ಪ್ರತಿಯೊಬ್ಬ ಕನ್ನಡಿಗ ಕನ್ನಡವನ್ನ ಉಳಿಸಿ ಬೆಳೆಸಲು ಪಣತೊಡಬೇಕು: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ನಾಯಕನಹಟ್ಟಿ ::ಪ್ರತಿಯೊಬ್ಬ ಕನ್ನಡಿಗ ಕನ್ನಡವನ್ನು ಉಳಿಸಿ ಬೆಳೆಸಲು ಪಣತೊಡಬೇಕು ಎಂದು ತಹಶಿಲ್ದಾರು ಎನ್ ರಘುಮೂರ್ತಿ ಹೇಳಿದ್ದಾರೆ.

ಅವರು ಸೋಮವಾರ ಪಟ್ಟಣದ ಪಾದಗಟ್ಟೆಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ನೆರವೇರಿಸಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ್ದಾರೆ.
ಕನ್ನಡ ನಮ್ಮೆಲ್ಲರ ಆಸ್ತಿ ಕನ್ನಡ ಮತ್ತೊಬ್ಬರಿಂದ ನಾವು ಕನ್ನಡ ಉಳಿಸಲು ಪ್ರೇರಣೆ ಆಗಬಾರದು ಭಕ್ತಿಯಿಂದ ತಾಯಿ ಭುವನೇಶ್ವರಿಗೆ ನಮನವನ್ನು ಸಲ್ಲಿಸಬೇಕು ನಮ್ಮ ಚಳ್ಳಕೆರೆ ತಾಲೂಕಿನಲ್ಲಿ ಕನ್ನಡಕ್ಕಾಗಿ ದುಡಿದ ಅನೇಕ ಮುತ್ಸದಿಗಳು ಹಿರಿಯರು ಸಾಹಿತಿಗಳು ಕನ್ನಡಪರ ಹೋರಾಟಗಳು ಕನ್ನಡವನ್ನು ಉಳಿಸಿ ಬೆಳೆಸಲು ಮುಂದಾಗಿವೆ ತಳಕಿನ ತ .ರಾ. ಸು. ರವರ ಸೇರಿದಂತೆ ತಾಯಿಯಂತೆ ಕನ್ನಡವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ತಿಳಿಸಿದರು.

 

 

ಈ ವೇಳೆ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿ ಮಾತನಾಡಿ ಕನ್ನಡ ನಾಡು ನುಡಿ ಸಂರಕ್ಷಣೆಗೆ ನಾವೆಲ್ಲ ಬದ್ಧರಾಗಿರಬೇಕು ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಹೆಚ್ಚಿನ ಆದ್ಯತೆ ನೀಡಲು ತಿಳಿಸಬೇಕು ಕನ್ನಡವನ್ನು ತಾಯಿಯಂತೆ ಪ್ರೀತಿಸಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿ ತಿಳಿಸಿದ್ದಾರೆ.

ನಂತರ ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಕನ್ನಡ ಭಾಷೆಯು ಅನ್ಯ ಭಾಷೆಗಳಿಗಿಂತ ಶ್ರೇಷ್ಠವಾದ ಭಾಷೆಯಾಗಿ ಹೊರಹೊಮ್ಮಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡ ಕೀರ್ತಿ ಸಲ್ಲುತ್ತದೆ ಕನ್ನಡ ಭಾಷೆಯನ್ನು ನಾವೆಲ್ಲರೂ ಎತ್ತ ತಾಯಿಯಂತೆ ಪ್ರೀತಿಸಿ ಉಳಿಸಿ ಬೆಳೆಸಬೇಕು ಎಂದು ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಸಾರ್ವಜನಿಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೋಬಳಿ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಜಿ ಬಿ ಮುದಿಯಪ್ಪ, ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಅಧ್ಯಕ್ಷರಾದ ಬಿ ಟಿ ಪ್ರಕಾಶ್, ಸುಚೇತಾ ವಾಲ್ಮೀಕಿ ಮಹಿಳಾ ಸಂಘದ ಸದಸ್ಯ ತಿಪ್ಪಮ್ಮ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಮಂಜುನಾಥ್, ಹೋಬಳಿ ಅಧ್ಯಕ್ಷರಾದ ಬಿ ತಿಪ್ಪೇಸ್ವಾಮಿ, ಗೌರವಾಧ್ಯಕ್ಷರಾದ ಜಾಗನೂರಹಟ್ಟಿ ಮುತ್ತಯ್ಯ, ನಗರ ಘಟಕ ಅಧ್ಯಕ್ಷರಾದ ಎಸ್ ಕಾಟಯ್ಯ,
ಯುವ ಘಟಕ ಅಧ್ಯಕ್ಷರಾದ ಎನ್ ಸುರೇಶ್, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷರು ಬೋರೆಯ್ಯ, ಸಹ ಕಾರ್ಯದರ್ಶಿ ರುದ್ರಮುನಿ, ಸಹ ಕಾರ್ಯದರ್ಶಿ ಮಧು ,ನಾಗರಾಜ್, ಮನೋಜ್, ಶಿವರಾಜ್, ತಿಪ್ಪೇಸ್ವಾಮಿ ಮಂಜುನಾಥ್ ,ಸ್ವಾಮಿ, ಶಿವರಾಜ್, ಗಡ್ಡಯ್ಯ, ಹೊನ್ನೂರಪ್ಪ,ಯರ್ರಯ್ಯ, ಗೌರವಾನ್ವಿತ ಅಧ್ಯಕ್ಷ ಶಿವ ತಿಪ್ಪೇಸ್ವಾಮಿ ಗುಂತಕೋಲಮ್ಮನಹಳ್ಳಿ, ಜಿ ಟಿ ತಿಪ್ಪೇಸ್ವಾಮಿ ಗೌಡಗೆರೆ, ಶಿವರಾಜ್ ಚೌಳಕೆರೆ, ಸೇರಿದಂತೆ ಮುಂತಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours