ಮೋದೂರ್ ಗ್ರಾಮದ ಗೋಮಳ ರಾತ್ರೋ ರಾತ್ರಿ ಒತ್ತುವರಿ, ಬೆಳಂ ಬೆಳಗ್ಗೆ ಫಿಲ್ಡ್ ಗೆ ಇಳಿದ ತಹಶೀಲ್ದಾರ್ ರಘುಮೂರ್ತಿಯಿಂದ ಒತ್ತುವರಿದಾರರಿಗೆ ಫುಲ್ ಚಾರ್ಜ್

 

 

 

 

ಚಳ್ಳಕೆರೆ: ತಾಲೂಕಿನ  ಪರಶುರಾಂಪುರ ಹೋಬಳಿಯ   ಮೋದೂರ್ ಗ್ರಾಮದ ಸರ್ವೆ ನಂಬರ್ 15 ಮತ್ತು 18ರಲ್ಲಿ 72 ಎಕರೆ ಸರ್ಕಾರಿ ಗೋಮಾಳದ ಜಮೀನನ್ನು ರಾತ್ರೋರಾತ್ರಿ ಒತ್ತುವರಿ ಮಾಡಿದ ಮಾಹಿತಿ ಪಡೆದಂತ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಮತ್ತು ಕಂದಾಯ ಇಲಾಖೆ  ತಂಡ  ಇಂದು ಬೆಳ್ಳಂ ಬೆಳಿಗ್ಗೆ   ರಾಜಸ್ಥನಿರೀ ಕ್ಷಕರು ಮತ್ತು ಸರ್ವೇ ರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ‌ ಸಂಬಂಧಿಸಿದಂತೆ ಒತ್ತುವರಿ ಭೂಮಿಯನ್ನು   ಸಂಪೂರ್ಣ  ಅಳತೆ ಮಾಡಿಸಿ ಒಬಣ್ಣ ಬಿನ್ ಸಣ್ಣ ತಿಮ್ಮಣ್ಣ  ಸೇರಿ ಒಟ್ಟು   7 ಜನರು ಇಮ ಒತ್ತುವರಿ ಮಾಡಿರುವುದನ್ನು ಖಚಿತಪಡಿಸಿಕೊಂಡ ನಂತರ ಈ ಎಂಟು ಜನಗಳ ಮೇಲೆ ಭೂ ಕಂದಾಯ ಕಾಯ್ದೆಯ ಸೆಕ್ಷನ್ 192 ಎ ರಡಿ ಪ್ರಕರಣ ದಾಖಲೆ ಮಾಡಿ ಒತ್ತುವರಿಯಾಗಿದ್ದಂತಹ  ಪೂರ್ಣ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು.

 

 

ಈ ಸಂದರ್ಭದಲ್ಲಿ  ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ ಅವರು  ಸರ್ಕಾರಿ ಸುತ್ತುಗಳು ನಿಮ್ಮ ಕಣ್ಣ ಮುಂದೆಯೇ ದುರುಪಯೋಗವಾಗುತ್ತಿದೆ.ಆದರೆ ಗ್ರಾಮಸ್ಥರು ಮಾತ್ರ  ಮೌನವಾಗಿರುವುದು ಆತಂಕಕಾರಿ ವಿಚಾರ ಸರ್ಕಾರಿ ಸ್ವತ್ತುಗಳು ಗ್ರಾಮದ ಸ್ವತ್ತುಗಳು ಎಂಬ ಪರಿಕಲ್ಪನೆ ಬರುವವರೆಗೆ ಸರ್ಕಾರಿ ಸ್ವತ್ತುಗಳನ್ನು ಸಂರಕ್ಷಣೆ ಮಾಡುವುದು ಇಲಾಖೆಗಳಿಂದ ಕಷ್ಟಸಾಧ್ಯ  ಎಂದರು.  ಈ ರೀತಿಯ  ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿ ಗಳ ವಿರುದ್ಧ ಗೂಂಡಾ ಕಾಯ್ದೆ ಬಳಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವು ಎಂದು  ಹೇಳಿದರು.

ಇಳಕಲ್ ಬಳಿ ಚಿತ್ರದುರ್ಗದ ಗಾಣಿಗ ಸ್ವಾಮಿಜಿ ಪ್ರಯಾಣಿಸುತ್ತಿದ್ದ ವಿ.ಆರ್.ಎಲ್ ಬಸ್ ಅಪಘಾತಕ್ಕಿಡು!

ಈ ಸಂದರ್ಭದಲ್ಲಿ ತಾಲೂಕ್ ಸರ್ವೆ ಪ್ರಸನ್ನ ಕುಮಾರ್ ರಾಜಸ್ವ ನಿರೀಕ್ಷಕರಾದಂತಹ ಮೋಹನ್ ಕುಮಾರ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours