ನಾಲೆಗೆ ಬಿದ್ದ ಉಮಾಪತಿ ಯುವಕರ ಕುಟುಂಬಕ್ಕೆ ಸರ್ಕಾರದಿಂದ ನೆರವು: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ : ತಾಲೂಕು ನಾಯಕನಹಟ್ಟಿ ಹೋಬಳಿ ಗೌರಿಪುರ ಗ್ರಾಮದ ಉಮಾಪತಿ ಎಂಬ ಯುವಕ ಬಳ್ಳಾರಿಯ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಜನಾಂಗದ ಸಮಾವೇಶಕ್ಕೆ ಹೋದಂತಹ ಸಂದರ್ಭದಲ್ಲಿ ನಾಲೆಯಲ್ಲಿ ಬಿದ್ದು ಕಣ್ಮರೆಯಾಗಿದ್ದು ನಿನ್ನೆ ಆ ಯುವಕನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಗೌರಿಪುರ ಗ್ರಾಮಕ್ಕೆಚಳ್ಳಕೆರೆ ತಹಶೀಲ್ದಾರ್  ಎನ್ .ರಘುಮೂರ್ತಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು..

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್  ಮೃತಪಟ್ಟಂತ ಯುವಕ ಮುಂದೆ ಬಾಳಿ ಬದುಕಬೇಕಾದಂತವನು ಇವನು ಆಕಸ್ಮಿಕವಾಗಿ  ಈ ರೀತಿ ಮೃತಪಟ್ಟಿರುವುದು ನಮ್ಮೆಲ್ಲರಿಗೂ ತುಂಬಾ ನೋವುಂಟು ಮಾಡಿದೆ. ಕುಟುಂಬಸ್ಥರು ಈ ಒಂದು ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಪಡೆಯಬೇಕು ಮತ್ತು ಆದಷ್ಟು ಬೇಗ ತಮ್ಮ ದೈನಂದಿನ ಬದುಕಿಗೆ ಮರಳಬೇಕು.

 

 

ಈ ಘಟನೆಯಿಂದ ಸಾರಿಗೆ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಅಮೃತರ ಕುಟುಂಬಕ್ಕೆ  ಸಾರಿಗೆ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು ಸರ್ಕಾರದ ನಿಯಮಾವಳಿಯಲ್ಲಿ ಅವಕಾಶವಿರುವಂತೆ ಪರಿಹಾರ ಒದಗಿಸುತ್ತಾರೆ. ಈಗಾಗಲೇ ಬಳ್ಳಾರಿ ಜಿಲ್ಲಾಡಳಿತದಿಂದ ಇದರ ಪ್ರಕ್ರಿಯ ಪ್ರಾರಂಭವಾಗಿದೆ. ಈ ಕುಟುಂಬಕ್ಕೆ ಅಗತ್ಯವಿರುವಂತ ಸಹಾಯವನ್ನು ಕೂಡ ಮಂತ್ರಿಗಳು ಒದಗಿಸುವುದಾಗಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ತಾರಕೇಶ್ ರಾಜಸ್ವ ಕ್ಷಕರಾದ ಚೇತನ್ ಕುಮಾರ್ ಗ್ರಾಮ ಲೆಕ್ಕಾಧಿಕಾರಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours