ಕಾಂಗ್ರೆಸ್ ಸರ್ಕಾರದಿಂದ ಫ್ರೀ ಕರೆಂಟ್, ಸಿಎಂ ಘೋಷಣೆ

 

 

 

 

ಬೆಂಗಳೂರು: ಗ್ಯಾರಂಟಿ ನಂ.1 ಗೃಹ ಜ್ಯೋತಿ ಯೋಜನೆ. ಇದನ್ನೆ ನಾವು ಮೊದಲೆ ಗ್ಯಾರಂಟಿಯಾಗಿ ಕೊಟ್ಟಿದ್ದು. ನಾವು 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದಿದ್ದೆವು. ಎಲ್ಲರಿಗೂ ಕೂಡ 200 ಯೂನಿಯ್ ವರೆಗೆ ಕೊಡುತ್ತೇವೆ ಅಂತಕಂತ ವಾಗ್ಧಾನವನ್ನು ಕೊಟ್ಟಿದ್ದೆವು.

ಈ ಗ್ಯಾರಂಟಿಯನ್ನು ಜಾರಿ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಯಾರು ಎಷ್ಟು ಬಳಸುತ್ತಾರೆ ವಿದ್ಯುತ್ ಅನ್ನು, ಸಂಮ್ ಎಕ್ಸ್ 70 ಯೂನಿಟ್ ಮಾಡಬಹುದು ಅವರಿಗೆ ಫ್ರೀ. ಎಕ್ಸ್ 12 ತಿಂಗಳಿನಲ್ಲಿ ವಿದ್ಯುತ್ ಅನ್ನು ಬಳಸಿದ್ದಾರೆ ಅದರ ಆವರೇಜ್ ತೆಗೆದುಕೊಳ್ಳುತ್ತೇವೆ. ಅದರ ಮೇಲೆ 10% ಹೆಚ್ಚು ಮಾಡುತ್ತೇವೆ. ಅವರು ಎಷ್ಟು ಎಷ್ಟು ಬಳಸಿದ್ದಾರೆ ವಿದ್ಯುತ್ ಅನ್ನು, ಅವರು ಇನ್ಮುಂದೆ ಬಿಲ್ ಕೊಡಬೇಕಾಗಿಲ್ಲ. ಜುಲೈ ನಿಂದ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬಿಲ್ ಕಟ್ಟುವಂತಿಲ್ಲ. ಈ ಹಿಂದಿನ ಬಾಕಿ ಬಿಲ್ ಕಟ್ಟಬೇಕು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಡಿಸಿಎಂ ಡಿ.ಕೆ ಶಿವಕುಮಾರ್, ಇವತ್ತು ಇಡೀ ದೇಶಕ್ಕೆ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು, ಈ ರಾಜ್ಯವನ್ನು, ಕರ್ನಾಟಕವನ್ನು ನಮಗೆ ಅಪಾರವಾದಂತ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ನುಡಿದಂತೆ ನಡೆಯುವವರು ನಾವು. ನಾವು ಅಧಿಕಾರ ತೆಗೆದುಕೊಂಡ ಮೊದಲ ದಿನದಿಂದ ಏನು ಮಾತನಾಡಿದ್ದೇವೆ ಆ ಮಾತಿಗೆ ಬದ್ಧರಾಗಿದ್ದೇವೆ ಎಂಬುದಾಗಿ ಹೇಳಿದರು.

ಈ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ನಾವು ವಿಧಾನಸಭಾ ಚುನಾವಣೆ ಸಂದರ್ಭಕ್ಕೂ ಮುಂಚೆ ನಮ್ಮ ಪಕ್ಷದ ವತಿಯಿಂದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ನಾನು ಮತ್ತು ನಮ್ಮ ಅಧ್ಯಕ್ಷರಾದಂತ ಡಿಕೆ ಶಿವಕುಮಾರ್ ಗ್ಯಾರಂಟಿ ಕಾರ್ಡ್ ಗಳಿಗೆ ನಮ್ಮ ಸಹಿ ಕೂಡ ಮಾಡಿದ್ದೆವು. ನಾವು ಗ್ಯಾರಂಟಿಯಾಗಿ, ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಜನರಿಗೆ ತಲುಪಿಸುತ್ತೇವೆ ಅಂತ ಮಾತುಗಳನ್ನು ಗ್ಯಾರಂಟಿ ಕಾರ್ಡ್ ಗಳನ್ನು ನಮ್ಮ ಕಾರ್ಯಕರ್ತರ ಮೂಲಕ ಎಲ್ಲ ಮನೆಗಳಿಗೆ ಹಂಚಿಸಲಾಗಿತ್ತು ಎಂದರು.

ಈ ಮಧ್ಯೆ ವಿರೋಧ ಪಕ್ಷಗಳು ಟೀಕೆಗಳನ್ನು ಮಾಡಿದ್ದಾರೆ. ಮಾಧ್ಯಮಗಳು ನಿಮಗೆ ಏನು ಅನ್ನಿಸುತ್ತೋ ಹಾಗೆ ಬರೆದಿದ್ದೀರಿ. ಅದರ ಬಗ್ಗೆ ನಮ್ಮ ತಕರಾರಿಲ್ಲ. ನಿಮ್ಮ ಅಭಿಪ್ರಾಯ ಹೇಳುವ ಕೆಲಸ ಮಾಡಿದ್ದೀರಿ. ಆದರೆ ಕ್ಯಾಬಿನೆಟ್ ಏನೂ ತೀರ್ಮಾನ ಮಾಡುತ್ತದೆ ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಾವು ಸರ್ಕಾರ ರಚನೆಯಾದ ದಿನದಿಂದ ನಾನು ಸಿಎಂ, ಡಿಸಿಎಂ ಡಿಕೆಶಿವಕುಮಾರ್ ಜೊತೆಗೆ 8 ಜನ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದೆವು. ಅವತ್ತು ಸಂಪುಟ ಸಭೆಯನ್ನು

 

 

ಮಾಡಿ ತೀರ್ಮಾನ ಮಾಡಿದೆವು. ಐದು ಗ್ಯಾರಂಟಿಗಳನ್ನು ಜಾರಿಗೆ ಕೊಡುತ್ತೇವೆ ಎಂದು ತೀರ್ಮಾನಿಸಲಾಗಿತ್ತು. ಅವತ್ತೇ ತಾತ್ವಿಕ ಆದೇಶವನ್ನು ನೀಡಲಾಗಿತ್ತು. ಅದು ಆದ ಮೇಲೆ ಇವತ್ತು ಸಚಿವ ಸಂಪುಟ ಸಭೆಯನ್ನು ನಡೆಸಲಾಯಿತು. ಇವತ್ತು ಕರೆದಿದ್ದು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಂಬಂಧದ ವಿಶೇಷವಾಗಿತ್ತು ಎಂದು ಹೇಳಿದರು.

ನಾವು ಬಹಳ ಸುಧೀರ್ಘವಾಗಿ ಐದು ಗ್ಯಾರಂಟಿಗಳನ್ನು ಚರ್ಚೆ ಮಾಡಿದ್ದೇವೆ. ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ ಐದು ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಕೊಡಬೇಕು ಎಂಬುದಾಗಿ ತೀರ್ಮಾನ ಮಾಡಿದ್ದೇವೆ. ಅದು ಯಾವುದೇ ಜಾತಿ, ಯಾವುದೇ ಧರ್ಮ, ಯಾವುದೇ ಭಾಷೆ ಇವು ಯಾವುದು ಇಲ್ಲದೆ ಎಲ್ಲಾ ಜಾತಿ, ಧರ್ಮ, ಭಾಷೆಯವರಿಗೆ ಕರ್ನಾಟಕದ ಜನರಿಗೆ, ಜನತೆಗೆ ಈ ಗ್ಯಾರಂಟಿಗಳನ್ನು ತಲುಪಿಸುತ್ತೇವೆ. ಜಾರಿಗೆ ಕೊಡುತ್ತೇವೆ ಎಂದರು.

ಗ್ಯಾರಂಟಿ ನಂ.1 ಗೃಹ ಜ್ಯೋತಿ ಯೋಜನೆ. ಇದನ್ನೆ ನಾವು ಮೊದಲೆ ಗ್ಯಾರಂಟಿಯಾಗಿ ಕೊಟ್ಟಿದ್ದು. ನಾವು 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದಿದ್ದೆವು. ಎಲ್ಲರಿಗೂ ಕೂಡ 200 ಯೂನಿಯ್ ವರೆಗೆ ಕೊಡುತ್ತೇವೆ ಅಂತಕಂತ ವಾಗ್ಧಾನವನ್ನು ಕೊಟ್ಟಿದ್ದೆವು ಎಂದರು.

ಈ ಗ್ಯಾರಂಟಿಯನ್ನು ಜಾರಿ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಯಾರು ಎಷ್ಟು ಬಳಸುತ್ತಾರೆ ವಿದ್ಯುತ್ ಅನ್ನು, ಸಂಮ್ ಎಕ್ಸ್ 70 ಯೂನಿಟ್ ಮಾಡಬಹುದು ಅವರಿಗೆ ಫ್ರೀ. ಎಕ್ಸ್ 12 ತಿಂಗಳಿನಲ್ಲಿ ವಿದ್ಯುತ್ ಅನ್ನು ಬಳಸಿದ್ದಾರೆ ಅದರ ಆವರೇಜ್ ತೆಗೆದುಕೊಳ್ಳುತ್ತೇವೆ. ಅದರ ಮೇಲೆ 10% ಹೆಚ್ಚು ಮಾಡುತ್ತೇವೆ. ಅವರು ಎಷ್ಟು ಎಷ್ಟು ಬಳಸಿದ್ದಾರೆ ವಿದ್ಯುತ್ ಅನ್ನು, ಅವರು ಇನ್ಮುಂದೆ ಬಿಲ್ ಕೊಡಬೇಕಾಗಿಲ್ಲ ಎಂದರು.

ನೀವು ಎಷ್ಟು ವಿದ್ಯುತ್ ಖರ್ಚು ಮಾಡಿದ್ದೀರಿ ಅದರ ಆಧಾರದ ಮೇಲೆ ಒಂದು ವರ್ಷದಲ್ಲಿ ಮಾಡಿರುವಂತ ವಿದ್ಯುತ್ ಖರ್ಚಿನ ಮೇಲೆ ಹಾಗೂ 200 ಯೂನಿಟ್ ಒಳಗಡೆ ಯಾರು ಯಾರು ಖರ್ಚು ಮಾಡಿದ್ದಾರೆ ಅವರಿಗೆ ಉಚಿತ ವಿದ್ಯುತ್ ಎಂಬುದಾಗಿ ತಿಳಿಸಿದರು.

ನಂ.2 ಗೃಹ ಲಕ್ಷ್ಮೀ ಇದನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಬ್ಯಾಂಕ್ ಅಕೌಂಟ್ಸ್, ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ. ಯಾರು ಮನೆಯ ಯಜಮಾನಿ ಎಂಬುದು ತೀರ್ಮಾನಿಸಬೇಕಾಗಿದೆ. ನಾವು ಹೇಳಿರುವಂತದ್ದು ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ ಎಂದಿದ್ದೆವು. ಆದ್ದರಿಂದ ಅಕೌಂಟ್ ಮಾಹಿತಿ, ಆಧಾರ್ ಕಾರ್ಡ್, ಅರ್ಜಿ ಸಲ್ಲಿಸಬೇಕು. ಜೂನ್ 15 ರಿಂದ ಜುಲೈ 15ರ ಒಳಗಾಗಿ ಮನೆ ಒಡತಿಯ ಮಾಹಿತಿ ನೀಡಬೇಕು. ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಇದು ಆದಮೇಲೆ ಜುಲೈ 15ರಿಂದ ಆಗಸ್ಟ್ 15ರ ಒಳಗಡೆ ಪ್ರೋಸಸ್ ಮಾಡಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಮನೆಯ ಯಜಮಾನಿ ಖಾತೆಗೆ 2000 ರೂ ಜಮಾ ಮಾಡುತ್ತೇವೆ ಎಂದರು.

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ದಾರರ ಮನೆಯ ಒಡತಿಯ ಖಾತೆಗೆ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗುತ್ತದೆ. ಮನೆಯ ಯಜಮಾನಿ ಯಾರು ಎನ್ನುವ ಬಗ್ಗೆ ಕುಟುಂಬಸ್ಥರೇ ಮಾಹಿತಿಯನ್ನು ನೀಡಬೇಕು. ಆ ಮಾಹಿತಿ ಆಧಾರದ ಮೇಲೆ ಪ್ರತಿ ತಿಂಗಳು 2000 ರೂ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours