ಅಂಗದ ಮೇಲೆ ಲಿಂಗ ಇರುವ ಭಕ್ತರಿಗೆ ದೇವಾಲಯ ಅವಶ್ಯಕತೆ ಇಲ್ಲ: ಶಿಮುಶಿ

 

 

 

 

ಚಿತ್ರದುರ್ಗ: ಅಂಗದ ಮೇಲೆ ಲಿಂಗ ಇರುವಂತಹ ಭಕ್ತರಿಗೆ ದೇವಾಲಯದ ಅವಶ್ಯಕತೆ ಇಲ್ಲ. ಆತನೇ ನಡೆದಾಡುವ ದೇವಾಲಯ ಆಗುತ್ತಾರೆ. ಆದರೆ ಅಂಗದ ಮೇಲೆ ಲಿಂಗ ಇಲ್ಲದಂತಹ ಭಕ್ತನಿಗೆ ದೇವಾಲಯ ಅವಶ್ಯಕತೆ ಇದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ನಗರದ ಶ್ರೀನೀಲಕಂಠೇಶ್ವರ ದೇವಾಲಯದ ಗರ್ಭಗುಡಿಗೆ ನೂತನವಾಗಿ ನಿರ್ಮಾಣ ಮಾಡಿದ ಬೆಳ್ಳಿ ಕವಚದ ಬಾಗಿಲನ್ನು ಉದ್ಘಾಟಿಸಿ ಮಾತನಾಡಿದ ಶ್ರೀಶರಣರು, ಭಾರತದ ಸಂಸ್ಕೃತಿಯಲ್ಲಿ ಹಲವಾರು ಪರಂಪರೆಯನ್ನು ಹೊಂದಿದ್ದು, ಶಿವ ಆರಾಧಕರು ವಿವಿಧ ಹೆಸರುಗಳಲ್ಲಿ ಆತನ ಸ್ಮರಣೆಯನ್ನು ಮಾಡುವುದರ ಮೂಲಕ ನಾಳಿನ ಶಿವರಾತ್ರಿ ಆಚರಣೆ ಮಾಡುತ್ತಿದ್ದಾರೆ. ೧೨ನೇ ಶತಮಾನದಲ್ಲಿ ಇದ್ದಂತಹ ಜಡ ಸಂಸ್ಕೃತಿಯಿಂದ ಶರಣ ಸಂಸ್ಕೃತಿಯ ಕಡೆಗೆ ಸಮಾಜವನ್ನು ಕರೆತರುವ ಕಾರ್ಯವನ್ನು ಹಲವಾರು ಶರಣರು ಮಾಡಿದ್ದಾರೆ ಎಂದರು.

 

 

ಮಾನವರಿಗೆ ಸಂಸ್ಕ್ರತಿ ಮತ್ತು ಸಂಸ್ಕಾರ ನೀಡಲು ಮಠಗಳ ಅವಶ್ಯಕತೆ ಇದೆ ಶಿವರಾತ್ರಿ ಆಚರಣೆ ಕೇವಲ ಒಂದು ದಿನದ ಆಚರಣೆಯಾಗದೆ ಶಿವ ಆಚರಣೆ ನಿರಂತರವಾಗಿರಬೇಕು ಎಂದು ಹೇಳಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ದಿನ ಇದಾಗಿದೆ ಎಂದ ಶರಣರು, ಪೌರಾಣಿಕವಾಗಿ ಶಿವ ವಿವಿಧ ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ. ದೇವಾಲಯ ಸಂಸ್ಕೃತಿಯಿಂದ ದಿವಾಲಯ ಸಂಸ್ಕೃತಿಯ ಕಡೆಗೆ ಕರೆದುಕೊಂಡು ಬಂದಿದ್ದಾರೆ ಎಂದರು.

ಧಾನ್ಯ, ಧಾರ್ಮಿಕ, ಆದ್ಯಾತ್ಮಿಕ, ಸಹಜ ಶಿವಯೋಗದ ಪ್ರಜ್ಞೆಯ ಜೊತೆಯಲ್ಲಿ ಸಾಗುವುದಾದರೆ ಶಿವನು ನಮ್ಮಲ್ಲಿಯೇ ಇರುತ್ತಾನೆ, ಅಂತರಂಗದಲ್ಲಿ ಶಿವತ್ವ, ದ್ಥವತ್ವವನ್ನು ಆನುಭವಿಸುವುದಿಲ್ಲ ಸವತ್ವ ಶರಣತ್ವ ಅಂತರಲ್ಲಿ ಇರುದಾದರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿದೆ ಇಲ್ಲದವರು ಅನಾಹುತಕ್ಕೆ ದಾರಿಯನ್ನು ಮಾಡಿಕೊಳ್ಳುತ್ತಾರೆ, ಇಷ್ಟ ಲಿಂಗದ ಪರಿಕಲ್ಪನೆ, ಸಾಕ್ಷಿ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಶರಣರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರಿ, ವೀರಶೈವ ಸಮಾಜದ ಅಧ್ಯಕ್ಷ ಜಯ್ಯಣ್ಣ, ಕಾರ್ಯದರ್ಶಿ ಪಟೇಲ್ ಶಿವಕುಮಾರ್, ಉಪಾಧ್ಯಕ್ಷ ರಾಜಪ್ಪ, ಸೋನಿ ಸಮಾಜದ ಭವನ್‌ಲಾಲ್, ಸೇರಿದಂತೆ ಇತರರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours