ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ‌ ಹೆಚ್ಚಿಸುವ ಮೂಲಕ‌ ಜನಾಂಗದ ಅಭಿವೃದ್ಧಿ: ಸಚಿವ ಬಿ.ಶ್ರೀರಾಮುಲು

 

 

 

 

ಚಳ್ಳಕೆರೆ-23 ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ‌ ಹೆಚ್ಚಿಸುವ ಮೂಲಕ‌ ಜನಾಮಗದ ಅಭಿವೃದ್ಧಿ ಪಣತೊಟ್ಟಿದೆ ಎಂದು ಸಾರಿಗೆ ಸಚಿವ, ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.

 

 

ಅವರು, ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ನೂತನ ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ಬುವುದಕ್ಕೆ ಇದೊಂದು ಸಾಕ್ಷಿಯಾಗಿದೆ. ಹೇಳಿದಂತೆ ಎಸ್ಟಿ, ಎಸ್ಸಿ ಸಮುದಾಯಗಳಿಗೆ ಮೀಸಲಾತಿ ನೀಡಲಿದೆ ಎಂದು ನಾನು ಕಳೆದ ವರ್ಷಗಳಿಂದ ಹೇಳಿಕೊಂಡು ಬಂದಿದೆ. ಆದರೆ ಕೆಲ ಪಕ್ಷದ ಮುಖಂಡರು ಗೇಲಿ ಮಾಡಿದವರಿಗೆ ಬಾಯಿಮುಚ್ವಿಸಿದೆ.
ದೊಡ್ಡ ಉಳ್ಳಾ ರ್ತಿಯಲ್ಲಿ 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮಕ್ಕಳು ಶಿಕ್ಷಣ ದಲ್ಲಿ ಮುಂದೆ ಬರಬೇಕು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತ ಮಕ್ಕಳು ಅತಿ ಹೆಚ್ಚ ಅಂಕ ಪಡೆಯುವತ್ತ ಮುಂದಾಗಬೇಕು. ಮಿಸಲಾತಿ ವಿಚಾರದಲ್ಲಿ ನಾನು ಎಂದು ಹಿಂದೆ ಸರಿದಿಲ್ಲಾ ರಾಮುಲು ಕೊಟ್ಟ ಮಾತು ಯಾರೆ ಏನೆ ಹೇಳಿದರು ಒಂದಿಂಚ್ಚು ಹಿಂದೆ ಬಂದಿಲ್ಲಾ. ನಾವು ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಗಳು ಮಿಸಲಾತಿಗೆ ಅಸ್ತು ಎಂದಿದ್ದಾರೆ. ಈ ಕ್ಷೇತ್ರದಿಂದ ಸಾಕಷ್ಟು ಜನ ಗೆದ್ದು ಬಂದಿದ್ದರು ಆದರೆ ಇದುವವರೆಗೂ ಯಾರು ಮೀಸಲಾತಿ ಬಗ್ಗೆ ಧ್ವನಿ ಎತ್ತಿರಲಿಲ್ಲ. ಧ್ವನಿ ಎತ್ತಿದೆ ಮೀಸಲಾತಿಗಾಗಿ ಹೋರಾಟ ಮಾಡಿದ‌ಫಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಇ.ರಾಮರೆಡ್ಡಿ, ಜಯಪಾಲಯ್ಯ, ತಿಪ್ಪೇಸ್ವಾಮಿ, ಪ್ರಕಾಶ್, ಗೋವಿಂದಪ್ಪ, ತಹಶೀಲ್ದಾರ್ ಎನ್.ರಘುಮೂರ್ತಿ, ಪಾಪೇಶ್ ನಾಯಕ, ಮಂಜುನಾಥ, ಸುರೇಶ್, ಸುರೇಂದ್ರ, ಪಾಲಯ್ಯ, ಗೋಪಾಲ ಮುಂತಾದವರು ಇದ್ದರು.ರಸ್ತೆ

[t4b-ticker]

You May Also Like

More From Author

+ There are no comments

Add yours