ಪ್ರತಿಯೊಬ್ಬರು ಗಿಡ ನೆಟ್ಟು ಪ್ರಕೃತಿಗೆ ಕೊಡುಗೆ ನೀಡಿ : ಎಂ.ಕೆ. ವಠೋರೆ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 17:
ಪ್ರಕೃತಿ ಮಾನವನಿಗೆ ಸಾಕಷ್ಟು ಕೊಡುಗೆ ನೀಡಿದೆ. ಮಾನವ ಕೂಡ ಪ್ರಕೃತಿಗೆ ತನ್ನದೇ ಕೊಡುಗೆ ನೀಡಬೇಕು. ಪ್ರತಿಯೊಬ್ಬರು ಸಸಿಗಳನ್ನು ನೆಡವುದರ ಮೂಲಕ ಪ್ರಕೃತಿ ಕೊಡುಗೆ ನೀಡಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ. ವಠೋರೆ ತಿಳಿಸಿದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಭಾರತ ಸ್ವಾತಂತ್ರೋತ್ಸವ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ-48ರ ಮಲ್ಲಾಪುರ ಗ್ರಾಮದ ಹೊಸ ಬೈಪಾಸ್‍ನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು.

 

 

ಭಾರತ ಸ್ವಾತಂತ್ರೋತ್ಸವ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಗಸ್ಟ್ 15 ವರೆಗೂ  ದೇಶಾದ್ಯಂತ 75 ಲಕ್ಷ ಗಿಡಗಳನ್ನು ನೆಡುವುದು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಗುರಿಯಾಗಿದೆ. ಚಿತ್ರದುರ್ಗ ಮತ್ತು  ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ 2000 ಗಿಡಗಳು ಹಾಗೂ ಹೊಸಪೇಟೆ ಮತ್ತು ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ -50 ರಲ್ಲಿ 1000 ಗಿಡಗಳು, ಬೈರಾಪುರ ಚಳ್ಳಕೆರೆಯಲ್ಲಿ 500, ತುಮಕೂರು-ಚಿತ್ರದುರ್ಗ ಹೆದ್ದಾರಿಯಲ್ಲಿ 500 ಗಿಡಗಳನ್ನು ನೆಡಲಾಗಿದೆ. ಇಂದು ಜಾಗತಿಕ ತಾಪಮಾನವನ್ನು ಸರಿ ಹೊಂದಿಸಬೇಕಾದರೆ ಪರಿಸರ ಸಂರಕ್ಷಣೆ ಅಗತ್ಯ  ಹಾಗಾಗಿ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು. ನೆಟ್ಟ ಗಿಡಗಳು ಮುಂದಿನ ವರ್ಷದ ಮಳೆಗಾಲದವರೆಗೆ ಹಾರೈಕೆ ಮಾಡಬೇಕು. ಸುಂದರ ತೋಟದ ಹಾಗೆ ಈ ಪ್ರದೇಶ ಕಾಣಬೇಕು. ಈ ಪ್ರದೇಶಕ್ಕೆ ಹೊಂದಿಕೊಳ್ಳುವ ಬೇವಿನ ಮರಗಳನ್ನು ನಡೆಲಾಗುತ್ತದೆ. ಈ ಅಭಿಯಾನದಲ್ಲಿ ಹೆದ್ದಾರಿ ಪ್ರಾಧಿಕಾರದೊಂದಿಗೆ ಸ್ಥಳೀಯ ಜನಪ್ರತಿನಿಧಿಗಳು, ರೋಟರಿ ಕ್ಲಬರ್, ಕಾಲೇಜು ವಿದ್ಯಾರ್ಥಿಗಳು ಅಗತ್ಯ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ ವೆಂಕಟೇಶ್ ಮಾತನಾಡಿ, ರಸ್ತೆ, ರೈಲು, ಭಾರತದ ಆರ್ಥಿಕತೆ ಬೆಳವಣಿಗೆಗೆ ಎಷ್ಟು ಪೂರಕವೋ ಅದೇ ರೀತಿಯಲ್ಲಿ ಪರಿಸರವೂ ಕೂಡ ಮುಖ್ಯವಾಗಿದೆ. ಕರೋನಾ ಸಂದರ್ಭದಲ್ಲಿ ಆಕ್ಸಿಜನ್ ಸಮಸ್ಯೆ ತುಂಬಾ ಎದುರಾಗಿತ್ತು. ಹಾಗಾಗಿ ನಾವೆಲ್ಲರೂ ಕೂಡ ಪರಿಸರ ಬೆಳೆಸುವುದಕ್ಕೆ ಮುಂದಾಗಬೇಕು ಎಂದರು. ಭಾರತದಲ್ಲಿ ಶೇಖಡ 30ರಷ್ಟು ಅರಣ್ಯವನ್ನು ಬೆಳೆಸುವ ಗುರಿಯನ್ನು ಹೊಂದಬೇಕಾಗಿದೆ ಎಂದರು.
ನಾವು ಪರಿಸರ ಸಂರಕ್ಷಣೆ ಹಾಗೂ ಪರಿಸರ ಬೆಳವಣಿಗೆಯಲ್ಲಿ ನಿರ್ಲಕ್ಷೆ ವಹಿಸಿದರೆ ಮುಂದಿನ ಪೀಳಿಗೆ ಉಸಿರಾಡುವುದಕ್ಕೆ ಆಕ್ಸಿಜನ್ ಸಮಸ್ಯೆ ಎದುರಿಸಬೇಕಾಗುತ್ತೆ ಹಾಗೂ ಜೊತೆಗೆ ತಾಪಮಾನದಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಆಗಿವೆ ಎಂದರು.
ಮಾನವ ಪ್ರಕೃತಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ. ಇದು ಅಪಾಯಕಾರಿ ಹಾಗಾಗಿ ಸಾರ್ವಜನಿಕರು ನಿಮ್ಮ ಮನೆಯ ಮುಂದೆ ಹಾಗೂ ಶಾಲೆಯ ಆವರಣ ರಸ್ತೆಯ ಅಕ್ಕಪಕ್ಕದಲ್ಲಿ ಮರ ಹಾಗೂ ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರ ಹಾಗೂ ಸಮಾಜಕ್ಕೆ ಕೊಡುಗೆ ನೀಡಬೇಕು. ನಾವೆಲ್ಲರೂ ಕೂಡ ಪರಿಸರ ಬೆಳೆಸುವುದಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ಪಿ.ಎನ್.ಸಿ. ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುವುದರ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಲು  ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಿ.ಎನ್.ಸಿ ಕಂಪನಿಯ ಸತೀಶ್ ಡ್ಯಾನಿ ಮಾತನಾಡಿ, ರಸ್ತೆಯ ಇಕ್ಕಲೆಗಳಲ್ಲಿ  ಗಿಡ ಮರ ನೆಟ್ಟು ಶೃಂಗಾರಗೊಳಿಸಲಾಗುವುದು. ನಾನು ಉತ್ತರಕಾಂಡದಿಂದ ಬಂದವನು. ಅಲ್ಲಿ ದಟ್ಟ ಕಾಡಿದೆ. ಜನರಲ್ಲಿ  ಪ್ರಕೃತಿ ಅರಿವು ಮೂಡಿಸಲು ವರ್ಷದಲ್ಲಿ ಒಮ್ಮೆ ಹಸಿರನ ದಿನ ಆಚರಿಸುತ್ತೇವೆ. ಆ ದಿನದಂದು ಗಿಡಮರಗಳನ್ನು ನಡೆಲಾಗುವುದು. ಕೋವಿಡ್ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಆಕ್ಸಿಜನ್ ತರುವ ಕೆಲಸಮಾಡಲಾಯಿತು. ಪ್ರತಿ ರಾಜ್ಯವನ್ನು ಆಕ್ಸಿಜನ್ ಸ್ವಾವಲಂಬಿಯನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದರು.”
ಕಾರ್ಯಕ್ರಮದಲ್ಲಿ ಯು.ಆರ್.ಎಸ್. ಟೀಂ ಲೀಡರ್ ಜಿ.ಎಸ್ ಪ್ರಕಾಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಡೆಪ್ಯೂಟಿ ಮ್ಯಾನೇಜರ್ ರವಿತೇಜ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ಲಾಂಟೇಶನ್ ಅಧಿಕಾರಿ ವಿ.ಗಣೇಶ್, ಚಿನ್ಮೂಲಾದ್ರಿ ಲೋಟರಿ ಕ್ಲಬ್, ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು

[t4b-ticker]

You May Also Like

More From Author

+ There are no comments

Add yours