ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಐದು ದಿನಗಳು ಮಳೆ ಸಾಧ್ಯತೆ

 

 

 

 

ಬೆಂಗಳೂರು : ರಾಜ್ಯ   ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ  ಎಲ್ಲಾ  ಜಿಲ್ಲೆಗಳಲ್ಲೂ ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಹೆಚ್ಚು ಇದೆ ಎಂದು ಹವಾಮಾನ ಇಲಾಖೆ(Meteorological Department)ಮುನ್ಸೂಚನೆ ನೀಡಿದೆ.

 ಕಳೆದ ತಿಂಗಳು ಸುರಿದ ಮಳೆಗೆ ಸ್ವಲ್ಪ ಭೂ ತಾಯಿ ತಂಪಾಗಿದ್ದಳು.  ಕಳೆದ ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಈ ವಾರವೂ ಮುಂದುವರಿಯಲಿದ್ದು ಮಳೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸರ್ಕಾರಿ ನಿವೇಶನ ಮತ್ತು ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ

 

 

ನಗರದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಈ ವಾರ ಸ್ವಲ್ಪ ಶೀತ ವಾತಾವರಣ ಹೆಚ್ಚಿರಲಿದೆ ಎಂದು ತಿಳಿಸಿದೆ.

ಈ ಸಮಯದಲ್ಲಿ  ರಾಜ್ಯದ  ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆ ಸಾಧ್ಯತೆ ಇದೆ

ಡಿಸೆಂಬರ್ 2 ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾತ್ರ ಮೋಡ ಕವಿದ ವಾತಾವರಣ ಇರಲಿದೆ. ಇದೇ ವಾತವರಣದಿಂದ  ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಟ್ಟಿನಲ್ಲಿ ಮಳೆಗಾಲ ಮುಗಿದಿದೆ ಎಂದುಕೊಂಡಿದ್ದ ರಾಜಧಾನಿಯ ಜನರಿಗೆ ಮಂಜಾನೆ ಚುಮುಚುಮು ಚಳಿಯಲ್ಲೂ ಮಳೆಯಾಗುತ್ತಿರುವುದು ಬೆಚ್ಚನೆ ಜಾಗ ಹುಡುಕಾಡುವಂತಾಗಿದೆ.

[t4b-ticker]

You May Also Like

More From Author

+ There are no comments

Add yours