“ಡಾನ್ ಬೋಸ್ಕೊ ಶಾಲೆಯಲ್ಲಿ ಸಸ್ಯಗಳ ಹಬ್ಬ”

 

 

 

 

 

ಚಿತ್ರದುರ್ಗ: ನಗರದ ಡಾನ್ ಬೋಸ್ಕೋ ಶಾಲೆಯಲ್ಲಿ
ವನಮಹೋತ್ಸವವನ್ನು ಸಸ್ಯಗಳ ಹಬ್ಬವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಜಿಲ್ಲಾ ವಲಯ ಅರಣ್ಯ ಅಧಿಕಾರಿ ಶಿವಣ್ಣ, ನಗರಸಭೆ ಆಯುಕ್ತರಾದ ಹನುಮಂತರಾಯ ಹಾಗೂ ಡಾನ್ ಬೋಸ್ಕೊ ಸಂಸ್ಥೆ ಯ ನಿರ್ದೇಶಕರಾದ ಪಾದರ್ ಸಜಿ ಜಾರ್ಜ್ ರವರು ಪಾಲ್ಗೊಂಡಿದ್ದರು.

 

 

ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾ ವಲಯ ಅರಣ್ಯ ಅಧಿಕಾರಿಯವರಾದ ಶಿವಣ್ಣ ಮಾತನಾಡಿ, ಮಕ್ಕಳಿಗೆ ಮರ ಗಿಡ ಗಳಿಂದ ಆಗುವ ಪ್ರಯೋಜನಗಳು ಸಾಕಷ್ಟು ಇವೆ. ಪರಿಸರದ ಬಗ್ಗೆ ನಾವು ಅತ್ಯಮೂಲ್ಯ ಮಾಹಿತಿಯನ್ನು ತಿಳಿಯಬೇಕು. ನಾನು ಪ್ರತಿಯೊಬ್ಬರೂ ಗಿಡಬೆಳೆಸಬೇಕು ಎಂದರು.

ಶಾಲೆಯ ಮಕ್ಕಳು ಮೆರವಣಿಗೆಯ ಮೂಲಕ ಡಿಸಿ ವೃತ್ತ ದಲ್ಲಿರುವ ಪಾರ್ಕಿನಲ್ಲಿ ನೂರಾರು ಗಿಡಗಳನ್ನು ನೆಟ್ಟರು. ನಗರಸಭೆ ಆಯುಕ್ತರಾದ ಹನುಮಂತರಾಯ ಮಾತನಾಡಿ, ಗಿಡಗಳನ್ನು ನೆಟ್ಟಿ ಪೋಷಿಸುವುದು ಸರ್ಕಾರ ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕರ ಕರ್ತವ್ಯ, ನೀವು ಮಕ್ಕಳು ಈಗ ಶಾಲೆಯಲ್ಲಿ ವನಮಹೋತ್ಸವನ್ನು ಆಚರಿಸಿ ದೊಡ್ಡವರಾದ ಮೇಲೆ ಮರೆಯಬಾರದು ಎಂದರು.

ಮಕ್ಕಳು ಡಿಸಿ ವೃತ್ತ ದಲ್ಲಿರುವ ಪಾರ್ಕಿನಲ್ಲಿ100 ಸಸಿಗಳನ್ನು ನೆಡುವುದರ ಮುಲಕ ಈ ಕಾರ್ಯಕ್ರಮವನ್ನು ಯಶಸ್ವಿ ಯಾಗಿಸಿದರು.

ಈ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಫಾದರ್ ಲಾರೆನ್ಸ್, ನಗರಸಭೆ ಪರಿಸರ ನಿರೀಕ್ಷಕರಾದ ಜಾಫರ್, ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ವೇದಿಕೆ ಸಂಚಾಲಕ  ಮಾಲತೇಶ್ ಅರಸ್, ಶಿಕ್ಷಕ ರಾದ ಶಾಂತರಾಜ್, ರಾಯಪ್ಪ, ಬಶೀರಾ, ಶಾಂತಕುಮಾರಿ, ಅನಿತಾ, ಶಿವಕುಮಾರ್, ರುದ್ರೇಶ್, ಮಂಜುನಾಥ್, ಕುಲ್ಸುಮ್ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours