ಎರಡನೇ ಅವಧಿಗೆ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ನಿಗದಿ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.14:
ರಾಜ್ಯ ಚುನಾವಣೆ ಆಯೋಗದ ಆದೇಶದಂತೆ 2020ನೇ ಸಾಲಿನಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿಯನ್ನು ನಿಗಧಿಪಡಿಸಲಾಗಿದೆ.
ಚಿತ್ರದುರ್ಗ ತಾಲ್ಲೂಕಿನ 38 ಗ್ರಾಮ ಪಂಚಾಯತಿಗಳ ಪೈಕಿ 13 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 7 ಮಹಿಳೆ, 10 ಅನುಸೂಚಿತ ಪಂಗಡ, ಇದರಲ್ಲಿ 5 ಮಹಿಳೆ, 15 ಸಾಮಾನ್ಯ ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.
ಚಳ್ಳಕೆರೆ ತಾಲ್ಲೂಕಿನ 40 ಗ್ರಾಮ ಪಂಚಾಯತಿಗಳ ಪೈಕಿ 11 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 6 ಮಹಿಳೆ, 14 ಅನುಸೂಚಿತ ಪಂಗಡ ಇದರಲ್ಲಿ 7 ಮಹಿಳೆ, 15 ಸಾಮಾನ್ಯ ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ 16 ಗ್ರಾಮ ಪಂಚಾಯತಿಗಳ ಪೈಕಿ 4 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 2 ಮಹಿಳೆ, 8 ಅನುಸೂಚಿತ ಪಂಗಡ ಇದರಲ್ಲಿ 4 ಮಹಿಳೆ, 4 ಸಾಮಾನ್ಯ ಇದರಲ್ಲಿ 2 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.
ಹಿರಿಯೂರು ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳ ಪೈಕಿ 10 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 5 ಮಹಿಳೆ, 4 ಅನಸೂಚಿತ ಪಂಗಡ ಇದರಲ್ಲಿ 2 ಮಹಿಳೆ, 2 ಹಿಂದುಳಿದ “ಅ” ವರ್ಗಕ್ಕೆ ಇದರಲ್ಲಿ 1 ಮಹಿಳೆ, 17 ಸಾಮಾನ್ಯ ಇದರಲ್ಲಿ 9 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ 29 ಗ್ರಾಮ ಪಂಚಾಯತಿಗಳ ಪೈಕಿ 9 ಅನುಸೂಚಿತ ಜಾತಿ, ಇದರಲ್ಲಿ 5 ಮಹಿಳೆ, 4 ಅನುಸೂಚಿತ ಪಂಗಡ, ಇದರಲ್ಲಿ 2 ಮಹಿಳೆ, 1 ಹಿಂದುಳಿದ “ಅ” ವರ್ಗದ ಮಹಿಳೆ, 15 ಸಾಮಾನ್ಯ ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಹೊಸದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳ ಪೈಕಿ 7 ಅನುಸೂಚಿತ ಜಾತಿ, ಇದರಲ್ಲಿ 4 ಮಹಿಳೆ, 3 ಅನುಸೂಚಿತ ಪಂಗಡ ಇದರಲ್ಲಿ 2 ಮಹಿಳೆ, 5 ಹಿಂದುಳಿದ “ಅ” ವರ್ಗಕ್ಕೆ, ಇದರಲ್ಲಿ 2 ಮಹಿಳೆ, 1 ಹಿಂದುಳಿದ “ಬ” ವರ್ಗದ ಮಹಿಳೆ, 17 ಸಾಮಾನ್ಯ ಇದರಲ್ಲಿ 8 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಗ್ರಾಮ ಪಂಚಾಯತಿವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗಿದಿ ಕಾರ್ಯಕ್ರಮವನ್ನು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ. ಜೂನ್ 19 ರಂದು ಬೆಳಿಗ್ಗೆ 11 ಗಂಟೆಗೆ ಮೊಳಕಾಲ್ಮೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಮೊಳಕಾಲ್ಮೂರು ಪಟ್ಟಣದ ಗುರುಭವನ, ಚಳ್ಳಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಮಧ್ಯಾಹ್ನ 3 ಗಂಟೆಗೆ ಚಳ್ಳಕೆರೆ ನಗರದ ಪಾವಗಡ ರಸ್ತೆಯ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪ, ಜೂನ್ 20 ರಂದು ಬೆಳಿಗ್ಗೆ 11 ಗಂಟೆಗೆ ಹೊಳಲ್ಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪಟ್ಟಣದ ಶಿವಮೊಗ್ಗ ರಸ್ತೆಯ ಕುಕ್ಕಾಡೇಶ್ವರಿ ದೇವಸ್ಥಾನದ ಎದುರಿನ ವಾಲ್ಮೀಕಿ ಸಮುದಾಯ ಭವನದಲ್ಲಿ, ಹೊಸದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಮಧ್ಯಾಹ್ನ 3 ಗಂಟೆಗೆ ಹೊಸದುರ್ಗ ಪಟ್ಟಣದ ಮುಖ್ಯ ರಸ್ತೆಯಲ್ಲಿನ ಗೌಸಿಯಾ ಶಾದಿಮಹಲ್, ಜೂನ್ 21 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಹಿರಿಯೂರು ನಗರದ ಹುಳಿಯಾರು ಮುಖ್ಯ ರಸ್ತೆ ತಹಾ ಕಲ್ಯಾಣ ಮಂಟಪ, ಚಿತ್ರದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿ ರಸ್ತೆಯ ಶ್ರೀ ತಿರುಮಲ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours