ಚಿತ್ರದುರ್ಗ ಲೋಕಸಭಾ ಕದನಕ್ಕೆ ಕೈ ಟಿಕೆಟ್ ಫೈಟ್

 

 

 

 


News19kannada.com Desk

“ಸ್ಪೆಷಲ್ ಸ್ಟೋರಿ”

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕಸಭೆ ಕಾವು ಜೋರಾಗುತ್ತಿದೆ.ಕರ್ನಾಟಕದಲ್ಲಿ ಗ್ಯಾರೆಂಟಿ ಯೋಜನೆಗಳ ಮೂಲಕ ಸ್ಪಷ್ಟ ಬಹುಮತ ಪಡೆದು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಹ ಗೆಲುವಿನ ನಾಗಲೋಟ ಮುಂದುವರಸುವ ಹುಮ್ಮಸಿನಲ್ಲಿ ಲೋಕಸಭೆ ಚುನಾವಣಗೆ ಸಜ್ಜಾಗುತ್ತಿದ್ದು ಚಿತ್ರದುರ್ಗ ಲೋಕಸಭೆ ( ಪರಿಶಿಷ್ಟ ಜಾತಿ) ಮೀಸಲು ಕ್ಷೇತ್ರದ    (Chitradurga Lok Sabha Constituency)

ಟಿಕೆಟ್ ಗೆ ಭಾರೀ ಪೈಪೋಟಿ ಏರ್ಪಟ್ಟಿದ್ದು ಯಾರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂಬುದು ಇನ್ನು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

ಹೌದು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏಂಟು ವಿಧಾನ ಸಭಾ ಕ್ಷೇತ್ರಗಳು ಒಳಪಡುತ್ತದೆ. ಚಿತ್ರದುರ್ಗ , ಚಳ್ಳಕೆರೆ, ಮೊಳಕಾಲ್ಮುರು, ಹೊಸದುರ್ಗ, ಚಿತ್ರದುರ್ಗ, ಸಿರಾ, ಪಾವಗಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾಗಿರುವುದು ಟಿಕೆಟ್ ಗೆ ಮತ್ತಷ್ಟು ಪೈಪೋಟಿ ಏರ್ಪಟ್ಟಿದೆ ಎಂದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.

ಈ ಬಾರಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿಂದ ಚುನಾವಣೆಯ ಟಿಕೆಟ್ ಪಡೆಯಲು ಭಗೀರಥ ಪ್ರಯತ್ನ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿ ಹಲವಾರು ಅಭ್ಯರ್ಥಿಗಳು ಲೋಕ ಚುನಾವಣೆಗೆ ಓಪನ್ ಆಗಿ ಭರ್ಜರಿ ಪ್ರಚಾರವನ್ನೂ ಸಹ ಮಾಡುತ್ತಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತಂತೆ ಸಮಾಲೋಚನೆ ಸಭೆ ಶನಿವಾರ ಅಂದರೆ ಇಂದು ನಡೆಯಲಿದ್ದು ಚುನಾವಣೆ ಟಿಕೆಟ್ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಸೇರಿ ನಗರದ ಎಲ್ಲಾ ಕಡೆಗಳಲ್ಲಿ ಮಹದೇವಪ್ಪ ಅವರ ಫೋಟೋ ಜೊತೆ ಅಭ್ಯರ್ಥಿಗಳು ಮತ್ತು ರಾಜ್ಯ ನಾಯಕರು, ಶಾಸಕರ ,ಮಾಜಿ ಸಚಿವರ ಫೋಟೋ ಗಳು ಬ್ಯಾನರ್ ಗಳಲ್ಲಿ ರಾರಜಿಸುತ್ತಿವೆ.

ಕಳೆದ ವಿಧಾನಸಭೆ ಮತ್ತು ಪರಿಷತ್ ಚುನಾವಣೆಯಲ್ಲಿ ಸೋಲಿನ ರುಚಿ ನೋಡಿದವರು ತಮ್ಮ ರಾಜಕೀಯ ಅಸ್ತಿತ್ವ ಸಾಧಿಸುವ ಉತ್ಸಾಹದಲ್ಲಿದ್ದು ಇದರ ಜೊತೆಗೆ ಯುವ ಮುಖಗಳು ಸಹ ಸಹ ಟಿಕೆಟ್ ಆಕಾಂಕ್ಷಿಗಳ ಲಿಸ್ಟ್ ನಲ್ಲಿದ್ದಾರೆ. ಈಗಾಗಲೇ ಅನೇಕರು ಟಿಕೆಟ್ ನೀಡುವಂತೆ ಬಹಿರಂಗವಾಗಿ ಹಲವು ಬಾರಿ ಶಾಸಕರನ್ನು ಭೇಟಿಯಾಗಿ ಬೆಂಬಲ ಕೋರುವ ಮೂಲಕ ಒತ್ತಡ ಸೃಷ್ಟಿಸುವ ತಂತ್ರ ರೂಪಿಸುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ ನಾಯಕರನ್ನು ಸಹ ತೆರೆಮರೆಯಲಿ ಭೇಟಿ ಮಾಡಿ ಹೈಕಮಾಂಡ್ ಆಶೀರ್ವಾದಕ್ಕೆ ಯತ್ನಿಸುತ್ತಿದ್ದಾರೆ.

 

ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ನಡೆದಿರುವ ೧೭ ಚುನಾವಣೆಯಲ್ಲಿ ೧೧ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಬಾಕ್ಸ್

ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ೨೦೧೪ರಲ್ಲಿ ಬಿಜೆಪಿ ಅಲೆಯ ನಡುವೆಯು ಗೆಲುವು ಸಾಧಿಸಿದ್ದರು.ಆದರೆ ೨೦೧೯ರ ಚುನಾವಣೆಯಲ್ಲಿ ಸೋಲಿನ ರುಚಿ ನೋಡಿದ್ದರು. ಕ್ಷೇತ್ರದ ಜನರ ಜೊತೆ ನಿಕಟ ಸಂಪರ್ಕ ಮತ್ತು ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದು ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಸರಳ ಸಜ್ಜನಿಕೆ ವ್ಯಕ್ತಿ ಎಂಬ ಉತ್ತಮ ಅಭಿಪ್ರಾಯ ಸಹ ಇದ್ದು ೨೦೨೪ರ ಚುನಾವಣೆಗೆ ಸ್ಪರ್ಧಿಸುವ ಪಟ್ಟಿಯಲ್ಲಿ ಪ್ರಬಲ ಆಕಾಂಕ್ಷಿಯಾಗಿ ಸ್ವರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಾಕ್ಸ್

ಎನ್ಎಸ್ ಯುಐ ಅಧ್ಯಕ್ಷ, ಯುವ ಕಾಂಗ್ರೆಸ್ ಅಧ್ಯಕ್ಷ, ಸಿಂಡಿಕೇಟ್ ಸದಸ್ಯರು ಆಗಿ ಕಾಂಗ್ರೆಸ್ ಪಕ್ಷದಲ್ಲಿ ದಶಕಗಳ ಕಾಲ ದುಡಿದಿದ್ದೇನೆ. ಪಕ್ಷಕ್ಕೆ ನಿಷ್ಠೆಯ ಮೇಲೆ ಮತ್ತು ಸ್ಥಳೀಯ ಅಭ್ಯರ್ಥಿ ಕೋಟಾದಲ್ಲಿ ನನಗೆ ಟಿಕೆಟ್ ನೀಡಬೇಕು ಎಂಬ ಘೋಷಣೆಯಡಿ ೨೦೦೯ರ ಚುನಾವಣೆಯಲ್ಲಿ ಅಭ್ಯರ್ಥಿ ಆಗಿ ಪರಾಭವಗೊಂಡಿದ್ದ ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ಟಿಕೆಟ್ ಬಯಸುತ್ತಿದ್ದಾರೆ.

ಬಾಕ್ಸ್

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರ್ಲಗುಂಟೆ ಎಂ.ರಾಮಪ್ಪ ಸಹ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈಗಾಗಲೇ ಮುಖಂಡರನ್ನು ಭೇಟಿ ಮಾಡಿ ಪ್ರಚಾರದ ರೀತಿ ಕ್ಷೇತ್ರವನ್ನು ಸುತ್ತುತಿದ್ದಾರೆ.

 

 

ಬಾಕ್ಸ್

ಬಾಗಲಕೋಟೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಳನನ್ನು ಸಮರ್ಥವಾಗಿ ನಿಭಾಯಿಸಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಚಿತ್ರದುರ್ಗ ಜಿಲ್ಲಾ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಸ್ತುವಾರಿ ಆಗಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪುತ್ರ ವಿನಯ್ ತಿಮ್ಮಾಪುರ ಅವರು ಸಹ ಯುವ ಕಾಂಗ್ರೆಸ್ ಕೋಟಾ ದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಗೆ ಲಾಭಿ ನಡೆಸುತ್ತಿದ್ದು ಕ್ಷೇತ್ರದಲ್ಲಿ ಮಠಗಳಿಗೆ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ.

ಇನ್ನೂ ಮಾಜಿ ಸಚಿವ ಪಾವಗಡದ ವೆಂಕಟರಮಣಪ್ಪ ಅವರ ಪುತ್ರ ಕುಮಾರಸ್ವಾಮಿ, ಯುವ ಕಾಂಗ್ರೆಸ್ ನಾಯಕ ಸುನೀಲ್‌ಕುಮಾರ್ ಬಹಿರಂಗವಾಗಿ ಟಿಕೆಟ್ ಯಾಚಿಸಿದ್ದಾರೆ.ಕೆಪಿಸಿಸಿ ವಕ್ತಾರ, ದಾವಣಗೆರೆಯ ಡಿ.ಬಸವರಾಜ್ ಸಹ ಆಕಾಂಕ್ಷಿ ಎಂದು ಸಾರಿದ್ದಾರೆ.

 

ಲೋಕಸಭೆ ಚುನಾವಣೆಯ ಮೇಲೆ ಗಮನ ನೆಟ್ಟಿರುವ ಕಾಂಗ್ರೆಸ್ ಆಂತರಿಕ ಸಮೀಕ್ಷೆ ಕೂಡ ನಡೆಸುತ್ತಿದೆ ಎಂಬುದನ್ನು ಪಕ್ಷದ ನಾಯಕರು ಖಚಿತಪಡಿಸಿದ್ದಾರೆ. ವಿಧಾನಸಭೆ ಚುನಾವಣೆಯ ರೀತಿಯಲ್ಲಿ ಸಮೀಕ್ಷೆ ನಡೆಸಿ ಮತದಾರರ ನಾಡಿ ಮಿಡಿತ ಅರಿತು ಅಭ್ಯರ್ಥಿ ಆಯ್ಕೆ ಮಾಡಲು ಈಗಾಗಲೇ ನಡೆಸುತ್ತಿರುವ ಸಮೀಕ್ಷೆ ನೆರವಾಗಲಿದೆ ಎಂಬುದು ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಾಜಿ ಸಚಿವ ಆಂಜನೇಯ ಸ್ಪರ್ಧೆ ?
ಕಳೆದ ವಿಧಾನಸಭೆ ಚುನಾವಣೆಯಲ್ಲಿಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ಮಾಜಿ ಸಚಿವ ಹೆಚ್. ಆಂಜನೇಯ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಆದರೆ, ಸ್ವತಃ ಮಾಜಿ ಸಚಿವ ಎಚ್.ಆಂಜನೇಯ ನಿರಾಕರಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿ‘ತಾವು ಲೋಕಸಭೆ ಟಿಕೆಟ್ ಕೋರಿ ಅರ್ಜಿ ಸಲ್ಲಿಸುವುದಿಲ್ಲ. ಲೋಕಸಭೆ ಚುನಾವಣೆ ಇನ್ನೂ ದೂರ ಇದೆ. ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡಲಿದೆಯೋ ಅವರ ಪರವಾಗಿ ನಿಷ್ಟೆಯಿಂದ ಕೆಲಸ ಮಾಡುವೆ’ ಎಂದಿದ್ದರು ಸಹ ಒಂದು ಕಡೆ ತಾವೇ ಅಭ್ಯರ್ಥಿ ಆಗಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತುಗಳ ಸಹ ಕ್ಷೇತ್ರದಲ್ಲಿ ಇದ್ದು ಆಂಜನೇಯ ಮಾತ್ರ ರಾಜ್ಯದಲ್ಲಿ ಸಿಎಂ ಜೊತೆ ಕಾರ್ಯಕ್ರಮ ಭಾಗವಹಿಸಿಕೊಂಡು ಕ್ಷೇತ್ರದಲ್ಲಿ ಸಂಚರ ನಡೆಸುತ್ತಿರುವುದು ನಾನು ಕೂಡ ಟಿಕೆಟ್ ಆಕಾಂಕ್ಷಿ ಅಂತಾನೋ ಅಥವಾ ನಾನು ಪ್ರಭಾವ ಕುಗ್ಗಿಲ್ಲ ಸೋತರು ಸಹ ಸರ್ಕಾರದಲ್ಲಿ ನಾನು ಪ್ರಭಾವಿ ಎಂಬ ಸಂದೇಶ ವಿರೋಧಿಗಳಿಗೆ ರವಾನಿಸಲು ಎಂಬುದು ಕಾದು ನೋಡಬೇಕಿದೆ.

ಬಾಕ್ಸ್

” ಲೋಕಲ್ ಅಭ್ಯರ್ಥಿ ದಾಳ”

ಚಿತ್ರದುರ್ಗ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು’ ಎಂಬ ಹೊಸ ದಾಳದ ಗೇಮ್ ಪ್ಲೇ ಮಾಡುತ್ತಿರುವ ಕಾಂಗ್ರೆಸ್‌ನ ಕೆಲ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಥಳೀಯ ಅಭ್ಯರ್ಥಿ ದಾಳಕ್ಕೆ ಮತ್ತಷ್ಟು ಧ್ವನಿ ಹೆಚ್ಚಾಗುವ ಸಾಧ್ಯತೆ ಇದೆ. ಚಿತ್ರದುರ್ಗ ಕ್ಷೇತ್ರವನ್ನು ಹಲವು ದಶಕಗಳಿಂದ ಜಿಲ್ಲೆಯ ಹೊರಗಿನವರು ಪ್ರತಿನಿಧಿಸುತ್ತಿದ್ದಾರೆ ಎಂಬ ಆರೋಪವಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಮತದಾರರಿಗೆ ನಮ್ಮವರು ಎಂಪಿ ಆಗಲಿ ಎಂಬ ಭಾವನೆಗಾಗಿ ಮತದಾರರ ಗಮನ ಕೇಂದ್ರಿಕರಿಸುತ್ತಿದ್ದಾರೆ..

[t4b-ticker]

You May Also Like

More From Author

+ There are no comments

Add yours