ಆಂಧ್ರ ಸಿಎಂ ಜಗನ್ ಪಕ್ಷಕ್ಕೆ ತಾಯಿ ಗುಡ್ ಬೈ, ತಾಯಿ ಬೆಂಬಲ ಯಾರಿಗೆ?

 

 

 

 

ಗುಂಟೂರು (ಆಂಧ್ರಪ್ರದೇಶ)Andhrapradesh: ದೇಶದಲ್ಲಿ  ಎಲ್ಲಾ ರಾಜ್ಯಗಳಿಗಿಂತ ವಿಭಿನ್ನ ರಾಜ್ಯ ಆಂಧ್ರಪ್ರದೇಶವಾಗಿದೆ.  ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​​ ಪಕ್ಷದಲ್ಲಿ ಕುತೂಹಲಕಾರಿ  ಬೆಳವಣಿಗೆ ಜರುಗಿದೆ. ಪಕ್ಷದ ಗೌರವಾಧ್ಯಕ್ಷೆ ಸ್ಥಾನಕ್ಕೆ ಮುಖ್ಯಮಂತ್ರಿ ವೈ.ಎಸ್​.ಜಗನ್​ಮೋಹನ್​ ರೆಡ್ಡಿ ಅವರ ತಾಯಿ ವೈ.ಎಸ್.ವಿಜಯಮ್ಮ  ರಾಜೀನಾಮೆ ಘೋಷಿಸಿದ್ದಾರೆ.

ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ಮಿಸ್ ಮಾಡದೇ ಓದಿ.

ಗುಂಟೂರು ಜಿಲ್ಲೆಯ ಚಿನಕಾಕಣಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅವರು ತಮ್ಮ ನಿರ್ಧಾರವನ್ನು  ಈ ಘೋಷಣೆ ಮಾಡಿದ್ದಾರೆ.

 

 

ಕುತೂಹಲದ ಸಂಗತಿ ಏನೆಂದರೆ, ಮಗನ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರುವ ಅವರು ಮಗಳ ಪರವಾಗಿ ನಿಂತಿದ್ದಾರೆ. ಅವರ ಪುತ್ರಿ, ಜಗನ್​ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ಹೊಸ ಪಕ್ಷ ಕಟ್ಟಿದ್ದು, ಆಕೆಯ ಜತೆ ತಾವು ನಿಲ್ಲುವುದಾಗಿ ವಿಜಯಮ್ಮ ಹೇಳಿದ್ದಾರೆ.

ಯಾರಿಗೂ ಯಾವುದೇ ಅಭ್ಯಂತರ ಉಂಟಾಗಬಾರದು ಎಂದು ನಾನು ರಾಜೀನಾಮೆ ನೀಡುವ ನಿರ್ಣಯ ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದಿರುವ ವಿಜಯಮ್ಮ, ದಿ.ವೈ.ಎಸ್​.ರಾಜಶೇಖರ ರೆಡ್ಡಿ ಪತ್ನಿಯಾಗಿ ಮತ್ತು ಶರ್ಮಿಳಾ ತಾಯಿಯಾಗಿ ನಾನು ತೆಲಂಗಾಣದಲ್ಲಿ ಹೊಸ ಪಕ್ಷದ ಪರವಾಗಿ ನಿಲ್ಲುವ ಅವಶ್ಯಕತೆ ಇದೆ ಎಂದಿದ್ದಾರೆ.

ಮಗಳ ಹೊಸ ಪಕ್ಷದ ಪರವಾಗಿ ನಿಂತಿದ್ದರೂ, ಮಗ ಮತ್ತು ಮಗಳು ಬೇರೆ ಬೇರೆಯಾಗಿರುವುದಕ್ಕೆ ನೋವು ತೋಡಿಕೊಂಡಿರುವ ವಿಜಯಮ್ಮಾ, ಜಗನ್​ ಮತ್ತು ಶರ್ಮಿಳಾ ಬೇರೆ – ಬೇರೆ ಪಕ್ಷಗಳು ಮತ್ತು ರಾಜ್ಯಗಳನ್ನು ಪ್ರತಿನಿಧಿಸುವ ಅನಿರ್ವಾಯತೆ ಯಾಕೆ ಬಂದಿದೆ ಎನ್ನುವುದು ನನಗೆ ಗೊತ್ತಿಲ್ಲ. ಅದು ಆ ದೇವರಿಗೆ ಗೊತ್ತು. ಆದರೆ ಒಂದು ಮಾತು ಹೇಳಬಲ್ಲೆ. ಕಷ್ಟದಲ್ಲಿದ್ದಾಗ ನಾನು ಜಗನ್​ ಜತೆಗಿದ್ದೆ, ಸಂತೋಷವಾಗಿದ್ದಲೂ ನಾನು ಆತನ ಜತೆಗಿದ್ದರೆ ನನ್ನ ಮಗಳು ಶರ್ಮಿಳಾಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಇದು ನನ್ನ ಮನಸಾಕ್ಷಿಗೆ ಒಪ್ಪುವುದಿಲ್ಲ ಎಂದು ವಿಜಯಮ್ಮ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours