ಕೌಟುಂಬಿಕ ಕಲಹ ಸುಖಾಂತ್ಯ : ಪೋಷಕರ ಮಡಿಲು ಸೇರಿದ ಮಕ್ಕಳು

 

 

 

 

ಚಿತ್ರದುರ್ಗ ಫೆ. 04 :
ಚಿತ್ರದುರ್ಗ ತಾಲೂಕಿನ ಅನ್ನೇಹಾಳ ಗ್ರಾಮದ ರಘುನಾಥ ಮತ್ತು ದೀಪಾ ಅವರದು ಸುಂದರ ಕುಟುಂಬ. ಇವರಿಗೆ ಸಿರಿ (3) ಹಾಗೂ ಚಾರು (7) ಎಂಬ ಇಬ್ಬರು ಮುದ್ದಾದ ಹೆಣ್ಣುಮಕ್ಕಳು. ಇವರ ಸುಖ ಸಂಸಾರಕ್ಕೆ ಕಂಟಕವಾದದ್ದು ಕುಡಿತದ ಚಟ. ಇದರಿಂದಾಗಿ ಗಂಡ ಹೆಂಡಿರ ಮಧ್ಯ ಕಲಹ, ಈ ಕಲಹ ಅತಿರೇಕಕ್ಕೆ ಹೋಗಿ ಕುಟುಂಬ ವಿಘಟನೆ ಕಾರಣವಾಯಿತು. ಮಕ್ಕಳು ತಂದೆ ತಾಯಿರ ಪ್ರೀತಿ ಆರೈಕೆಯಿಂದ ವಂಚಿತರಾದರು. ಈ ಘಟನೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ಬಂದಿತು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಗೀರಿಶ್.ಬಿ.ಕೆ. ಮಕ್ಕಳ ಆರೈಕೆ ಬಗ್ಗೆ ಪೋಷಕರಿಗೆ ತಿಳಿ ಹೇಳಿ, ಕುಟುಂಬವನ್ನು ಬೆಸೆಯುವಂತೆ ಮಕ್ಕಳ ರಕ್ಷಣಾಧಿಕಾರಿಗಳಿಗೆ ತಿಳಿಸಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಇಂದಿರಾ ಹಾಗೂ ಓ.ಆರ್.ಡಬ್ಲ್ಯೂ. ಮಂಜುನಾಥ ಅನ್ನೇಹಾಳ ಗ್ರಾಮಕ್ಕೆ ತೆರಳಿ, ಕಕ್ಕೆಹರವು ಗ್ರಾಮದಲ್ಲಿ ಇದ್ದ ದೀಪಾ ಹಾಗೂ ಮಕ್ಕಳನ್ನು ಕರೆಸಿ, ಗ್ರಾಮದ ಹಿರಿಯ ಸಮ್ಮುಖದಲ್ಲಿ ದಂಪತಿಗಳನ್ನು ಒಂದು ಗೂಡಿಸಿದ್ದಾರೆ.
ಮಕ್ಕಳ ಲಾಲನೆ, ಪಾಲನೆ, ವಿದ್ಯಾಭ್ಯಾಸವನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ರಘುನಾಥ ಹಾಗೂ ದೀಪಾ ಅವರಿಗೆ ತಿಳಿ ಹೇಳಿದ್ದಾರೆ. ಕೌಟುಂಬಿಕ ಕಲಹ ಸುಖಾಂತ್ಯಗೊಂಡು ಮಕ್ಕಳು ಪೋಷಕರ ಮಡಿಲು ಸೇರಿದ್ದಾರೆ.
[t4b-ticker]

You May Also Like

More From Author

+ There are no comments

Add yours