ನಾಡದೊರೆ ಮದಕರಿ ಉತ್ಸವಕ್ಕೆ ಎಲ್ಲಾರೂ ಬನ್ನಿ:ಬಿ.ಕಾಂತರಾಜ್

 

 

 

 

ಚಿತ್ರದುರ್ಗ : ನಾಡದೊರೆ ರಾಜವೀರ ಮದಕರಿನಾಯಕ  (Madakarinayaka) ಜಯಂತ್ಯೋತ್ಸವವನ್ನು ಶುಕ್ರವಾರ ಹಮ್ಮಿಕೊಂಡಿದ್ದು ನಮ್ಮ ಸಮಾಜದ ಬಂಧುಗಳು ಸೇರಿ ಎಲ್ಲಾ ಸಮಾಜದ ಬಂಧುಗಳು ಆಗಮಿಸುವ ಮೂಲಕ ಯಶಸ್ವಿಗೊಳಿಸಿ ಎಂದು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮದಕರಿ ನಾಯಕ ಜಯಂತ್ಯೋತ್ಸವ ಅಂಗವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಚಿತ್ರದುರ್ಗ ಆಳ್ವಿಕೆ ಮೂಲಕ ಸಮಾಜದ ಸುಧಾರಣೆ ಮೂಲಕ ಎಲ್ಲಾ ಸಮಾಜದ. ಹಿತ ಕಾಯುವ ಕೆಲಸ ಮದಕರಿನಾಯಕರು ಮಾಡಿದ್ದಾರೆ. ನಮ್ಮ ನಾಡದೊರೆ ರಾಜವೀರ ಮದಕರಿನಾಯಕ ಮದಕರಿ ಉತ್ಸವವನ್ನು ಇದೇ ಅಕ್ಟೋಬರ್ ೧೩ ರಂದು ಶುಕ್ರವಾರ ಕನಕ ವೃತ್ತದಿಂದ ೩ ಗಂಟೆಗೆ ಅದ್ದೂರಿಯಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಮತ್ತು ನಾಡಿನ ಎಲ್ಲಾ ಸಮಾಜದ ಬಂಧುಗಳು ಭಾಗವಹಿಸಲು ಮನವಿ ಮಾಡುತ್ತೇನೆ. ಮದಕರಿ ನಾಯಕರು ನಾಯಕ ಸಮಾಜಕ್ಕೆ ಮಾತ್ರ ಸೀಮಿತವಲ್ಲ ಎಲ್ಲಾ ಸಮಾಜದವರು ಸಹ ಮೆರವಣಿಗೆಯಲ್ಲಿ ಭಾಗವಹಿಸಿ ಎಂದರು. ಎಲ್ಲಾ ಸಮಾಜದವರಿಗೆ ಮಾಧ್ಯಮದ ಮೂಲಕ ಭಾಗವಹಿಸಲು ಕರೆ ನೀಡಿದ್ದು ಮುಖಂಡರು ಅಷ್ಟೆ ಅಲ್ಲದೇ ಆ ಸಮಾಜದ ಬಾಂಧವರನ್ನು ಕರೆ ತಂದು ಯಶಸ್ವಿಗೊಳಿಸಿದರೆ ಮದಕರಿನಾಯಕರ ಮೇಲಿನ ಅಭಿಮಾನ ಹಿಮ್ಮಡಿಗೊಳ್ಳತ್ತದೆ.

ನಮ್ಮನ್ನ ಕರೆಯಬೇಕಿತ್ತು ಎಂದು ಕೆಲವರು ಮಾಧ್ಯಮದರ ಮುಂದೆ ತಿಳಿಸಿದ್ದಾರೆ ಎಂದು ತಿಳಿದಿದ್ದು ಮದಕರಿನಾಯಕರು ಜಯಂತಿಗೆ ಎಲ್ಲಾರಿಗೂ ಆಹ್ವಾನವಿದೆ.ಈ ಮೊದಲು ಮಾಡಿದ ಸುದ್ದಿಗೋಷ್ಠಿಯಲ್ಲಿ ನಾನು ತಿಳಿಸಿದ್ದೆ ಎಲ್ಲಾ ಸಮಾಜಕ್ಕೂ ಮದಕರಿನಾಯಕ ಕೊಡುಗೆ ಇದೆ ಎಲ್ಲಾರೂ ಭಾಗವಹಿಸಿ ಎಂದು ಮನವಿ ಮಾಡಿದ್ದೆ ಈಗ ನಮ್ಮನ್ನ ಕರೆದಿಲ್ಲ ಎಂಬುದು ಸರಿಯಲ್ಲ. ಇದು ನಮ್ಮ ಮನೆ ಕಾರ್ಯಕ್ರಮವಲ್ಲ ಎಂದು ಮುಖಂಡರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ಬೆಳೆಗಾರರಿಂದ ಅರ್ಜಿ

 

 

ರಾಜವೀರ ಮದಕರಿನಾಯಕರನ್ನು ವರ್ಷದಲ್ಲಿ ಮೂರು ಬಾರಿ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಪಟ್ಟಕ್ಕೆ ಹೇರಿದ ದಿನ, ಮದಕರಿನಾಯಕ ಸ್ಮರಣೋತ್ಸವ, ಮದಕರಿ ಉತ್ಸವ ಎಂಬ ಹೆಸರಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.

ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಉದ್ಘಾಟನೆ ಮಾಡುವರು, ಶಾಸಕರಾದ ಟಿ.ರಘುಮೂರ್ತಿ, ಗೋಪಾಲಕೃಷ್ಣ, ಗೋವಿಂದಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಚಂದ್ರಪ್ಪ, ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಭಾಗವಹಿಸುವರು.

ಮದಕರಿನಾಯಕ ಪ್ರತಿಮೆಯನ್ನು ಹೂ ಮತ್ತು ಲೈಟ್ ಗಳ ಮೂಲಕ ವಿಶೇಷವಾಗಿ ಅಲಂಕಾರ ಮಾಡಲಾಗಿರುತ್ತದೆ. ಎಲ್ಲಾ ಪುತ್ಥಳಿಗಳನ್ನು ಸಹ ಅಲಂಕಾರ ಮಾಡಲಾಗಿರುತ್ತದೆ.ಯುವ ಸಮೂಹಕ್ಕೆ ತಕ್ಕಂತೆ ಮೆರವಣಿಗೆ ಮಾಡಲಾಗುತ್ತಿದ್ದು ನಿಮ್ಮ ಮನೆ ಕಾರ್ಯಕ್ರಮದಂತೆ ಭಾಗವಹಿಸೋಣ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನ ಮದಕರಿ ನಾಯಕರ ಭಾವಚಿತ್ರ ಬಿಡುಗಡೆಗೊಳಿಸಿದರು.
ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ, ಗೋಪಾಲಸ್ವಾಮಿ ನಾಯಕ್, ಕಾಟೀಹಳ್ಳಿ ಕರಿಯಪ್ಪ, ಸೋಮೇಂದ್ರ, ಕೇಶವಮೂರ್ತಿ ಇದ್ದರು.

 

[t4b-ticker]

You May Also Like

More From Author

+ There are no comments

Add yours