ಜನರು ಹೆಚ್ಚು ಸೇರುವ ದೇವರ ಕಾರ್ಯಗಳಿಗೆ ಸ್ವಲ್ಪ ವಿರಾಮ ನೀಡಿ:ತಹಶೀಲ್ದಾರ್ ಎನ್‌.ರಘುಮೂರ್ತಿ

 

 

 

 

ಚಳ್ಳಕೆರೆ: ಸಾರ್ವಜನಿಕರು ಧಾರ್ಮಿಕ ಭಾವನೆಗಳ ಜೊತೆ ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ಕೋವಿಡ್ ಮುನ್ಸೂಚನೆ ಇರುವುದರಿಂದ ಜನಸಂದಣಿ ಸೇರುವ ಸಂದರ್ಭದಲ್ಲಿ ಕೋವಿಡ್ ಹೆಚ್ಚತ್ತಿದ್ದು ಜನರು  ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಜೊತೆಗೆ  ನಿಯಮಗಳನ್ನು ಪಾಲಿಸಿ ಎಂದು  ಭಕ್ತಾಧಿಗಳಿಗೆ ತಹಶೀಲ್ದಾರ್ ಎನ್‌.ರಘುಮೂರ್ತಿ  ಸೂಚಿಸಿದರು.

ಚಳ್ಳಕೆರೆ ತಾಲೂಕಿನ  ಯಲಗಟ್ಟೆ ಗೊಲ್ಲರಟ್ಟಿಯಲ್ಲಿ ಕ್ಯಾತಪ್ಪ ದೇವರ ಮರ ಕಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

 

ಕೋವಿಡ್ ಮಹಾಮಾರಿ   ಸಾಕಷ್ಟು   ಜೀವಗಳನ್ನು ಬಲಿ ಪಡೆದುಕೊಂಡಿತು ಎಂಬುದು ಎಲ್ಲ ಸಾರ್ವಜನಿಕರಿಗೆ ನೆನಪಿರಲಿ. ನಮ್ಮಗಳ ಜೀವ ಮುಖ್ಯ ಕೋವಿಡ್ ಸಂಕಷ್ಟ ಬಗೆಹರಿದ ನಂತರ ನಾವು  ದೇವರ   ಕಾರ್ಯಗಳು ಮತ್ತು ಪೂಜಾ ಕಾರ್ಯಗಳನ್ನು ನೆರವೇರಿಸಬಹುದು. ಆ ಭಗವಂತನಿಗೆ ಹರಕೆ 12 ವರ್ಷ ಎನ್ನುವ ಗಾದೆ ಇದೆ. ಅದರ ಅನುಸಾರ ಮುಂದಿನ ದಿನಗಳಲ್ಲಿ ಪೂಜೆ ಕಾರ್ಯಗಳನ್ನು ವೈಭವವಾಗಿ ಮಾಡಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜನಗಳ ಆರೋಗ್ಯ ಮುಖ್ಯ ಪ್ರತಿಯೊಬ್ಬರ ಆರೋಗ್ಯವನ್ನು ಸರ್ಕಾರದಿಂದಲೇ ನಿರ್ವಹಿಸಲಾಗದು. ತಮ್ಮ ತಮ್ಮ ಆರೋಗ್ಯದ ಮುಂಜಾಗ್ರತ ಕ್ರಮಗಳನ್ನು ತಾವೇ ತೆಗೆದುಕೊಳ್ಳಬೇಕು. ಜನಸಂದಣಿ ಇರುವ ಪ್ರದೇಶದಲ್ಲಿ ಅಥವಾ ಜಾತ್ರೆ ಮುಂತಾದ ಪ್ರದೇಶದಲ್ಲಿ ಜಮಾವಣೆಯಾಗುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಎರಡು ಡೋಸ್ ವ್ಯಾಕ್ಸಿನ್ ಸೇರಿದಂತೆ ಬೂಸ್ಟರ್ ಡೋಸ್ ಅನ್ನು ಕೂಡ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಮುಂದಿನ  ದಿನಗಳಲ್ಲಿ  ಸರ್ಕಾರದ ಕಟ್ಟುಪಾಲನೆಯನ್ನು ಅನುಸರಿಸಬೇಕು ಎಂದು  ಮನವಿ ಮಾಡಿದರು.

ಈ  ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರಂಗಸ್ವಾಮಿ ,ಬಿಜೆಪಿ ಮಂಡಲ, ಚೌಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚಿಕ್ಕಣ್ಣ ಮತ್ತು ನೂರಾರು ಭಕ್ತರೂ ಉಪಸ್ಥಿತರಿದ್ದರು.ಚಿತ್ರದುರ್ಗ

[t4b-ticker]

You May Also Like

More From Author

+ There are no comments

Add yours