿ ಸಂಖ್ಯೆ 9880748146 ಗೆ ಸಂಪರ್ಕಿಸಬಹುದು.
ಮೊಳಕಾಲ್ಮೂರು ತಾಲ್ಲೂಕಿನ  ಕಸಬಾ ಹೋಬಳಿಯ ರಾಯಪುರ ತೋಟಗಾರಿಕಾ ಕ್ಷೇತ್ರದಲ್ಲಿ 7752 ತೆಂಗಿನ ಸಸಿಗಳು, 200 ನಿಂಬೆ ಸಸಿಗಳು ಲಭ್ಯವಿದ್ದು, ಕ್ಷೇತ್ರ ಅಧಿಕಾರಿ ರಾಜಶೇಖರ್ ಅವರ ದೂರವಾಣಿ ಸಂಖ್ಯೆ 9902098891ಗೆ ಸಂಪರ್ಕಿಸಬಹುದಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಹೋಬಳಿಯ ತಮ್ಮೇನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ 6950 ತೆಂಗಿನ ಸಸಿಗಳು ಲಭ್ಯವಿದ್ದು, ಕ್ಷೇತ್ರ ಅಧಿಕಾರಿ ಮಹೇಶ್ವರ್ ದೂರವಾಣಿ ಸಂಖ್ಯೆ 9739209365ಗೆ ಸಂಪರ್ಕಿಸಬಹುದು.
ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ಹಾಲು ರಾಮೇಶ್ವರ ತೋಟಗಾರಿಕಾ ಕ್ಷೇತ್ರದಲ್ಲಿ 6337 ತೆಂಗಿನ ಸಸಿಗಳು, 1000 ನಿಂಬೆ ಸಸಿಗಳು, 6990 ನುಗ್ಗೆ ಸಸಿಗಳು ಲಭ್ಯವಿದ್ದು, ಕ್ಷೇತ್ರ ಅಧಿಕಾರಿ ನಾಗಭಷಣ್ ದೂರವಾಣಿ ಸಂಖ್ಯೆ 9164159773ಗೆ ಸಂಪರ್ಕಿಸಬಹುದು.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗ ತೋಟಗಾರಿಕಾ ಕ್ಷೇತ್ರ ಕಚೇರಿ ನರ್ಸರಿಯಲ್ಲಿ 13158 ತೆಂಗಿನ ಸಸಿಗಳು ಲಭ್ಯವಿದ್ದು, ಕ್ಷೇತ್ರ ಅಧಿಕಾರಿ ವೆಂಕಟೇಶ್ ನಾಯ್ಕ್ ದೂರವಾಣಿ ಸಂಖ್ಯೆ 9164159773ಗೆ ಸಂಪರ್ಕಿಸಬಹುದು.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ ನೆಲ್ಲಿಕಟ್ಟೆ ತೋಟಗಾರಿಕಾ ಕ್ಷೇತ್ರದಲ್ಲಿ  8721 ತೆಂಗಿನ ಸಸಿಗಳು ಲಭ್ಯವಿದ್ದು, ಕ್ಷೇತ್ರ ಅಧಿಕಾರಿ ಕುಮಾರ್ ದೂರವಾಣಿ ಸಂಖ್ಯೆ 8970505071ಗೆ ಸಂಪರ್ಕಿಸಬಹುದು.
ಹಿರಿಯೂರು ತಾಲೂಕಿನ ವೇದಾವತಿ ತೋಟಗಾರಿಕಾ ಕ್ಷೇತ್ರದಲ್ಲಿ 1400 ತೆಂಗಿನ ಸಸಿಗಳು, 1000 ಹುಣಸೆ ಸಸಿಗಳು ಲಭ್ಯವಿದ್ದು, ಕ್ಷೇತ್ರ ಅಧಿಕಾರಿ ಪ್ರಭು ದೂರವಾಣಿ ಸಂಖ್ಯೆ 9964126352ಗೆ ಸಂಪರ್ಕಿಸಬಹುದು.
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಐಯ್ಯನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ 473 ನಿಂಬೆ ಸಸಿಗಳು ಲಭ್ಯವಿದ್ದು, ಕ್ಷೇತ್ರ ಅಧಿಕಾರಿ ಹರ್ಷ  ದೂರವಾಣಿ ಸಂಖ್ಯೆ 9980991048ಗೆ ಸಂಪರ್ಕಿಸಬಹುದು.
ತೋಟಗಾರಿಕೆ ಇಲಾಖೆಯಿಂದ ಮಾರಾಟ ದರ ಒಂದಕ್ಕೆ ತೆಂಗಿನ ಸಸಿಗೆ ರೂ. 75, ನಿಂಬೆ ಸಸಿಗೆ  ರೂ.12, ನುಗ್ಗೆ ಸಸಿಗೆ ರೂ.10, ಅಂಜೂರ ಸಸಿ ರೂ.25, ಹುಣಸೆ ಸಸಿಗೆ ರೂ.12/-ಗಳ ದರ ನಿಗಧಿಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours