ಭಾರತದ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ: ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ-19 ದೇಶದಲ್ಲಿ 20 ಅಂಶಗಳ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಬಡವರ, ನಿರ್ಗತಿಕರ ಅಭಿವೃದ್ಧಿಗೆ ಶ್ರಮಿಸಿದ ಭಾರತದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ದೇಶ ಜನ ಎಂದಿಗೂ ಮರೆಯರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

 

 

ನಗರದ ಶಾಸಕರ ಭವನದಲ್ಲಿ ಶನಿವಾರ ನಡೆದ ಮಾಜಿ ಪ್ರಧಾನ ಮಂತ್ರಿ ಹಾಗೂ ಭಾರತದ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ 105ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ‌ ಚಾಲನೆ ನೀಡಿ ಮಾತನಾಡಿದರು. ನೆಹರೂರವರ ಕುಟುಂಬ ಈ ದೇಶಕ್ಕೆ ಹಲವಾರು ಸೇವೆಗಳನ್ನು ಸಲ್ಲಿಸಿ, ತಮ್ಮ ಪ್ರಾಣವನ್ನೇ ತೆತೀದೆ. ಅವರ ಕೊಡುಗೆಯ ಬಗ್ಗೆ ತಿಳಿಯದ ಹಲವಾರು ಅವರ ಬಗ್ಗೆ ಟೀಕಿಸುವುದು ಸರಿಯಲ್ಲ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಅವರ ಸೇವೆ ಎಂದಿಗೂ ಮರೆಯುವಂತಿಲ್ಲ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ನಂದಿನಿ ಗೌಡ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾ ಬಾಯಿ, ಪರಶುರಾಮ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅನಿತಾ, ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್ ಪ್ರಸನ್ನ ಕುಮಾರ್, ಸದಸ್ಯರಾದ ಪ್ರಕಾಶ್, ಮಲ್ಲಿಕಾರ್ಜುನ, ಕವಿತಾ ಬೋರೆಯ್ಯ, ಸುಜಾತ ಪ್ರಹ್ಲಾದ್, ಸುಮಾ ಭರಮಯ್ಯ, ಜಯಲಕ್ಷ್ಮಿ ಕೃಷ್ಣಮೂರ್ತಿ, ರಾಘವೇಂದ್ರ, ಕವಿತಾ ವೀರೇಶ್, ಸಾವಿತ್ರಿ, ವಿರೂಪಾಕ್ಷಿ, ಚಳ್ಳಕೆರೆಪ್ಪ, ರಮೇಶ್ ಗೌಡ, ವೀರಭದ್ರಯ್ಯ, ಜೈ ತುಂಬಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಮೂರ್ತಿ, ಮುಖಂಡರಾದ ಎಚ್.ಎಸ್. ಸೈಯದ್, ಸಿ.ಟಿ. ಶ್ರೀನಿವಾಸ್, ಪಿ. ತಿಪ್ಪೇಸ್ವಾಮಿ, ಅನ್ವರ್ ಮಾಸ್ಟರ್, ಡಿ.ಕೆ. ಕಾಟಯ್ಯ, ಹಿರಿಯ ಮುಖಂಡರಾದ ಟಿಎಟಿ ಪ್ರಭುದೇವ್, ಪರಶುರಾಂಪುರ ಕಾಂಗ್ರೆಸ್ ಅಧ್ಯಕ್ಷ ಟಿ.ಆರ್. ಕಿರಣ್ ಶಂಕರ್, ಜಿಲ್ಲಾ ಪ್ರಧಾನ ಕಾಯ೯ದಶಿ೯ಗಳಾದ ಪ್ರಕಾಶ್‌, ಮೂಡಲಗಿರಿಯಪ್ಪ, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours