ಧಾರವಾಡ ಜಿಲ್ಲೆಯ ಮಾದಿಗ ಸಮುದಾಯದ ಹಲವು ಮುಖಂಡರಿಂದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ಭೇಟಿ

 

 

 

 

ಚಿತ್ರದುರ್ಗ: ನಗರದ  ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪ 82 ಎಕರೆ ಭೂಮಿ ನೀಡಿರುವ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯ ಮಾದಿಗ ಸಮುದಾಯದ ಹಲವು ಮುಖಂಡರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಮಾದಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಧಾರವಾಡ ಜಿಲ್ಲೆಯನ್ನೇ ಮುಖ್ಯ ಕಾರ್ಯಕ್ಷೇತ್ರವನ್ನಾಗಿ ಘೋಷಿಸಬೇಕೆಂದು ಶ್ರೀಗಳಲ್ಲಿ ಮನವಿ ಮಾಡಿದರು. ಧಾರವಾಡ ಜಿಲ್ಲೆಯಲ್ಲಿ ಮಠ ನಿರ್ಮಾಣ ಮಾಡಿದರೆ ಸಾಧ್ಯವಿರುವ ಎಲ್ಲಾ ಸಹಕಾರ ಒದಗಿಸುವುದಾಗಿ ಮುಖಂಡರು ತಿಳಿಸಿದರು.

 

 

ಈ ಕುರಿತು ಸಮಾಜದ ಹಿರಿಯರು ಹಾಗೂ ಶ್ರೀಮಠದ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸುವುದಾಗಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಸ್ವಾಮೀಜಿಗಳನ್ನು ಭೇಟಿಯಾದ ಉತ್ತರ ಕರ್ನಾಟಕ ಭಾಗದ ಮುಖಂಡರ ನಿಯೋಗದಲ್ಲಿ ವೆಂಕಟೇಶ ಸಗಬಾಲ, ಅಶೋಕ ದೊಡ್ಡಮನಿ, ಸಂಗಮೇಶ ಮಾದಾರ,ಅರ್ಜುನ ಪತ್ರಣ್ಣವರ, ಕಲ್ಮೇಶ ಹಾದಿಮನಿ, ರಾಮಚಂದ್ರ ಪೊದೊಡ್ಡಿ, ಗದಿಗೆಪ್ಪ ಹಂಜಿನಮನಿ, ಯಲ್ಲಪ್ಪ ಹುಲಮನಿ, ಗೋಪಾಲ ದೊಡ್ಡಮನಿ, ಗುರುನಾಥ ಹರಿಜನ, ಫಕ್ಕೀರೇಶ ಮಾದಾರ, ಯಲ್ಲಪ್ಪ ಮಾದಾರ. ಇದ್ದರು

[t4b-ticker]

You May Also Like

More From Author

+ There are no comments

Add yours